ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್

ಬೆಂಗಳೂರು, ಫೆಬ್ರವರಿ 17 : ಮೆಟ್ರೋ ನಿಲ್ದಾಣದಲ್ಲಿ ಇಳಿದ ಬಳಿಕ ಬಯಸಿದ ಸ್ಥಳ ತಲುಪುವವರೆಗೆ ಸಾರಿಗೆ ಸೇವೆ ಹೊಂದಲು 36 ನಿಲ್ದಾಣಗಳಲ್ಲಿ ಬೈಕ್ ಸೇವೆಗೆ ಚಾಲನೆ ನೀಡಲಾಯಿತು.

ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ನೂತನ ಸೇವೆಗೆ ಚಾಲನೆ ನೀಡಿದರು. ನಗರದಲ್ಲಿ ಒಟ್ಟು 40 ಮೆಟ್ರೋ ನಿಲ್ದಾಣಗಳು ಇವೆ.

ಇದರಲ್ಲಿ ಸಂಪಿಗೆ ರಸ್ತೆ ನಿಲ್ದಾಣ, ಕಬ್ಬನ್ ಉದ್ಯಾನ, ಎಸ್ ಎಂ ವಿಶ್ವೇಶ್ವರಯ್ಯ , ಹೊಸಹಳ್ಳಿ ನಿಲ್ದಾಣವನ್ನು ಹೊರತುಪಡಿಸಿ ಉಳಿದ ನಿಲ್ದಾಣಗಳಲ್ಲಿ ಬೈಕ್ ಸೇವೆ ಲಭ್ಯವಿದೆ. ಮೆಟ್ರೋ ಬೈಕ್ಸ್ ಕಂಪನಿಯು ಸೇವೆ ಆರಂಭಿಸಿದೆ.

Bikes-on-rent service at 36 Namma metro stations

ಮೆಟ್ರೋ ಪ್ರಯಾಣಿಕರು ನಿಲ್ದಾಣದಲ್ಲಿ ಇಳಿದ ಬಳಿಕ ಮನೆಗೆ, ಬಯಸಿದ ಸ್ಥಳಕ್ಕೆ ಹೋಗಲು ಬೈಕ್ ಬಾಡಿಗೆಗೆ ಪಡೆಯಬಹುದು. ನಿಲ್ದಾಣದಿಂದ ಬೈಕ್ ಪಡೆದು ತಾವು ಬಯಸಿದ ಸ್ಥಳದಲ್ಲಿ ಅಥವಾ ಆ ಸ್ಥಳಕ್ಕೆ ಸಮೀಪದ ಅಧಿಕೃತ ಪಾರ್ಕಿಂಗ್ ನಲ್ಲಿ ನಿಲುಗಡೆ ಮಾಡಬೇಕು. ಬಳಿಕ ಕಂಪನಿಯ ಸಿಬ್ಬಂದಿ ಮತ್ತೊಬ್ಬರಿಗೆ ಬೈಕ್ ಬಾಡಿಗೆಗೆ ನೀಡುತ್ತಾರೆ. ಈ ವ್ಯವಸ್ಥೆ ಸಂಪೂರ್ಣವಾಗಿ ಅಪ್ಲಿಕೇಷನ್ ನಿಂದ ಕಾರ್ಯನಿರ್ವಹಿಸುತ್ತದೆ.

ಮೆಟ್ರೋ ಬೈಕ್ಸ್ ಅಪ್ಲಿಕೇಷನ್ ನಲ್ಲಿ ಬೈಕ್ ಬಾಡಿಗೆಗೆ ಪಡೆದರೆ ಮೊಬೈಲ್ ಗೆ ಓಟಿಪಿ ಸಂಖ್ಯೆ ಬರುತ್ತದೆ. ಈ ಬೈಕ್ ನಲ್ಲಿ ಕೀ ಇಲ್ಲ. ಕೀ ಜಾಗದಲ್ಲಿ ಸಣ್ಣ ಪರದೆ ಇದ್ದು, ಇದರಲ್ಲಿ ಓಟಿಪಿ ಸಮೂದಿಸಿ ಬೈಕ್ ಚಾಲನೆ ಮಾಡಬಹುದು.

ತಾವು ಬಯಸಿದ ಸ್ಥಳವನ್ನು ತಲುಪಿದ ನಂತರ ಎಲ್ಲೆಂದರಲ್ಲಿ ಬೈಕ್ ನಿಲ್ಲಿಸುವಂತಿಲ್ಲ. ಅಧಿಕೃತ ಪಾರ್ಕಿಂಗ್ ನಿಲುಗಡೆ ಮಾಡಿ ಮತ್ತೊಮ್ಮೆ ಓಟಿಪಿ ಪಡೆದು ಬಂದ್ ಮಾಡಬಹುದು.

ಬೇರೆಯವರು ಬೈಕ್ ಚಾಲೂ ಮಾಡಲು ಯತ್ನಿಸಿದರೆ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಕಿ.ಮೀಗೆ 5 ರೂ. ಮತ್ತು ನಿಮಿಷಕ್ಕೆ 5 ಪೈಸೆಯಂತೆ ಶುಲ್ಕ ವಿಧಿಸಲಾಗುತ್ತದೆ. ಮನೆಗೆ ಕೊಂಡೊಯ್ಯಲು ಕಿ.ಮೀ ಗೆ 6.50 ರೂ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+