ವನಸ್ಥಾ ಆಗ್ರೋ ಫುಡ್ಸ್ ರಾಯಭಾರಿಯಾದ ನಟ ಶೈನ್ ಶೆಟ್ಟಿ

ಬೆಂಗಳೂರು/ಮಂಗಳೂರು, ಡಿ. 20: ನಾಡಿನಾದ್ಯಂತ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸುವ ದೃಷ್ಟಿಯಿಂದ ಆಹಾರ - ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರುವ ಬಿಗ್ ಬಾಸ್ ಸೀಸನ್-7ರ ವಿಜೇತ ಹಾಗೂ ಉದಯೋನ್ಮುಖ ಚಲನಚಿತ್ರ ನಟ ಶೈನ್ ಶೆಟ್ಟಿ ಅವರನ್ನು ''ವನಸ್ಥಾ'' ಉತ್ಪನ್ನಗಳ ರಾಯಭಾರಿಯಾಗಿ ನಿಯೋಜಿಸಲಾಗಿದೆ.

ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಸಮಾರಂಭದಲ್ಲಿ ಶೈನ್ ಶೆಟ್ಟಿಯವರೊಂದಿಗೆ ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ ಅವರೂ ಭಾಗವಹಿಸಿದ್ದರು.

Bigg Boss Kannada 7 winner Shine Shetty Vanastha Agro Foods Ambassador

ಅವಧೂತ ವಿನಯ ಗುರೂಜಿ ದಿವ್ಯಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾದ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ನಟರಾಜ್ ಕಲ್ಯಾಣಿ ಮತ್ತು ನಿರ್ದೇಶಕರಾದ ಶ್ರೀಯುತ ರಾಮ್ ಪ್ರದೀಪ್ ಆಚಾರ್, ಆರ್ಥಿಕ ಸಲಹೆಗಾರರಾದ ಆನಂದ ಪಿ. ಎಸ್., ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕರಾದ ವಿಶ್ವಜ್ಞಾಚಾರ್, ಪ್ರಾದೇಶಿಕ ವ್ಯವಸ್ಥಾಪಕರಾದ ಧನಂಜಯ್ ನೆಲ್ಯಾಡಿ ಹಾಗೂ ವಿತರಕರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ವನಸ್ಥಾ

ವನಸ್ಥಾ ಕಂಪೆನಿಯ ತಯಾರಿಕಾ ಘಟಕವು ಪಶ್ಚಿಮ ಘಟ್ಟದ ಶ್ರೇಣಿಗಳ ಮಡಿಲಲ್ಲಿರುವ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮರುವಂತಿಲ ಎಂಬಲ್ಲಿ ಕಾರ್ಯಾಚರಿಸುತ್ತಿದೆ.

Bigg Boss Kannada 7 winner Shine Shetty Vanastha Agro Foods Ambassador

Recommended Video

      Team India ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿಕೊಟ್ಟ Mike Hussey | Oneindia Kannada

      ಪಾರಂಪರಿಕ ರುಚಿ ಮತ್ತು ನೈಸರ್ಗಿಕ ಆಹಾರೋತ್ಪನ್ನಗಳನ್ನು ಉತ್ಪಾದಿಸಲು ಉದ್ದೇಶಿಸಲಾಗಿದೆ. ಯಾವುದೇ ಕೃತಕ ಬಣ್ಣ, ರಾಸಾಯನಿಕಗಳನ್ನು, ಸಂರಕ್ಷಕಗಳನ್ನು ಬಳಸದೆ; ಗ್ರಾಹಕರ ಆರೋಗ್ಯದ ಏಕನಿಷ್ಠ ಕಾಳಜಿಯೊಂದಿಗೆ ನೈಸರ್ಗಿಕವಾಗಿ ಆಹಾರ ಪದಾರ್ಥಗಳು ಹಾಗೂ ಮಸಾಲೆಗಳು ಉತ್ಪಾದಿಸಲ್ಪಡುತ್ತಿವೆ.

      ಆರಂಭಿಕ ಹಂತದಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಜನರಿಗೆ ತಲುಪಿಸಿ ಅವರ ಅಭಿಪ್ರಾಯ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ಪಡೆದುಕೊಂಡು ಗುಣಮಟ್ಟಕ್ಕೆ ಆದ್ಯತೆ ನೀಡಿ ಸಂಶೋಧನಾ ವಿಭಾಗವನ್ನು ಉನ್ನತೀಕರಿಸುತ್ತಾ ವನಸ್ಥಾ ಮುನ್ನಡೆಯುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+