ರಾಣಿಚೆನ್ನಮ್ಮ ವಿವಿ ದಾಂಧಲೆ: ಗೂಂಡಾಗಳ ಮೇಲೆ ಕ್ರಮಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು,ಅ.6: ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಗೆ ನುಗ್ಗಿ ದಾಂಧಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣಿ ಚೆನ್ನಮ್ಮ ವಿವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿದ್ದಲ್ಲದೆ ಕುಲಪತಿಯ ಮೇಲೂ ಹಲ್ಲೆಗೆ ಮುಂದಾಗಿದ್ದರು, ಒಂದು ವಾರ ಕಳೆಯುತ್ತಾ ಬಂದರೂ ತನಿಖೆ ಮಾತ್ರ ಅದೇ ಹಂತದಲ್ಲಿದೆ ಆದಷ್ಟು ಬೇಗ ಅವರನ್ನು ಬಂಧಿಸಬೇಕು ಎಂದು ಹೇಳಿದರು.

ನವದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಂತೆ ಇದೀಗ ರಾಣಿ ಚೆನ್ನಮ್ಮ ವಿವಿಯಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.

Bjp urges action against Congress workers who attacked on RCU

ಸಿದ್ದು ಸುಣಗಾರ್ ಎಂಬುವರಿಂದ ದಾಂಧಲೆ ನಡೆದಿರುವುದು ಸಾಬೀತಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಇನ್ನು ರಾಜ್ಯ ಸರ್ಕಾರ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದೆಯಾದರೂ ಈವರೆಗೂ ಇದು ಅನುಷ್ಠಾನವಾಗಿಲ್ಲ. ರೈತರಿಗೆ ತಕ್ಷಣವೇ ಋಣಮುಕ್ತ ಪತ್ರ ವಿತರಣೆ ಮಾಡುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದರು. ಇದುವರೆಗೂ ಯಾವ ರೈತರಿಗೂ ಇದು ತಲುಪಿಲ್ಲ ಎಂದು ದೂರಿದರು.

ಸಾಲಮನ್ನಾಕ್ಕಾಗಿ ಸರ್ಕಾರ 12 ಷರತ್ತುಗಳನ್ನು ಹಾಕಿ ರೈತರಿಗೆ ಕಿರುಕುಳ ನೀಡುತ್ತಿದೆ. ಸಾಲಮನ್ನಾವಾಗಬೇಕಾದರೆ ದಾಖಲೆಗಳನ್ನು ಕೊಡಿ ಎಂದು ಅಧಿಕಾರಿಗಳು ಪ್ರತಿನಿತ್ಯ ಹಿಂಸೆ ನೀಡುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+