Namma Metro: ಕಾಮಗಾರಿ ವೇಳೆ ಪಿಲ್ಲರ್ ಕುಸಿತ, ಮೂವರಿಗೆ ಗಂಭೀರ ಗಾಯ

ಬೆಂಗಳೂರು, ಜನವರಿ 10: ಬೆಂಗಳೂರು ಹೆಣ್ಣೂರು ರಸ್ತೆಯಲ್ಲಿ ನೂತನ ಮೆಟ್ರೋ ಮಾರ್ಗದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಬಿದ್ದು ಅವಘಢ ಮಂಗಳವಾ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ವರದಿಯಾಗಿದೆ.

ಮೆಟ್ರೋ ಹಂತದ 2 ಬಿ ಕಾಮಗಾರಿಯು ಹೆಣ್ಣೂರು ಮುಖ್ಯ ರಸ್ತೆ ಎಚ್‌ಬಿಆರ್‌ ಲೇಔಟ್‌ ಬಳಿ ನಡೆಯುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣವರೆಗೆ ನಡೆಯುತ್ತಿರುವ ಈ ಕಾಮಗಾರಿ ಪ್ರಗತಿಯಲ್ಲಿತ್ತು. ಈ ವೇಳೆ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕೆ ಕಬ್ಬಿಣದ ಸರಳುಗಳನ್ನು ಜೋಡಿಸಲಾಗಿತ್ತು. ಈ ಕಬ್ಬಿಣದ ಪಿಲ್ಲರ್ ಕಾಂಕ್ರೀಟ್ ಹಾಕುವುದು ಬಾಕಿ ಇತ್ತು. ಅಷ್ಟರಲ್ಲಾಗಲೇ ಎತ್ತರದ ಕಬ್ಬಿಣ ಸರಳುಗಳು ಮುಖ್ಯ ರಸ್ತೆಗೆ ಬಿದ್ದ ಘಟನೆ ನಡೆದಿದೆ.

ಘಟನೆಯಿಂದಾಗಿ ರಸ್ತೆಯಲ್ಲಿ ಸಾಗುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸುತ್ತಲೂ ಮೆಟ್ರೋ ಬ್ಯಾರಿಕೇಡ್ ಹಾಕಲಾಗಿದೆ. ಅದರ ಪಕ್ಕದಲ್ಲೆ ನಿತ್ಯ ಸಾವಿರಾರು ವಾಹನಗಳು, ಸಾರ್ವಜನಿಕರು ಸಂಚಾರ ನಡೆಸುತ್ತಿದ್ದರು. ರಾಜ್ಯ ರಾಜಧಾನಿಯ ಮೆಟ್ರೋ ಕಾಮಗಾರಿಯಲ್ಲಿ ಕಾಂಕ್ರೀಟ್‌ ಹಾಕುವುದಕ್ಕು ಮುನ್ನ ಕಬ್ಬಿಣದ ಪಿಲ್ಲರ್ ಉರುಳಿ ಬಿದ್ದಿರುವುದು ಇದೇ ಮೊದಲು ಎನ್ನಬಹುದು.

 BMRCL under construction pillar collapse near HBR Layout in Hennur, 3 Injured

ಈ ಘಟನೆಯಿಂದ ಮೆಟ್ರೋ ಕಾಮಗಾರಿ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಂಪನಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಿರ್ಮಾಣಕ್ಕೂ ಮೊದಲೇ ಪಿಲ್ಲರ್ ಉರುಳಿ ಬಿದ್ದಿರುವುದು ಕಾಮಗಾರಿ ಗುಣಮಟ್ಟದ ಬಗ್ಗೆ ಅನುಮಾನ ಮೂಡುವಂತೆಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+