Namma Metro Luggage Fare: ಮೆಟ್ರೋ ಪ್ರಯಾಣಿಕರಿಗೆ ಲಗೇಜ್ ಶುಲ್ಕ ಹೇರಿದ BMRCL

ಬೆಂಗಳೂರು, ಆಗಸ್ಟ್ 20: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಾಗುತ್ತಿದ್ದಂತೆ ಮೆಟ್ರೋ ಸಾರಿಗೆಯಿಂದ ವಿಮುಖರಾಗಿದ್ದ ಜನರು ಹಳದಿ ಮಾರ್ಗ ತೆರೆಯುತ್ತಿದ್ದಂತೆ ಮತ್ತೆ ಆಕರ್ಷಿತರಾದರು. ಈಗಾಗಲೇ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ಇದೀಗ ಗಾಯದ ಮೇಲೆ ಬರೆ ಎಂಬಂತೆ ಟಿಕೆಟ್ ದರ ಹೆಚ್ಚಿಸಿದ BMRCL ಪ್ರಯಾಣಿಕರ ಲಗೇಜ್ ಮೇಲೆ ಶುಲ್ಕ ಹೇರಿದೆ ಎಂದು ಪ್ರಯಾಣಿಕರು ಮಾಹಿತಿ ಹಂಚಿಕೊಂಡಿದ್ದಾರೆ.

ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದ ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಲಗೇಜ್ ಮೇಲೆ ಶುಲ್ಕ ವಿಧಿಸಲಾಗಿದೆ. ಇದಿನ್ನು ಆ ರಾಜ್ಯಕ್ಕೆ ಸಿಮೀತವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ಕಾಲಿಡಬಹುದು. ದುಬಾರಿ ದಿನಮಾನಗಳಲ್ಲಿ ಜೀವಿಸುತ್ತಿರುವ ಜನ ಸಾಮಾನ್ಯರಿಗೆ ನಿತ್ಯ ಒಂದಿಲ್ಲೊಂದು ದರ ಏರಿಕೆ ಬಿಸಿ ತಟ್ಟುತ್ತಿದೆ. ಇದೀಗ ಬೆಂಗಳೂರು ಮೆಟ್ರೋಗಳಲ್ಲಿ ಓಡಾಡುವ ಪ್ರಯಾಣಿಕರ ಲಗೇಜ್ ಗಳಿಗೆ ಶುಲ್ಕ ವಿಧಿಸಿದೆ. ಆದರೆ ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ನೀಡಿಲ್ಲ. ಪ್ರಯಾಣಿಕರು ಫೋಟೋ ಸಮೇತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

BMRCL Plans to Impose Rs 30 Luggage Fare on Namma Metro Passengers implement soon

ಆರ್‌ವಿ.ರಸ್ತೆ-ಬೊಮ್ಮಸಂದ್ರ ಮೆಟ್ರೋ ಹಳದಿ ಮಾರ್ಗ ಓಪನ್ ಆಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ವ್ಯಾಪಕವಾಗಿ ಹೆಚ್ಚಾಗಿತ್ತು. ಈ ಖುಷಿಯ ಮಧ್ಯೆ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಆಘಾತ ನೀಡಲು ಸಜ್ಜಾಗಿದೆ. ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡುವಾಗ ಬ್ಯಾಗ್‌ಗಳಿಗೂ ಟಿಕೆಟ್ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾದರೆ ಲಗೇಜ್ ಟಿಕೆಟ್ ಶುಲ್ಕ ಎಷ್ಟು?

ಮೆಟ್ರೋ ಲಗೇಜ್ ಶುಲ್ಕ ಬರೆ: ಜನಾಕ್ರೋಶ

ಬೆಂಗಳೂರು ವಾಸಕ್ಕೆ ಯೋಗ್ಯ ನಗರವೆನ್ನಿಸಿಕೊಂಡರು, ಎಲ್ಲ ಭಾಷಿಗರಿಗೆ ಬದುಕು ಕಟ್ಟಿಕೊಟ್ಟರು ಸಹಿತ ಅತ್ಯಂತ ದುಬಾರಿ ನಗರ ಅಂತಲೂ ಕರೆಸಿಕೊಂಡಿದೆ. ಇಲ್ಲಿ ವಾಸಿಸಬೇಕಾದರೆ ಎಷ್ಟು ಹಣವಿದ್ದರು ಸಾಲದು ಎಂದು ಮಧ್ಯಮ ವರ್ಗದವರು ಹೇಳುತ್ತಾರೆ. ಅಂತವರಿಗೆ ನಮ್ಮ ಮೆಟ್ರೋ ಲಗೇಜ್ ಶುಲ್ಕ ಬರೆ ನೀಡಲು ಮುಂದಾಗಿಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಬೇರೆ ಯಾವ ಮೆಟ್ರೋ ನಗರದಲ್ಲಿ ಇಷ್ಟೊಂದು ಮಟ್ಟದಲ್ಲಿ ಟಿಕೆಟ್ ದರ ಇಲ್ಲ. ಅಷ್ಟರ ಮಟ್ಟಿಗೆ ದರ ಹೆಚ್ಚಿಸಿರುವ BMRCL ಇದೀಗ ಮೆಟ್ರೋ ರೈಲಿನಲ್ಲಿ ನಿಗದಿತ ಮಿತಿಗಿಂತಲೂ ಹೆಚ್ಚಿನ ತೂಕದ ಬ್ಯಾಗ್ ಸಹಿತ ಪ್ರಯಾಣಿಸಲು ಟಿಕೆಟ್ ಜೊತೆಗೆ 30 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಲಿದೆ. ಇದು ಪ್ರಯಾಣಿಕರಗೆ ಮತ್ತಷ್ಟು ಆರ್ಥಿಕ ಹೊರೆ ಉಂಟಾಗಿದೆ ಎಂಬ ಚರ್ಚೆಗಳು ಶುರುವಾಗಿವೆ.

ಲಗೇಜ್ ತೂಕ ಮಿತಿ, ಶುಲ್ಕ ವಿವರ

ಮೆಟ್ರೋದಲ್ಲಿ 15 ಕೆ.ಜಿ. ಬ್ಯಾಗ್ ಉಚಿತವಾಗಿ ಒಯ್ಯಬಹುದಾಗಿದೆ.ಅದಕ್ಕಿಂತ ಹೆಚ್ಚು ತೂಕದ ಬ್ಯಾಗ್, (ಲಗೇಜ್) ಹೆಚ್ಚುವರಿ ಲಗೇಜ್ ಒಯ್ಯುವವರು ಟಿಕೆಟ್ ಕೌಂಟರ್‌ನಲ್ಲಿ 30 ರೂಪಾಯಿ ಕೊಟ್ಟು ಲಗೇಜ್ ಟಿಕೆಟ್ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಒಂದು ವೇಳೆ ನೀವು ಲಗೇಜ್ ಟಿಕೆಟ್ ಪಡೆಯದೇ ಹಾಗೇ ಹೋದಲ್ಲಿ ನಿಮಗೆ ಸುಮಾರು 250 ರೂಪಾಯಿ ದಂಡ ವಿಧಿಸಬಹುದು.

ಶೀಘ್ರವೇ ಹೆಚ್ಚುವರಿ ರೈಲು ಸಂಚಾರ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೊದಲ ದಿನ (ಆಗಸ್ಟ್ 11) ಸುಮಾರು 52,000ಕ್ಕೂ ಅಧಿಕ ಜನ ಪ್ರಯಾಣ ಮಾಡಿದ್ದಾರೆ. ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ, ನೇರಳೆ ಮಾರ್ಗ ಹಾಗೂ ಹಸಿರು ಮಾರ್ಗದಲ್ಲಿ ಒಂದೇ ದಿನ 10.48 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಆದಷ್ಟು ಶೀಘ್ರವೇ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು ಸಂಚಾರ ಮಾಡಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+