Namma Metro: ನಮ್ಮ ಮೆಟ್ರೋ ಕಾರಿಡಾರ್ ವಿಸ್ತರಣೆಗೆ ಟೆಂಡರ್; ಮಾಹಿತಿ , ವಿವರ

ಬೆಂಗಳೂರು: ನಮ್ಮ ಮೆಟ್ರೋ ಜಾಲಕ್ಕೆ ಹೊಸದಾಗಿ 44 ಕಿಮೀ ಮಾರ್ಗವನ್ನು ಸೇರಿಸಲಾಗುವುದು ಎಂದು ಕರ್ನಾಟಕ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಜೊತೆಗೆ ಹಲವು ಮಾರ್ಗಗಳಲ್ಲಿ ಮೆಟ್ರೋ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ವರದಿ ತಯಾರಿಸುವುದಾಗಿ ಕೂಡ ಹೇಳಿತ್ತು.

ಬಜೆಟ್‌ನಲ್ಲಿ ಘೋಷಣೆಯಾದ ಬಳಿಕ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಈಗ ಎರಡು ಪ್ಯಾಕೇಜ್‌ಗಳಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರಿಡಾರ್ ವಿಸ್ತರಣೆಗಾಗಿ ಕಾರ್ಯಸಾಧ್ಯ ಅಧ್ಯಯನ ವರದಿಯನ್ನು ತಯಾರಿಸಲು ಟೆಂಡರ್ ಕರೆದಿದೆ.

BMRCL Initiates Tender Process to Extend Namma Metro Corridors in Bengaluru

ಮೊದಲ ಪ್ಯಾಕೇಜ್‌ನಲ್ಲಿ ಮೂರು ಕಾರಿಡಾರ್‌ಗಳಲ್ಲಿ ಸುಮಾರು 50 ಕಿಮೀ ಉದ್ದದ ಬೆಂಗಳೂರು ಮೆಟ್ರೋ ರೈಲು ಕಾರಿಡಾರ್‌ಗಳು. ಚಲ್ಲಘಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆಗೆ ಕಾರಿಡಾರ್ ಯೋಜನೆ ಬಗ್ಗೆ ಅಧ್ಯಯನ ನಡೆಯಲಿದೆ.

ಎರಡನೇ ಪ್ಯಾಕೇಜ್‌ನಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರಿಡಾರ್‌ಗಳನ್ನು ಒಂದು ಕಾರಿಡಾರ್‌ನಲ್ಲಿ 68 ಕಿಮೀ (ಅಂದಾಜು) ಉದ್ದಕ್ಕೆ ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ಸಿದ್ಧಪಡಿಸುವುದು. ಕಾಳೇನ ಅಗ್ರಹಾರ (ಗೊಟ್ಟಿಗೆರೆ) - ಜಿಗಣಿ - ಆನೇಕಲ್ - ಅತ್ತಿಬೆಲೆ - ಸರ್ಜಾಪುರ - ವರ್ತೂರು - ಕಾಡುಗೋಡಿ ಟ್ರೀ ಪಾರ್ಕ್ ಮಾರ್ಗಗಳು ಬರಲಿವೆ.

ಜನವರಿ ಕೊನೆಯ ವಾರದಲ್ಲಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಸಮೂಹ ನಮ್ಮ ಮೆಟ್ರೋ ಇನ್ನೂ ಐದು ಕಾರಿಡಾರ್‌ಗಳಲ್ಲಿ ಒಟ್ಟು ಉದ್ದ 129 ಕಿಮೀ ಉದ್ದದ ಮಾರ್ಗದ ಬಗ್ಗೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆಯಿತು.

ಅವುಗಳೆಂದರೆ

1. ಚಲ್ಲಘಟ್ಟದಿಂದ ಬಿಡದಿ (15 ಕಿ.ಮೀ)
2. ಕನಕಪುರ ರಸ್ತೆಯಲ್ಲಿ ಹಾರೋಹಳ್ಳಿಗೆ ರೇಷ್ಮೆ ಸಂಸ್ಥೆ (24 ಕಿ.ಮೀ)
3. ನೆಲಮಂಗಲ ಸಮೀಪದ ಮಾದಾವರದಿಂದ ಕುಣಿಗಲ್ ಕ್ರಾಸ್ (11 ಕಿ.ಮೀ)
4. ಬೊಮ್ಮಸಂದ್ರದಿಂದ ಅತ್ತಿಬೆಲೆ (11 ಕಿ.ಮೀ)
5. ಕಾಳೇನ ಅಗ್ರಹಾರದಿಂದ ಜಿಗಣಿ ಮೂಲಕ ಕಾಡುಗೋಡಿ ಟ್ರೀ ಪಾರ್ಕ್
6. ಅತ್ತಿಬೆಲೆ ಮತ್ತು ವರ್ತೂರು (68 ಕಿ.ಮೀ)

ಬೊಮ್ಮಸಂದ್ರದಿಂದ ಹೊಸೂರುವರೆಗೆ ನಮ್ಮ ಮೆಟ್ರೊ ಮಾರ್ಗವನ್ನು ವಿಸ್ತರಿಸುವ ತಮಿಳುನಾಡು ಸರ್ಕಾರದ ಪ್ರಸ್ತಾವನೆಯ ಕುರಿತು ಬಿಎಂಆರ್‌ಸಿಎಲ್‌ನ ಪ್ರತಿಕ್ರಿಯೆ ನೀಡಿದ್ದು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಮೊಎಚ್‌ಯುಎ) ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ಚೆನ್ನೈ ಮೆಟ್ರೋಗೆ ತಾತ್ವಿಕ ಅನುಮೋದನೆ ನೀಡಿದೆ ಎಂದಿದೆ. ಅಧ್ಯಯನ ವರದಿಯನ್ನು ಸಿದ್ಧಪಡಿಸಿದ ನಂತರ ಮುಂದಿನ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗವುದು ಎಂದು ಹೇಳಿದೆ.

ಹಳದಿ ಮಾರ್ಗ ಕಾಮಗಾರಿ ಅಪ್‌ಡೇಟ್

ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ಸಿವಿಲ್ ಕಾಮಗಾರಿಗಳು ಬಹುತೇಕ ಮುಗಿದಿದ್ದು, ಅಂತಿಮ ಸ್ಪರ್ಶ ಪ್ರಗತಿಯಲ್ಲಿದೆ. ಟ್ರ್ಯಾಕ್ ಕಾಮಗಾರಿ ಶೇ 100ರಷ್ಟು ಮುಗಿದಿದ್ದು, ಸಿಸ್ಟಂ ಕಾಮಗಾರಿಯು ಹೊರಾಂಗಣ ಸಿಗ್ನಲಿಂಗ್ ಸೇರಿದಂತೆ ಶೇ 95ಕ್ಕೆ ಪ್ರಗತಿಯಾಗಿದೆ. ಈ ಮಾರ್ಗದ ಮೊದಲ ಸೆಟ್ "ಚಾಲಕರಹಿತ" ಮೆಟ್ರೋ ರೈಲುಗಳು ಬೆಂಗಳೂರಿಗೆ ಬಂದಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ನಡೆಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+