ಆನೇಕಲ್ : ಬಿಜೆಪಿ ಕಾರ್ಯಕರ್ತ ಹರೀಶ್, ಕೊಚ್ಚಿ ಕೊಲೆ

ಆನೇಕಲ್ ನ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಲಗಿಯ ರಾಮಸಾಗರ ಗೇಟ್ ಬಳಿ ಬಿಜೆಪಿ ಕಾರ್ಯಕರ್ತ ಹರೀಶ್ ರನ್ನು ಕೊಚ್ಚಿ ಕೊಲ್ಲಲಾಗಿದೆ.

ಆನೇಕಲ್, ಜೂನ್ 01: ಆನೇಕಲ್ ನ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಹೀಲಲಲಗಿಯ ರಾಮಸಾಗರ ಗೇಟ್ ಬಳಿ ಬಿಜೆಪಿ ಕಾರ್ಯಕರ್ತ ಹರೀಶ್(40) ರನ್ನು ಕೊಚ್ಚಿ ಕೊಲ್ಲಲಾಗಿದೆ.

ಬೈಕಿನಲ್ಲಿ ತೆರಳುತ್ತಿದ್ದ ಬಿಜೆಪಿ ಬ್ಲಾಕ್ ಎಸ್ ಸಿ / ಎಸ್ಟಿ ಉಪಾಧ್ಯಕ್ಷ ಹರೀಶ್ ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅವರ ಕಣ್ಣಿಗೆ ಕಾರದ ಪುಡಿ ಹಾಕಿದ್ದಾರೆ. ನಂತರ ಮಾರಾಕಾಸ್ತ್ರ, ಕಲ್ಲಿನಿಂದ ಜಜ್ಜಿ ಹರೀಶ್ ರನ್ನು ಕೊಲ್ಲಲಾಗಿದೆ.[ಕಣ್ಣೂರು : ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತ ಬಿಜು ಭೀಕರವಾಗಿ ಹತ್ಯೆ]

BJP activist Harish hacked to death Surya City police station limits Anekal

ಹರೀಶ್ ಅವರನ್ನು ರಾಜು ಅಲಿಯಾಸ್ ರಾಜೇಶ್, ಸಂತೋಷ್ ಗ್ಯಾಂಗಿನವರು ಕೊಂದಿರುವ ಸುದ್ದಿ ಹಬ್ಬಿದೆ. ಹರೀಶ್ ಕಡೆಯವರು ಆಕ್ರೋಶ ವ್ಯಕ್ತಪಡಿಸಿ, ರಾಜೇಶ್ ಮನೆ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ.[ಆರೆಸ್ಸೆಸ್ ಕಾರ್ಯಕರ್ತ ಕಾರ್ತಕ್ ರಾಜ್ ಹಂತಕರ ಬಂಧನ]

ಘಟನಾ ಸ್ಥಳಕ್ಕೆ ಎಸ್ ಪಿ ಅಮಿತ್ ಸಿಂಗ್, ಡಿವೈ ಎಸ್ಪಿ ಉಮೇಶ್ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೂರ್ಯಸಿಟಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]

ಮಾರ್ಚ್ 14ರಂದು ಹತ್ಯೆ ಕಿತಗಾನಹಳ್ಳಿ ವಾಸು ಎಂದು ಜನಪ್ರಿಯರಾಗಿದ್ದ ದಲಿತ ಮುಖಂಡ,ಬಿಜೆಪಿಯ ಸಕ್ರಿಯ ಕಾರ್ಯಕರ್ತ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಬೊಮ್ಮಸಂದ್ರ ಪುರಸಭೆಯ ಕಾಂಗ್ರೆಸ್ ಸದಸ್ಯೆ ಸರೋಜಮ್ಮ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಈ ಭಾಗದಲ್ಲಿ ಇದು ಎರಡನೇ ಪ್ರಕರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+