ನಮ್ಮ ಮೆಟ್ರೋ ಮೊದಲ ಹಂತ ಪೂರ್ಣ : 73.11 ಕೋಟಿ ಲಾಭ

ಬೆಂಗಳೂರು, ನವೆಂಬರ್ 20 : ನಮ್ಮ ಮೆಟ್ರೋ ಮೊದಲ ಹಂತದ ಯೋಜನೆ ಪೂರ್ಣಗೊಂಡ ಮೇಲೆ ಬಿಎಂಆರ್‌ಸಿಎಲ್ ಲಾಭಗಳಿಸಿದೆ. 2017-18ನೇ ಸಾಲಿನಲ್ಲಿ 73.11 ಕೋಟಿ ಲಾಭ ಬಂದಿದೆ.

ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ವೈ.ಚವ್ಹಾಣ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮೊದಲ ಹಂತದ ಮಾರ್ಗದಲ್ಲಿ ಪರಿಪೂರ್ಣವಾಗಿ ರೈಲು ಸಂಚಾರ ಆರಂಭವಾದ ಬಳಿಕ ಮೆಟ್ರೋ ಲಾಭದತ್ತ ಮುಖ ಮಾಡಿದೆ.

2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ ತನಕ 73.11 ಕೋಟಿ ಲಾಭ ಬಂದಿದೆ. ಪ್ರತಿದಿನ ನಮ್ಮ ಮೆಟ್ರೋದಲ್ಲಿ 4 ಲಕ್ಷ ಜನರು ಸಂಚಾರ ನಡೆಸುತ್ತಿದ್ದಾರೆ. ಪ್ರತಿದಿನ 1 ಕೋಟಿ ರೂ. ಆದಾಯ ಬರುತ್ತಿದೆ.

ಯೋಜನೆ ಜಾರಿಗೊಳಿಸಲು ಪಡೆದ ಸಾಲಕ್ಕಾಗಿ ವಾರ್ಷಿಕ 110 ಕೋಟಿ ಬಡ್ಡಿಯನ್ನು ಪಾವತಿ ಮಾಡಬೇಕಿದೆ. ಈ ಬಡ್ಡಿಯನ್ನು ಕಟ್ಟಬೇಕಾದರೆ ನಿಗಮಕ್ಕೆ ಇನ್ನೂ 38.73 ಕೋಟಿ ಆದಾಯ ಬರಬೇಕಿದೆ. ನಾಯಂಡಹಳ್ಳಿ-ಬೈಯ್ಯಪ್ಪನಹಳ್ಳಿ, ನಾಗಸಂದ್ರ-ಯಲಚೇನಹಳ್ಳಿ ನಡುವೆ ಪ್ರಸ್ತುತ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ.

ಲಾಭದ ಹಳಿಯಲ್ಲಿ ಮೆಟ್ರೋ

ಲಾಭದ ಹಳಿಯಲ್ಲಿ ಮೆಟ್ರೋ

ನಾಯಂಡಹಳ್ಳಿ-ಬೈಯ್ಯಪ್ಪನಹಳ್ಳಿ, ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ಬಿಎಂಆರ್‌ಸಿಎಲ್‌ಗೆ ಲಾಭವಾಗುತ್ತಿದೆ. ಪ್ರತಿ ದಿನ ನಮ್ಮ ಮೆಟ್ರೋದಲ್ಲಿ 4 ಲಕ್ಷ ಜನರು ಸಂಚಾರ ಮಾಡುತ್ತಿದ್ದಾರೆ. 2017ರ ಏಪ್ರಿಲ್‌ನಿಂದ 2018ರ ಮಾರ್ಚ್‌ ತನಕ 73.11 ಕೋಟಿ ಲಾಭ ಬಂದಿದೆ.

ನಮ್ಮ ಮೆಟ್ರೋ ಲಾಭ

ನಮ್ಮ ಮೆಟ್ರೋ ಲಾಭ

ಪ್ರಯಾಣ ಟೋಕನ್ ಮಾರಾಟದಿಂದ 281 ಕೋಟಿ, ವಾಣಿಜ್ಯ ಮಳಿಗೆಗಳ ಬಾಡಿಗೆ, ಪಾರ್ಕಿಂಗ್ ಶುಲ್ಕ, ಜಾಹೀರಾತಿನಿಂದ 56.21 ಕೋಟಿ ಆದಾಯ ಸಂಗ್ರಹಣೆಯಾಗಿದೆ. ಮೆಟ್ರೋ ಕಾರ್ಯಾಚರಣೆ, ಸಿಬ್ಬಂದಿ ವೇತನ, ನಿರ್ವಹಣೆಗಾಗಿ 264.10 ಕೋಟಿ ವೆಚ್ಚವಾಗಿದೆ.

5689 ಕೋಟಿ ರೂ. ಸಾಲ

5689 ಕೋಟಿ ರೂ. ಸಾಲ

ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸುಮಾರು 4 ಲಕ್ಷ ಜನರು ಸಂಚಾರ ನಡೆಸುತ್ತಿದ್ದಾರೆ. ಇದರಿಂದಾಗಿ ಪ್ರತಿದಿನ 1 ಕೋಟಿ ಆದಾಯ ಬರುತ್ತಿದೆ. 42 ಕಿ.ಮೀ. ಉದ್ದದ ಮೆಟ್ರೋ ಮೊದಲ ಹಂತದ ಮಾರ್ಗ ನಿರ್ಮಾಣಕ್ಕೆ ನಿಗಮ ವಿವಿಧ ಮೂಲಗಳಿಂದ 5689 ಕೋಟಿ ದೀರ್ಘಾವಧಿ ಸಾಲ ಪಡೆದಿದೆ. ಜೈಕಾ, ಏಜೆನ್ಸಿ ಫ್ರಾನ್ಸಿಸ್ ದಿ-ಡೆವಲಪ್‌ಮೆಂಟ್ ಮತ್ತು ಹುಡ್ಕೋದಿಂದ ಸಾಲ ಪಡೆಯಲಾಗಿದೆ.

ಆರು ಬೋಗಿಗಳ ರೈಲು

ಆರು ಬೋಗಿಗಳ ರೈಲು

ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ವೈ.ಚವ್ಹಾಣ್ ಅವರು,'ಆರು ಬೋಗಿಗಳ ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಈ ತಿಂಗಳಿನಲ್ಲಿಯೇ ಸಂಚಾರ ಆರಂಭಿಸಲಾಗುತ್ತದೆ. ಆದರೆ, ದಿನಾಂಕ ನಿಗದಿ ಮಾಡಿಲ್ಲ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+