ತಂದೆಗೆ ಐಸಿಯು ಬೆಡ್ ಕೊಡಿಸಲು 5 ದಿನ ಅಂಧನ ಅಲೆದಾಟ

ಬೆಂಗಳೂರು, ಮೇ 10; ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಗೆ ಐಸಿಯು ಬೆಡ್ ಕೊಡಿಸಲು ಪುತ್ರ ಐದು ದಿನಗಳ ಕಾಲ ಪರದಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಂಕಿತ ಕೋವಿಡ್ ಸೋಂಕಿತನ ಪುತ್ರ ಅಂಧನಾಗಿದ್ದು, ಯಾವ ಆಸ್ಪತ್ರೆಗಳು ಸಹಕಾರ ನೀಡಿಲ್ಲ.

ವೃತ್ತಿಯಲ್ಲಿ ಟೈಲರ್ ಆಗಿರುವ 68 ವರ್ಷದ ಶಮೀನ್ ಅಕ್ತರ್‌ ಅವರದ್ದು ಬಡ ಕುಟುಂಬ. ಅಕ್ತರ್‌ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆದರೆ ಕುಟುಂಬ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸುವ ಸ್ಥಿತಿಯಲ್ಲಿಯೂ ಇರಲಿಲ್ಲ.

ತಂದೆಗೆ ಚಿಕಿತ್ಸೆ ಕೊಡಿ ಎಂದು ಶಮೀನ್ ಅಕ್ತರ್ ಪುತ್ರ ಕಣ್ಣು ಕಾಣದಿದ್ದರೂ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ್ದಾನೆ. ಕೋರಮಂಗಲ, ಶಿವಾಜಿನಗರದಲ್ಲಿ ಹಲವು ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದಾನೆ. ಭಾನುವಾರ ಇಂದಿರಾ ನಗರದ ಆಸ್ಪತ್ರೆಯೊಂದು ಅಕ್ತರ್ ದಾಖಲು ಮಾಡಿಕೊಂಡಿದೆ.

Blind Man Searched 5 Days ICU Bed For Father

ಕಳೆದ ವಾರ ಅಕ್ತರ್‌ಗೆ ಜ್ವರ, ಕಫ ಕಾಣಿಸಿಕೊಂಡಿತ್ತು. ಕೆಲವು ಔಷಧಿಗಳನ್ನು ನೀಡಿ ಮನೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯ ಸುಧಾರಿಸಲಿಲ್ಲ. ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದ್ದು, ಸೋಮವಾರ ರಾತ್ರಿಯಿಂದ ಬೆಡ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಅಕ್ತರ್‌ ಅಂಧ ಪುತ್ರ ಶಬಾಜ್‌ ತಂದೆಯ ಜೀವ ಉಳಿಸಲು ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ. ಆದರೆ ಐಸಿಯು ಬೆಡ್ ಹುಡುಕಾಟ ಮುಂದುವರೆಯಿತು. 5 ದಿನಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆ ಸುತ್ತಿದರೂ ಬೆಡ್ ಮಾತ್ರ ಸಿಗಲಿಲ್ಲ.

ಕೊನೆಗೆ ಕುಟುಂಬ ಸದಸ್ಯರು ಸಿಟಿ ಸ್ಕ್ಯಾನ್ ಮಾಡಿಸಿದ್ದಾರೆ. ಐಸಿಯು ಬೆಡ್ ಅಗತ್ಯವಿದೆ ಎಂದು ತಿಳಿದಿದೆ. ಆದರೆ ಬೆಡ್ ಸಿಗದೆ ಪರದಾಡಿದ್ದಾರೆ. ಭಾನುವಾರ ಆಸ್ಪತ್ರೆಗೆ ದಾಖಲು ಮಾಡಿದ ಮೇಲೆ ಅಕ್ತರ್ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+