Get Updates
Get notified of breaking news, exclusive insights, and must-see stories!

ಬರಲಿದೆ 'ಡಾ. ರಾಜಕುಮಾರ್ ಸಮಗ್ರ ಚರಿತೆ'

ಬೆಂಗಳೂರು, ಡಿ. 3: ನಟ ಸಾರ್ವಭೌಮ, ಕನ್ನಡದ ಕಣ್ಮಣಿ ಡಾ. ರಾಜಕುಮಾರ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಡಾ. ರಾಜಕುಮಾರ್ ಜೀವನ ಕುರಿತ "ಡಾ. ರಾಜಕುಮಾರ್ ಸಮಗ್ರ ಚರಿತೆ" ಪುಸ್ತಕವು ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ.

ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಅವರು ಡಾ. ರಾಜ್ ಅವರ ಸಂಪೂರ್ಣ ಜೀವನವನ್ನು ವಿವರಿಸಿದ್ದಾರೆ. 2,140 ಪುಟಗಳ ಈ ಪುಸ್ತಕದಲ್ಲಿ ರಾಜಕುಮಾರ್ ಜೀವನದ ಅತ್ಯಂತ ಅಪರೂಪದ 8,300 ಛಾಯಾಚಿತ್ರಗಳಿರುತ್ತವೆ. ಒಟ್ಟಿನಲ್ಲಿ ಡಾ. ರಾಜಕುಮಾರ್ ಅವರ ಸಂಪೂರ್ಣ ಜೀವನದ ಸನ್ನಿವೇಷಗಳನ್ನು ಚಿತ್ರಸಹಿತ ವಿವರಿಸಲು ಈ ಪುಸ್ತಕದ ಮೂಲಕ ಪ್ರಯತ್ನಿಸಿರುವುದಾಗಿ ರುಕ್ಕೋಜಿ ತಿಳಿಸಿದ್ದಾರೆ. [ಮಹಾರಾಷ್ಟ್ರದಲ್ಲಿ ರಾಜಕುಮಾರ್ ಕುರಿತು ಪಾಠ]

ಈ ಕುರಿತು ದೊಡ್ಡಹುಲ್ಲೂರು ರುಕ್ಕೋಜಿ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಪುಸ್ತಕದ ರಚನೆಗಾಗಿ 15 ವರ್ಷಗಳ ಕಾಲ ಸಂಶೋಧನೆ ನಡೆಸಿರುವುದಾಗಿ ಹೇಳಿಕೊಂಡರು.

rajkumar

ಎರಡು ಸಂಪುಟದಲ್ಲಿ ಪುಸ್ತಕ: ಜೀವನ ಚರಿತ್ರೆ ಪುಸ್ತಕವನ್ನು ಎರಡು ಸಂಪುಟಗಳಲ್ಲಿ ಹೊರತರಲಾಗಿದೆ. ಮೊದಲ ಸಂಪುಟವು 1,080 ಪುಟಗಳನ್ನು ಹಾಗೂ 4,120 ಅಪರೂಪದ ಛಾಯಾಚಿತ್ರಗಳನ್ನು ಹೊಂದಿರುತ್ತದೆ. ಇದರಲ್ಲಿ ಡಾ. ರಾಜ್ ಕುರಿತು ಜನರಿಗೆ ಗೊತ್ತಿರದ ಅನೇಕ ಮಾಹಿತಿಗಳನ್ನು ಹೇಳಲಾಗಿದೆ. ಎರಡನೇ ಸಂಪುಟವು ಸಾಕಷ್ಟು ಕುತೂಹಲದ ಮತ್ತು ಇದುವರೆಗೆ ಯಾರಿಗೂ ತಿಳಿದಿರದ ಸತ್ಯಗಳನ್ನು ಹೇಳಲಾಗಿದೆ. ಇದು 1,060 ಪುಟಗಳನ್ನು ಮತ್ತು 4,190 ಛಾಯಾಚಿತ್ರಗಳನ್ನು ಒಳಗೊಂಡಿರುತ್ತದೆ. ಈ ಎರಡು ಸಂಪುಟಗಳಲ್ಲಿ ಕನ್ನಡದ ಸಂಸ್ಕೃತಿಯ ಸಂಕೇತ ಎಂದೇ ಹೆಸರಾಗಿರುವ ಡಾ. ರಾಜಕುಮಾರ್ ಅವರ ಸಿನಿ ಜೀವನವನ್ನು ವಿವರವಾಗಿ ಹೇಳಲಾಗಿದೆ. [ಕಣ್ಣುದಾನಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಪತ್ರ]

142 ಜನರ ಸಂದರ್ಶನ: ಈ ಜೀವನ ಚರಿತ್ರೆ ರಚಿಸಲು ರಾಜಕುಮಾರ್ ಅವರ ಜೊತೆ ಹತ್ತಿರದ ಒಡನಾಟ ಹೊಂದಿದ್ದ 142 ಜನರನ್ನು ಸಂದರ್ಶಿಸಲಾಗಿದೆ ಎಂದು ದೊಡ್ಡಹುಲ್ಲೂರು ರುಕ್ಕೋಜಿ ಹೇಳಿಕೊಂಡಿದ್ದಾರೆ. ಸಂದರ್ಶನ ನೀಡಿದವರಲ್ಲಿ 20 ಜನ ಇಂದು ಬದುಕಿಲ್ಲ. ಅಲ್ಲದೆ, ರಾಜಕುಮಾರ್ ಜತೆ ಕೆಲಸ ಮಾಡಿದ ಇನ್ನೂ 212 ಜನರ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದೆ.

ರಾಜಕುಮಾರ್ ಜೀವನ ಚರಿತ್ರೆಯ ಈ ಎರಡೂ ಸಂಪುಟಗಳಿಗೆ 7,500 ರೂ. ದರ ನಿಗದಿಪಡಿಸಲಾಗಿದೆ. ಪುಸ್ತಕವು ರಾಜ್ ಅಭಿಮಾನಿಗಳಿಗೆ ಒಂದು ಸಾವಿರ ಅಥವಾ ಅದಕ್ಕಿಂತ ಕಡಿಮೆ ಹಣದಲ್ಲಿ ಸಿಗುವಂತೆ ಮಾಡಲು ಸರ್ಕಾರ ಧನಸಹಾಯ ನೀಡಬೇಕೆಂದು ರುಕ್ಕೋಜಿ ಕೋರಿದರು. [ರಾಜಕುಮಾರ್ ಸ್ಮಾರಕ ಲೋಕಾರ್ಪಣೆ]

ಜೀವನ ಚರಿತ್ರೆಯ ಸಂಶೋಧನೆಗಾಗಿ ಸುಮಾರು 17 ಲಕ್ಷ ರೂ.ಗಳನ್ನು ವ್ಯಯಿಸಿರುವುದಾಗಿ ರುಕ್ಕೋಜಿ ತಿಳಿಸಿದ್ದಾರೆ. ಸಂಶೋಧನೆಗಾಗಿ ನನ್ನ ಆಸ್ತಿ ಮಾರಿ 10 ಲಕ್ಷ ರೂ. ವ್ಯಯಿಸಿದ್ದೇನೆ. ನನ್ನ ಸ್ನೇಹಿತರೊಬ್ಬರು 7 ಲಕ್ಷ ರೂ. ನೀಡಿದ್ದಾರೆ. ಈ ಪುಸ್ತಕವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುದ್ರಿಸಲು ಇನ್ನೂ 70 ಲಕ್ಷ ರೂ.ಗಳು ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಬೇಡರ ಕಣ್ಣಪ್ಪ ಮೊದಲ ಚಿತ್ರ ಅಲ್ಲ: ಜನರು ತಿಳಿದಂತೆ ಡಾ. ರಾಜಕುಮಾರ್ ಅವರ ಮೊದಲ ಚಲನಚಿತ್ರ ಬೇಡರ ಕಣ್ಣಪ್ಪ ಅಲ್ಲ. ಇದಕ್ಕೂ ಮೊದಲೇ ಅವರು 1942ರಲ್ಲಿ ಬಿಡುಗಡೆಗೊಂಡ 'ಪ್ರಹ್ಲಾದ' ಎಂಬ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ರಾಜಕುಮಾರ್ ಅವರ 44 ಚಲನಚಿತ್ರಗಳು ವಿವಿಧ ಕಾರಣಗಳಿಂದ ಅರ್ಧದಲ್ಲಿಯೇ ನಿಂತಿವೆ ಎಂದು ದೊಡ್ಡಹುಲ್ಲೂರು ರುಕ್ಕೋಜಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಖ್ಯಾತ ಹಾಸ್ಯಗಾರ ಗಂಗಾವತಿ ಪ್ರಾಣೇಶ ಅವರು ರಾಜಕುಮಾರ್ ಜೀವನ ಚರಿತ್ರೆ ಪರಿಚಯಿಸುವ ಕರಪುಸ್ತಕವನ್ನು ಬಿಡುಗಡೆ ಮಾಡಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯನಿರ್ವಾಹಕ ಸದಸ್ಯ ಡಾ. ಸ್ವಾಮಿ, ಉಪನ್ಯಾಸಕ ಡಾ. ಕುಂಟಪ್ಪ ಗೌರಿಪುರ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾಂತೇಶ ಮಾಸ್ಕಿ ಮತ್ತು ಇತರರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+