'ಜೋಕರ್ಸ್ ಆಫ್ ಬಿಜೆಪಿ' ವಿರುದ್ಧ ದೂರು ನೀಡಿದ ಬಿಜೆಪಿ

ಬೆಂಗಳೂರು, ನವೆಂಬರ್ 20: ಫೇಸ್‌ಬುಕ್ ಪೇಜ್ 'ಜೋಕರ್ಸ್ ಆಫ್ ಬಿಜೆಪಿ' ವಿರುದ್ಧ ಬಿಜೆಪಿ ದೂರು ದಾಖಲಿಸಿದೆ.

ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿರುವ ಜೋಕರ್ಸ್ ಆಫ್ ಬಿಜೆಪಿ ಫೇಸ್‌ಬುಕ್ ಪೇಜ್ ಅಡ್ಮಿನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಈಗಲೇ ಜೋಕರ್ಸ್ ಆಫ್ ಬಿಜೆಪಿ ಫೇಸ್‌ಬುಕ್ ಪೇಜ್ ಸ್ಥಗಿತಗೊಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಿದೆ.

BJP Lodges Complaint Against Jokers Of BJP

ಅನರ್ಹಗೊಂಡ ಶ್ವಾನಕ್ಕೂ ಕಮಲ ಪಕ್ಷದಲ್ಲಿ ಉತ್ತಮ ಸ್ಥಾನವಿದೆ ಎಂದು ನಾಯಿ ಚಿತ್ರಕ್ಕೆ ಆಭರಣ ತೊಡಿಸಿ, ಅದಕ್ಕೆ ಅನರ್ಹ ಶಾಸಕ ಎಂದು ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆ ಚಿತ್ರವನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಡು ಬಡ ಮಗುವಿಗೆ ಹೋಲಿಸಲಾಗಿದೆ.

ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+