Get Updates
Get notified of breaking news, exclusive insights, and must-see stories!

Namma Metro: 11 ಮಹಡಿ ಬೃಹತ್ ಕಟ್ಟಡ ನಿರ್ಮಿಸಲಿದೆ ಬಿಎಂಆರ್‌ಸಿಎಲ್‌

ಬೆಂಗಳೂರು, ಮಾರ್ಚ್ 24: ಟಿಕೆಟ್ ರಹಿತ ಆದಾಯ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ನಿರ್ವಹಣಾ ವೆಚ್ಚ ಅಧಿಕವಾಗಿದೆ ಎಂದು 2017ರ ಬಳಿಕ ಮೊದಲ ಬಾರಿಗೆ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿದೆ. ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಆದರೆ ಇದಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಬಿಎಂಆರ್‌ಸಿಎಲ್ ಬೃಹತ್ ಪಾರ್ಕಿಂಗ್ ಲಾಟ್ ಮತ್ತು ವಾಣಿಜ್ಯ ಸಂಕೀರ್ಣದ ಮೂಲಕ ಆದಾಯಗಳಿಸುವ ಯೋಜನೆಯನ್ನು ತಯಾರು ಮಾಡಿದೆ.

ಹಳೆ ಮದ್ರಾಸ್ ರಸ್ತೆ ಮತ್ತು ಹೊರ ವರ್ತುಲ ರಸ್ತೆಯಲ್ಲಿ ಬಿಎಂಆರ್‌ಸಿಎಲ್ ಜಾಗವಿದೆ. ಈ ಜಾಗದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಮಾಡಿಕೊಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಕೆಆರ್ ಪುರ ರೈಲು ನಿಲ್ದಾಣದ ಸಮೀಪ 11 ಮಹಡಿಯ ಬೃಹತ್ ಪಾರ್ಕಿಂಗ್ ಲಾಟ್ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ.

BMRCL Non Fare Revenue Plan For 11 Storey Parking Commercial Hub KR Puram

11 ಮಹಡಿಗಳ ಪೈಕಿ 1 ಮತ್ತು 2ನೇ ಮಹಡಿಯನ್ನು ವಾಹನಗಳ ಪಾರ್ಕಿಂಗ್‌ಗೆ ಮೀಸಲಿಡಲಾಗುತ್ತದೆ. ಉಳಿದ ಮಹಡಿಗಳಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಬಾಡಿಗೆ ಆಧಾರದ ಮೇಲೆ ಆದಾಯ ಸಂಗ್ರಹಕ್ಕೆ ಬಳಕೆ ಮಾಡಿ ಕೊಳ್ಳಲಾಗುತ್ತದೆ. ಈ ಯೋಜನೆ ಇನ್ನೂ ಸಹ ಪ್ರಾಥಮಿಕ ಹಂತದಲ್ಲಿದೆ.

ಪಿಪಿಪಿ ಮಾದರಿಯಲ್ಲಿ ನಿರ್ಮಾಣ: ಪಾರ್ಕಿಂಗ್ ಲಾಟ್, ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ 30 ವರ್ಷಗಳ ಅವಧಿಗೆ ನಿರ್ವಹಣೆ ಆಧಾರದಲ್ಲಿ ನಿರ್ಮಾಣ ಮಾಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ನೇರಳೆ ಮತ್ತು ನೀಲಿ ನಮ್ಮ ಮೆಟ್ರೋ ಇಂಟರ್‌ ಚೇಂಜ್ ನಿಲ್ದಾಣದ 50 ಮೀಟರ್ ದೂರದಲ್ಲಿ ಈ ಬೃಹತ್ ಕಟ್ಟಡ ನಿರ್ಮಾಣವಾಗಲಿದೆ.

ಎಲ್ಲಾ ಮಾದರಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಉಳಿದ ಜಾಗದಲ್ಲಿ ಶಾಪಿಂಗ್ ಮಾಲ್, ಕಚೇರಿಗಳು, ಹೋಟೆಲ್‌ಗಳಿಗೆ ಸ್ಥಳ ನಿರ್ಮಾಣ ಮಾಡಲಾಗುತ್ತದೆ. ಇದರಿಂದಾಗಿ ಸುಮಾರು 10 ಕೋಟಿ ರೂ. ಟಿಕೆಟ್ ರಹಿತ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.

ಈ ಮಾದರಿ ಯೋಜನೆಯ ಪ್ರಸ್ತಾವನೆ ಸಲ್ಲಿಕೆ ಮಾಡಲು ಕೆಲವು ದಿನಗಳ ಹಿಂದೆ ಟೆಂಡರ್ ಕರೆಯಲಾಗಿದೆ. ಅಲ್ಲದೇ ಟೆಂಡರ್ ಸಲ್ಲಿಕೆ ಮಾಡಲು ಮೇ 13 ಕೊನೆಯ ದಿನವಾಗಿದೆ. ಕಂಪನಿ ಯೋಜನೆಯನ್ನು ವಿನ್ಯಾಸ ಮಾಡಿ, ನಿರ್ಮಾಣ ಮಾಡಿ, ನಿರ್ವಹಣೆ ಮಾಡುವ ಒಪ್ಪಂದದ ಆಧಾರದ ಮೇಲೆ ಕಾರ್ಯ ನಿರ್ವಹಣೆ ಮಾಡಬೇಕಿದೆ.

ಯೋಜನೆ ನಿರ್ಮಾಣಕ್ಕೆ 2 ವರ್ಷಗಳು, ನಿರ್ವಹಣೆಯ ಗುತ್ತಿಗೆಯನ್ನು 30 ವರ್ಷಗಳ ಅವಧಿಗೆ ನೀಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. 2027ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಆ ವೇಳೆಗೆ ನಮ್ಮ ಮೆಟ್ರೋ ನೀಲಿ ಮಾರ್ಗ (ಸಿಲ್ಕ್‌ ಬೋರ್ಡ್-ಕೆಆರ್‌ ಪುರ-ವಿಮಾನ ನಿಲ್ದಾಣ) ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ನಮ್ಮ ಮೆಟ್ರೋ ಆದಾಯ ಸಂಗ್ರಹಕ್ಕಾಗಿ ವಾಣಿಜ್ಯ ಚಟುವಟಿಕೆ ಕೈಗೊಳ್ಳಲು ಕರೆದ 2ನೇ ಟೆಂಡರ್ ಇದಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಿಎಂಆರ್‌ಸಿಎಲ್‌ ಇದೇ ಮಾದರಿಯ ವಾಣಿಜ್ಯ ಚಟುವಟಿಕೆಯನ್ನು ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕೈಗೊಳ್ಳಲು ಟೆಂಡರ್ ಕರೆದಿತ್ತು. ಮೆಜೆಸ್ಟಿಕ್‌ನಲ್ಲಿ ಹೋಟೆಲ್, ಕಛೇರಿ, ರಿಟೆಲ್ ಶಾಪ್ ನಿರ್ಮಾಣ ಮಾಡುವ ಪ್ರಸ್ತಾವನೆ ಇದೆ.

ಮೆಜೆಸ್ಟಿಕ್‌ನಲ್ಲಿ ಸದ್ಯ 260 ಬೈಕ್, 36 ಕಾರು ನಿಲ್ಲಿಸುವ ಪಾರ್ಕಿಂಗ್ ಲಾಟ್ ಇದೆ. ಕೆಆರ್ ಪುರದಲ್ಲಿ ಇದಕ್ಕಿಂತ ದೊಡ್ಡ ಲಾಟ್ ನಿರ್ಮಾಣವಾಗಲಿದೆ. ಇಲ್ಲಿ 530 ಬೈಕ್‌ಗಳನ್ನು ನಿಲ್ಲಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕಾರುಗಳ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆಯೇ? ಎಂಬುದು ಖಚಿತವಾಗಿಲ್ಲ.

ವರ್ಷಕ್ಕೆ ಜಾಹೀರಾತು, ವಾಣಿಜ್ಯ ಚಟುವಟಿಕೆ ಮೂಲಕ 100 ಕೋಟಿ ರೂ. ಆದಾಯ ಸಂಗ್ರಹ ಮಾಡುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ನಮ್ಮ ಮೆಟ್ರೋ ದರ ಏರಿಕೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಟಿಕೆಟ್ ರಹಿತ ಆದಾಯ ಸಂಗ್ರಹ ನಮ್ಮ ಮೆಟ್ರೋಗೆ ಅನಿವಾರ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+