'ಚಿತ್ರಾಲ್ ಬಹಳ ಸ್ಟ್ರಾಂಗ್ ವುಮೆನ್': ನೆಗೆಟಿವ್ ಕಮೆಂಟ್ ಮಾಡುವವರ ವಿರುದ್ಧ ವಿನಯ್ ಗೌಡ ಗರಂ
ಬೆಂಗಳೂರು, ಜೂನ್ 30: ಮಹಿಳೆಯರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸುತ್ತಿದ್ದ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ. ನಟಿ, ಮಾಡೆಲ್ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ, ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಸಹ ಇದೇ ಆರೋಪ ಮಾಡಿದ್ದರು.
ನಟಿಯರು ವಿಡಿಯೋ ಮೂಲಕ ನೇರವಾಗಿ ಈ ಆರೋಪ ಮಾಡಿದ ಬಳಿಕ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವವರ ಬಗ್ಗೆ ನಟ ವಿನಯ್ ಗೌಡ ಮಾತನಾಡಿದ್ದು, ನೀವು ಮಾಡುತ್ತಿರುವುದು ಸರಿನಾ ನಿಮಗೆ ನೀವು ಪ್ರಶ್ನಿಸಿಕೊಳ್ಳಿ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗೌಡ, ಆ ಒಂದು ಫೇಕ್ ಅಕೌಂಟ್ ಅನೇಕರಿಗೆ ಕೆಟ್ಟ ಮೆಸೇಜ್ ಹೋಗಿತ್ತು ಎನ್ನುವುದು ಗೊತ್ತಾಗುತ್ತಿದೆ. ನಾನು ಇಲ್ಲಿ ಪವಿತ್ರಾ ಗೌಡ ಬಗ್ಗೆ ಮಾತನಾಡುತ್ತಿಲ್ಲ, ದರ್ಶನ್ ಸರ್ ಬಗ್ಗೆ ಮಾತನಾಡುತ್ತಿಲ್ಲ. ಈ ಅಕೌಂಟ್‌ಯಿಂದ ಹೋಗಿದೆ ಅಂದಾಗ ಪ್ರತಿಯೊಬ್ಬರು ಚೆಕ್ ಮಾಡಿದ್ದಾರೆ. ಚೆಕ್ ಮಾಡಿದಾಗ ಮೆಸೇಜ್‌ಗಳು ಸಿಕ್ಕಿದೆ. ಫೋಟೋಗಳು ಸಿಕ್ಕಿದೆ. ಇನ್ನೊಂದು ಮತ್ತೊಂದು ಸಾಕಷ್ಟು ಆಗಿದೆ. ಇವೆಗೆಲ್ಲಾ ಹೊರಗೆ ಬರುತ್ತಿದೆ ಅಷ್ಟೆ.
ಚಿತ್ರಾಲ್ ಬಹಳ ಸ್ಟ್ರಾಂಗ್ ವುಮೆನ್. ಆಕೆ ಧೈರ್ಯವಾಗಿ ಬಂದು ನನಗೆ ಈ ರೀತಿ ಕೆಟ್ಟ ಕಾಮೆಂಟ್ ಮಾಡಿದ್ದ ಈ ಫೇಕ್ ಅಕೌಂಟ್ ಇಂದ ಎಂದಾಗ ಯಾಕೆ ಅದನ್ನು ಒಪ್ಪುತ್ತಿಲ್ಲ. ಯಾಕೆ ಆಕೆ ಮೇಲೆಯೆ ಕೆಟ್ಟದಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಯಾಕೆ ಅವರೇ ಸರಿ ಇಲ್ಲ ಎನ್ನುತ್ತಿದ್ದಾರೆ.
ಹೆಣ್ಣು ಮಕ್ಕಳು ಯಾವ ರೀತಿಯ ಬಟ್ಟೆ ಹಾಕಿದರೂ ಕಾಮೆಂಟ್ ಮಾಡುತ್ತಾರೆ. ಎಷ್ಟೇ ಡಿಸೆಂಟ್ ಆಗಿದ್ದರೂ ಕಮೆಂಟ್ ಮಾಡುತ್ತಾರೆ. ಬಿಕಿನಿ ಹಾಕಿಕೊಂಡರೂ ಏನೇನೋ ಹೇಳುತ್ತಾರೆ. ಕಮೆಂಟ್ ಮಾಡುತ್ತಾರೆ. ಆಕೆ ಬಿಕಿನಿ ಮಾಡೆಲ್, ಅವರ ವೃತ್ತಿ ಅದು. ಅದರ ಮೇಲೂ ಕಾಮೆಂಟ್ಸ್ ಮಾಡಿದ್ದಾರೆ.
ಕೆಟ್ಟದಾಗಿ ಫೋಟೊ ಕಳುಹಿಸಿ, ನನ್ನತ್ರ ಬಾ ಅಂತೆಲ್ಲಾ ಕೇಳ್ತಾರೆ ಅಂದ್ರೆ, ಅದು ಸರೀನಾ? ನಾನು ಅವರೇ ಮಾಡಿದ್ದಾರೆ ಎನ್ನುತ್ತಿಲ್ಲ. ಆದರೆ ಮಾಡಿದವರಿಗೆ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ನೀವು ಮಾಡೋದು ಸರೀನಾ? ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರುತ್ತಾರಲ್ಲ. ಯಾರಾದರೂ ಫೋಟೊ ಕಳುಹಿಸಿ ಅಂತಹ ಮಸೇಜ್ ಕಳುಹಿಸಿದರೆ ನೋವಾಗುತ್ತದೆ ಅಲ್ಲವೇ? ಪ್ರತಿಯೊಬ್ಬರಿಗೂ ಒಂದು ಸ್ವಾಭಿಮಾನ ಅಂತಾ ಇದೆ. ಅವರ ಸುತ್ತಮುತ್ತ ಇರುವವರ ಮೇಲೆ ಪ್ರೀತಿ ವಿಶ್ವಾಸ ಇರುತ್ತದೆ. ಅವರಿಗೆ ತೊಂದರೆ ಆದರೆ ತಲೆಯಲ್ಲಿ ಶೇಕ್ ಆಗುತ್ತದೆ ಎಂದರು.












Click it and Unblock the Notifications