ದಿನಗಳ ದಾಖಲೆ ಮಾತ್ರ, ಸಾಧನೆ ಶೂನ್ಯ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ
ಬೆಂಗಳೂರು: ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರೇ ತಾವು ದಾಖಲೆಯ ಪುಸ್ತಕದಲ್ಲಿ ಬರೆದಿರುವುದು ಕೇವಲ ದಿನಗಳ ಸಂಖ್ಯೆಯನ್ನೇ ಹೊರತು, ಸಾಧನೆಯ ಅಕ್ಷರಗಳನ್ನಲ್ಲ. ತಮ್ಮ ತುಘಲಕ್ ಆಡಳಿತದ ದುಸ್ಥಿತಿಯ ದಿನಗಳನ್ನು ಕನ್ನಡಿಗರು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ ಎಂದು ಬಿಜೆಪಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ಸುದೀರ್ಘ ಅವಧಿಗೆ ಸಿಎಂ ಆಗಿ ಆಡಳಿತ ನೀಡುವ ಮೂಲಕ ದಿವಂಗತ ಡಿ.ದೇವರಾಜು ಅರಸು ಅವರ ದಾಖಲೆ ಮುರಿದ ಸಿದ್ದರಾಮಯ್ಯನವರ ಕುರಿತು ಬಿಜೆಪಿ ಎಕ್ಸ್ ಪೋಸ್ಟ್ ಮಾಡಿದೆ. 'ದಾಖಲೆ ಬರೆದ "ಅಭಿನವ ಅರಸು"ಗೆ ಅಭಿನಂದನೆಗಳು...ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ ಸಿದ್ದರಾಮಯ್ಯನವರೇ' ಎಂದು ಬಿಜೆಪಿ ವ್ಯಂಗ್ಯವಾಡಿದೆ. ಇದರೊಂದಿಗೆ ಸಿದ್ದರಾಮಯ್ಯನವರ 7 ವರ್ಷ 240 ದಿನಗಳ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಕುಟುಕಿದೆ. ಮಾತ್ರವಲ್ಲದೇ ಸಿದ್ದರಾಮಯ್ಯನವರು ಆಡಳಿತದಲ್ಲಿ ವಿಫಲವಾಗಿದ್ದಾರೆ ಎಂದು ಪಟ್ಟಿಯನ್ನು ನೀಡಿದೆ.

ರಾಜ್ಯದಲ್ಲಿ ಸಾಲದ ಹೊರೆ ಹೆಚ್ಚಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಕರುನಾಡು ಗೂಂಡಾ ರಾಜ್ಯವಾಗಿದೆ. ಸರ್ಕಾರಿ ಶಾಲೆಗಳು ಪಾಳು ಬಿದ್ದಿದೆ. ಜಲಾಶಯಗಳು ಹೂಳು ತುಂಬಿವೆ. ಸರ್ಕಾರಿ ಖಾಲಿ ಹುದ್ದೆಗಳ ನೇಮಕಾತಿ ನಡೆದಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ರೈತರ ಆತ್ಮಹತ್ಯೆ ಲೆಕ್ಕಕ್ಕೆ ಸಿಗದಂತಾಗಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ. ಓಲೈಕೆ ರಾಜಕಾರಣವು ಮಿತಿಮೀರಿದೆ ಎಂದು ಬಿಜೆಪಿ ದೂರಿದೆ.
ಇದಿಷ್ಟೇ ಅಲ್ಲ ಪಟ್ಟಿ ಇನ್ನೂ ಮುಂದುವರಿಯಲಿದೆ. ಸಿದ್ದರಾಮಯ್ಯನವರೇ ನೀವು ಸುದೀರ್ಘ ಅವಧಿಗೆ ಸಿಎಂ ಆಗಿ ಕೇವಲ ದಾಖಲೆಯ ಪುಸ್ತಕದಲ್ಲಿ ಬರೆದಿರುವುದು ದಿನಗಳ ಸಂಖ್ಯೆಯನ್ನೇ ಹೊರತು, ಸಾಧನೆಯ ಅಕ್ಷರಗಳನ್ನಲ್ಲ ಎಂದು ಕುಟುಕಿದೆ. ಈ ಮೂಲಕ ಸಿದ್ದರಾಮಯ್ಯನವರ ಅವಧಿಯಲ್ಲಿ ಇದೆಲ್ಲ ಹೆಚ್ಚಾಗಿದೆ ಎಂದು ಆರೋಪಿಸಿದೆ.
ದಾಖಲೆ ಬರೆದ "ಅಭಿನವ ಅರಸು"ಗೆ ಅಭಿನಂದನೆಗಳು... ನಿಮ್ಮ ದಾಖಲೆ ಆಡಳಿತದ ವೈಫಲ್ಯದ ಸಾಧನೆಗಳನ್ನು ಬಿಡುವು ಸಿಕ್ಕಾಗ ಒಮ್ಮೆ ಕಣ್ಣಾಡಿಸಿ @siddaramaiah ನವರೇ..
— BJP Karnataka (@BJP4Karnataka) January 6, 2026
➡️ 7 ವರ್ಷ 240 ದಿನಗಳ ಆಡಳಿತದಲ್ಲಿ
ಭ್ರಷ್ಟಾಚಾರ ಮಿತಿ ಮೀರಿದೆ
➡️ ಸಾಲದ ಹೊರೆ
ಅಧಿಕವಾಗಿದೆ
➡️ ಅಭಿವೃದ್ಧಿ
ಶೂನ್ಯವಾಗಿದೆ
➡️ ಕರುನಾಡು
ಗೂಂಡಾ ರಾಜ್ಯವಾಗಿದೆ
➡️… pic.twitter.com/KM1OWAtTVn
ಬಿಜೆಪಿ ನಾಯಕರು ಹೇಳಿದ್ದೇನು?
ಸಿದ್ದರಾಮಯ್ಯ ಅವರ ಸುದೀರ್ಘ ಅವಧಿಯ ಮುಖ್ಯಮಂತ್ರಿ ಆಡಳಿತದ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದಿಸಿ ಮಾತನಾಡಿದ್ದಾರೆ. ಕ್ವಾಂಟಿಟಿಗಿಂತ ಕ್ವಾಲಿಟಿ ತುಂಬಾ ಮುಖ್ಯವಾಗುತ್ತದೆ. ಎಷ್ಟು ಅವಧಿವರೆಗೆ ಇದ್ದರೂ ಎಂಬುದಕ್ಕಿಂತ ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆ. ಎಷ್ಟು ಸುಧಾರಣೆ ಆಗಿದೆ ಎಂಬುದರ ಬಗ್ಗೆ ಚರ್ಚೆಗಳು ಆಗಬೇಕು. ಅದರ ಬಗ್ಗೆ ಮಾತನಾಡಬೇಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಏಳು ವರ್ಷ ಪೂರೈಸಿದ ಸಿಎಂ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಬಾರದು. ದೇವರಾಜು ಅರಸು ತಂದ ಸುಧಾರಣೆಗಳನ್ನು ಬೇರೆ ಯಾರೂ ತಂದಿಲ್ಲ. ಬಡವರಿಗೆ ಭೂಮಿ ನೀಡಿದ್ದರು. ಅವರು ನಿಜವಾದ ಬದ್ಧತೆ ಇದ್ದ ಹಿಂದುಳಿದ ವರ್ಗದ ನಾಯಕ. ಅವರ ದಾರಿಯಲ್ಲಿ ಸಿದ್ದರಾಮಯ್ಯನವರು ನಡೆದಿದ್ದರೆ ಚೆನ್ನಾಗಿರುತ್ತಿತ್ತು. ಸಿದ್ದರಾಮಯ್ಯ ಅವರು 2013 ರಲ್ಲಿ ಉತ್ತಮ ಆಡಳಿತ ಕೊಟ್ಟಿದ್ದರು. ಇಂದು ಅವರ ಸರ್ಕಾರದ ಬಗ್ಗೆ ಜನರಿಗೆ ಬೇಸರವಿದೆ ಎಂದು ಹೇಳಿದರು.
-
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications