ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತ ರೋಗಿಗಳಿಗೆ ಕೌನ್ಸಿಲಿಂಗ್

ಬೆಂಗಳೂರು, ಏಪ್ರಿಲ್ 28 : ಕೋವಿಡ್ - 19 ಸೋಂಕಿತ ರೋಗಿಯೊಬ್ಬ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಈಗ ಎಲ್ಲಾ ರೋಗಿಗಳಿಗೆ ಕೌನ್ಸಿಲಿಂಗ್ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ ಕೊರೊನಾ ಸೋಂಕಿತರ ಸಂಖ್ಯೆ 520.

Recommended Video

      ಮಂಡ್ಯದಲ್ಲಿ ಕೊರೊನ ಪರೀಕ್ಷೆ ವೇಳೆ ಪತ್ರಕರ್ತರ ಮೇಲೆ ಹಲ್ಲೆ , ಸಚಿವ ಡಾ. ನಾರಾಯಣಗೌಡ ಪ್ರತಿಕ್ರಿಯೆ

      ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಕೌನ್ಸಿಲಿಂಗ್ ನಡೆಸಲಿದೆ. ಫೋನ್ ಮೂಲಕ ಎಲ್ಲಾ ರೋಗಿಗಳಿಗೂ ಕೌನ್ಸಿಲಿಂಗ್ ನಡೆಸಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಲಾಗುತ್ತದೆ.

      ರೋಗಿ ಸಂಖ್ಯೆ 466 ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 6ನೇ ಮಹಡಿಯಿಂದ ಬಿದ್ದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಭಾನುವಾರ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು.

      BMCRI To Conduct Counseling For Corona Patients

      ಮೂರುದಿನಗಳಿಂದ ಐಸಿಯುನಲ್ಲಿದ್ದ ರೋಗಿಯ ಬಳಿ ಮೊಬೈಲ್ ಸಹ ಇರಲಿಲ್ಲ. ಕೊರೊನಾ ಬಗ್ಗೆ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಎಲ್ಲಾ ರೋಗಿಗಳಿಗೆ ಕೌನ್ಸಿಲಿಂಗ್ ನಡೆಸಲು ನಿರ್ಧರಿಸಲಾಗಿದೆ.

      ಬಿಎಂಸಿಆರ್‌ಐ ವೈದ್ಯರಾದ ಡಾ. ಎಚ್. ಚಂದ್ರಶೇಖರ್, "ನಾಲ್ಕರಿಂದ ಐದು ವೈದ್ಯರ ತಂಡವನ್ನು ನಾವು ರಚನೆ ಮಾಡಿದ್ದೇವೆ. ಅವರು ರೋಗಿಯ ಜೊತೆ ಫೋನ್‌ನಲ್ಲಿ ಮಾತನಾಡಲಿದ್ದು, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ನೆರವು ನೀಡಲಿದ್ದಾರೆ" ಎಂದು ಹೇಳಿದ್ದಾರೆ.

      ರೋಗಿನ ಮಾನಸಿಕ ಸ್ಥಿತಿ ಅರಿಯಲು ಅವರನ್ನು ಮುಖತಃ ಭೇಟಿ ಮಾಡಬೇಕು. ಅವರ ಮುಖದ ಭಾವ, ಮಾತಿನ ಏರಿಳಿತ ಮುಂತಾದವುಗಳನ್ನು ಅಧ್ಯಯನ ಮಾಡಬೇಕು. ಆದರೆ, ಫೋನ್‌ನಲ್ಲಿ ಇದು ಸಾಧ್ಯವಿಲ್ಲ. ವೈದ್ಯರು ವಾರ್ಡ್‌ಗೆ ಭೇಟಿ ನೀಡಬೇಕಾದರೆ ಪಿಪಿಇ ಕಿಟ್ ಬೇಕಾಗುತ್ತದೆ.

      ಅಗತ್ಯವಿದ್ದರೆ ರೋಗಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸಿಲಿಂಗ್ ನಡೆಸಲು ಸಹ ತೀರ್ಮಾನಿಸಲಾಗಿದೆ. ಕೋವಿಡ್ - 19 ರೋಗಿಗಳಿಗೆ ಅಗತ್ಯ ಸಹಾಯವನ್ನು ನೀಡಲು ಬಿಎಂಸಿಆರ್‌ಐ ಸಿದ್ದವಿದೆ ಎಂದು ವೈದ್ಯರು ಹೇಳಿದ್ದಾರೆ.

      ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಕೋವಿಡ್ - 19 ರೋಗಿಗಳ ಸುರಕ್ಷತೆ ನಮಗೆ ಮುಖ್ಯ. ಎಲ್ಲಾ ರೋಗಿಗಳ ಮಾನಸಿಕ ಆರೋಗ್ಯ ಕಾಪಾಡಲು ನಾವು ಸಿದ್ಧವಿದ್ದೇವೆ ಎಂದು ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+