ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪತ್ನಿಗೂ ಹೋಯ್ತು ಖಾಕಿ ನೋಟಿಸ್!

ಬೆಂಗಳೂರು, ಮೇ21: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಎನ್ನಲಾಯ್ತು. ಆ ಬಳಿಕ ಹನಿಟ್ರ್ಯಾಪ್‌ನಿಂದ ಬೇಸತ್ತು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿರುವ ದೂರು ದಾಖಲಾಗಿತ್ತು. ದೂರಿನ ಅನ್ವಯ ಆರೋಪಿ ರೇಖಾ ಈಗಾಗಲೇ ಜೈಲು ಸೇರಿದ್ದಾಳೆ. ಅನಂತರಾಜು ಆತ್ಮಹತ್ಯೆ ಪ್ರಕರಣ ಯೂ ಟರ್ನ್ ಹೊಡೆಯುವ ಸಾಧ್ಯತೆ ಕಾಣುತ್ತಿದೆ. ಅನಂತರಾಜುಗೆ ಪತ್ನಿ ಸುಮಾ ಟಾರ್ಚರ್ ಕೊಟ್ಟಿದ್ದಾಳೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು ಆಡಿಯೋದ ಆಧಾರದ ಮೇಲೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಜೇಡರ ಬಲೆಯಾಯ್ತು ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್:

ತಾನು ಹೆಣೆದ ಬಲೆಯಲ್ಲಿ ಜೇಡ ತಾನೇ ಸಿಲುಕಿಕೊಳ್ಳುತ್ತೆ. ಈ ಕೇಸ್ ಕೂಡಾ ಈಗ ಅದೇ ಹಂತಕ್ಕೆ ಬಂದು ತಲುಪಿದೆ. ಅನಂತರಾಜು ಆತ್ಮಹತ್ಯೆ ನಿಖರವಾಗಿ ಕಾರಣ ತಿಳಿದುಬಂದಿಲ್ಲ. ಬ್ಯಾಡರಹಳ್ಳಿ ಪೊಲೀಸರು ಅನಂತರಾಜು ಪತ್ನಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾ ಹೇಳಿಕೆ ಜೊತೆಗೆ ಅತ್ಮಹತ್ಯೆಗೆ ಬಳಸಿದ್ದ ಬಟ್ಟೆ ಮಿಸ್ ಆಗಿದ್ದು ಇದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಠಾಣೆಗೆ ಹಾಜರಾಗುವಾಗ ಆತ್ಮಹತ್ಯೆಗೆ ಬಳಸಿದ್ದ ಬಟ್ಟೆ ಹಾಗೂ ಸಿಸಿಟಿವಿ ಕ್ಯಾಮರಾ ಡಿವಿಆರ್ ಒದಗಿಸುವಂತೆ ಸುಮಾಗೆ ಸೂಚಿಸಲಾಗಿದೆ.

ಸುಮಾ ಆಡಿಯೋ ಸಂಗ್ರಹಿಸುವ ಸಾಧ್ಯತೆ:

ಸುಮಾ ಹೇಳಿಕೆ ಪಡೆಯುವ ವೇಳೆ ಆಡಿಯೋ ಬಗ್ಗೆ ಕೂಡ ಪೊಲೀಸರು ಪ್ರಶ್ನೆ ಮಾಡುವ ಸಾಧ್ಯತೆಯಿದ್ದು, ಈ ಸಮಯದಲ್ಲೇ ಸುಮಾ ಆಡಿಯೋ ಅನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಇನ್ನು ಅನಂತರಾಜು ಡೆತ್ ನೋಟ್ ಕೂಡ ಸಾಕಷ್ಟು ಅನುಮಾನ ಹುಟ್ಟು ಹಾಕಿದ್ದು, ಬಲವಂತವಾಗಿ ಬರೆಸಿರುವ ಅನುಮಾನ ವ್ಯಕ್ತವಾಗಿದೆ‌. ಈಗಾಗಲೇ ಡೆತ್ ನೋಟ್ ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಅಂತಿಮ ವರದಿಗಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ.

Bjp leader Ananthraju suicide case; some twist information on police investigation

ಸುಮಾ ಮತ್ತು ರೇಖಾ ಮಾತನಾಡಿದ್ದ ಆಡಿಯೋ ವೈರಲ್:

ಸುಮಾ ಮತ್ತು ರೇಖಾ ಮಾತನಾಡುವುದು ಈ ವೇಳೆ ಅನಂತರಾಜುವಿಗೆ ನಿಂದಿಸುವ ಎರಡು ಆಡಿಯೋಗಳು ಸಾಕಷ್ಟು ವೈರಲ್ ಆಗಿತ್ತು. ಅನಂತರಾಜು ಮತ್ತು ಸುಮಾ ದಂಪತಿಯ ನಡುವೆ ಸಾಕಷ್ಟು ವೈಮನಸ್ಸು ಉಂಟಾಗಿತ್ತು. ಆ ವೈಮನಸ್ಸಿನಿಂದಲೇ ಅನಂತರಾಜು ಕುಗ್ಗಿಹೋಗಿದ್ದ ಎಂಬುದು ತಿಳಿಯಲಿದೆ. ಇನ್ನು ಸುಮಾ ಆಡಿಯೋದಲ್ಲಿ ಅನಂತರಾಜು ಮತ್ತು ರೇಖಾರಿಗೆ ನಿಂದಿಸುವುದು, ರೇಖಾ ಅನಂತರಾಜುವಿಗೆ ಟಾರ್ಚರ್ ಕೊಡಬೇಡ ಎನ್ನುವ ಧ್ವನಿ ಇವೆ. ಅಸಲಿಗೆ ಇದು ನಿಜವಾದ ಆಡಿಯೋನಾ ಅಥವಾ ಇಲ್ಲವೇ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದಕ್ಕಾಗಿಯೇ ಸುಮಾರನ್ನು ಠಾಣೆಗೆ ಕರೆಸಿ ಹೇಳಿಕೆಯನ್ನು ಪೊಲೀಸರು ಪಡೆಯಲಿದ್ದಾರೆ.

ಸುಮಾಗೆ ಯಾಕೆ ಸಂಕಷ್ಟ?:

ಬಿಜೆಪಿ ಮುಖಂಡ ಅನಂತರಾಜು ಪತ್ನಿ ಸುಮಾ ಆಡಿಯೋ ಸಂಗ್ರಹಿಸುವುದಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಹಂತದಲ್ಲಿ ಸುಮಾ ಆಡಿಯೋ ಮತ್ತು ವೈರಲ್ ಆಡಿಯೋ ಮ್ಯಾಚ್ ಆಗಿದ್ದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ ಆಗಲಿದೆ.

Bjp leader Ananthraju suicide case; some twist information on police investigation

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+