KR Puram-KIA Metro Line: ಗಡುವಿನೊಳಗೆ ಕಾಮಗಾರಿ ಮುಗಿಸಿ: BMRCL ಎಂಡಿ, ಯಾವಾಗ ಸಂಚಾರ ಶುರು?

ಬೆಂಗಳೂರು, ಆಗಸ್ಟ್ 01: ನಮ್ಮ ಮೆಟ್ರೋ ವಿಮಾನ ನಿಲ್ದಾಣ ಮಾರ್ಗ ಹಂತ 2ಬಿ (Metro Phase 2B) ನೀಲಿ ಮಾರ್ಗವು ( (Namma Metro Blue Lene) ಉತ್ತರ ಬೆಂಗಳೂರಿಗೆ ಉತ್ತಮ ಸಂಚಾರ ಸಂಪರ್ಕವನ್ನು ನೀಡಲಿದೆ, ನಗರ ಮತ್ತು ವಿಮಾನ ನಿಲ್ದಾಣದ ನಡುವೆ ಸುಗಮ ಪ್ರಯಾಣವನ್ನು ಒದಗಿಸುವ ಮಾರ್ಗವಾಗಿದೆ. ಇದನ್ನು BMRCL ವ್ಯವಸ್ಥಾಪಕ ನಿದೇಶಕರು ಪರಿಶೀಲಿಸಿ ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಹಾಗಾದರೆ ಈ ಮಾರ್ಗದ ಆರಂಭ ಯಾವಾಗ?

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾರಣ ಈ ಕೆ.ಆರ್‌.ಪುರಂ ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಸಂಪಕ ಕಲ್ಪಿಸುವ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಮಾರ್ಗದ ಕಾರಿಡಾರ್‌ಲ್ಲಿರುವ ವಯಾಡಕ್ಟ್ ನಿರ್ಮಾಣ, ನಿಲ್ದಾಣ ಕಟ್ಟಡಗಳು ಮತ್ತು ಮುಂಬರುವ ನಿಲ್ದಾಣ ಡಿಪೋ ಸೇರಿದಂತೆ ನಿರ್ಣಾಯಕ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿಯನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

BMRCL MD inspect on KR Puram-Airport Metro Blue Line When Metro Likely to start Operation

ಏರ್‌ಪೋರ್ಟ್‌ನಿಂದ ಹೆಬ್ಬಾಳವರೆಗಿನ ಮೆಟ್ರೋ ಮಾರ್ಗದ ಕಾರಿಡಾರ್‌ಲ್ಲಿರುವ ವಯಾಡಕ್ಟ್ ನಿರ್ಮಾಣ, ನಿಲ್ದಾಣ ಕಟ್ಟಡಗಳು ಮತ್ತು ಮುಂಬರುವ ನಿಲ್ದಾಣ ಡಿಪೋಗಳು ನಿರ್ಣಾಯಕ ಮೂಲಸೌಕರ್ಯಗಳು ಆಗಿವೆ. ಇವುಗಳ ಕೆಲಸ ಕುರಿತು ಮಾಹಿತಿ ಪಡೆದರು. ಮಹತ್ವದ ಮೂಲ ಸೌಕರ್ಯ ಕಾಮಗಾರಿಗಳ ವಿಮಾನಪಥ (ವೈಡಕ್ಸ್) ನಿರ್ಮಾಣ ಹಾಗೂ ಭಾರತೀಯ ವಾಯುಪಡೆಯ ಆವರಣದ ಸಮೀಪದಲ್ಲಿರುವ ರೈಲು ಹಾದಿ ದಾಟುವ ಸ್ಥಳಗಳು ಮತ್ತು 'ಕಟ್-ಅಂಡ್-ಕವರ್' ವಿಭಾಗಗಳಂತಹ ಅತೀ ಪ್ರಾಮುಖ್ಯತೆಯ ಸ್ಥಳಗಳನ್ನೂ ವೀಕ್ಷಿಸಿದರು. ಅಗತ್ಯ ಸಲಹೆ ಸೂಚನೆ ಕೊಟ್ಟರು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬಿಎಂಆರ್‌ಸಿಎಲ್ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರಿಗೆ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅತ್ಯಾಧುನಿಕ ಮೂಲಸೌಕರ್ಯವನ್ನು ಒದಗಿಸುವ ಮೂಲಕ ನಿಗದಿತ ಅವಧಿಯನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. ಇದು ಬೆಂಗಳೂರು ಮೆಟ್ರೋ ಯೋಜನೆ ಹಂತ-2ಬಿ ಯ ಪ್ರಮುಖ ಭಾಗವಾಗಿದೆ. ಉತ್ತರ ಬೆಂಗಳೂರಿಗೆ ಭವಿಷ್ಯದಲ್ಲಿ ಉತ್ತಮ ಸಾರಿಗೆ ಇದಾಗಲಿದೆ.

ಈ ನೀಲಿ ಮಾರ್ಗವು ಎರಡು ಹಂತಗಳಲ್ಲಿ ನಿರ್ಮಾಣಗೊಳ್ಳಲಿದೆ. ಒಂದು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗೆ ಹಂತ 2ಎ ಮತ್ತು ಕೆ.ಆರ್‌ಪುರಂ ನಿಂದ ಏರ್‌ಪೋರ್ಟ್ ವರೆಗೆ 2ಬಿ ಮಾರ್ಗ ನಿರ್ಮಾಣದ ಕೆಲಸಗಳು ಬರದಿಂದ ಸಾಗಿವೆ.

ನೀಲಿ ಮಾರ್ಗ ಯಾವಾಗ ಓಪನ್

ನಮ್ಮ ಮೆಟ್ರೋ ನೀಲಿ ಮಾರ್ಗವು 2026ರ ಜೂನ್ ಅಂತ್ಯಕ್ಕೆ ತೆರೆಯಬೇಕೆಂಬ ಆಲೋಚನೆ ಮೊದಲಿನಿಂದಲೂ ಇದೆ. ಈ ನಿಟ್ಟಿನಲ್ಲಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಮೆಟ್ರೋ ನಿಲ್ದಾಣ ನಿರ್ಮಾಣ, ಪಿಲ್ಲರ್ ನಿರ್ಮಾಣ, ವಯಾಡಕ್ಟ್ ಜೋಡಣೆ, ಕೆಲಸಗಳು ಬಹುತೇಕ ಮುಗಿದಿವೆ. ಹಳಿ ಜೋಡಣೆ, ವಿದ್ಯುತ್ ಸರಬರಾಜಿನಂತ ಕೆಲಸಗಳು ಬಾಕಿ ಉಳಿದಿವೆ ಎನ್ನಲಾಗಿದೆ. ಅದು ಪೂರ್ಣಗೊಳ್ಳುತ್ತಿದ್ದಂತೆ ರೈಲು ಪೂರೈಕೆ ನೋಡಿಕೊಂಡು ನಿಗದಿತ ಗಡುವಿನಲ್ಲಿ ತೆರೆಯುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+