ಬೆಂಗಳೂರು: ಪತ್ನಿ ₹13,00,000, ಕುಟುಂಬಸ್ಥರು ₹17 ಲಕ್ಷ ಕಿತ್ತುಕೊಂಡ್ರು.. ಬೆಡ್‌ರೂಂ ವಿಡಿಯೋ ಶೂಟ್ ಕೇಸ್‌ಗೆ ಬಿಗ್ ಟ್ವಿಸ್ಟ್
ಬೆಂಗಳೂರು, ಅಕ್ಟೋಬರ್ 5: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಹಿಳೆಯೊಬ್ಬಳು ತನ್ನ ಪತಿ ಬೆಡ್‌ರೂಂನಲ್ಲಿ ಕಳೆದ ಖಾಸಗಿ ವಿಡಿಯೋವನ್ನು ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಳು. ಆದರೆ ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಾಮಾನ್ಯವಾಗಿ ಯಾವುದೇ ಪ್ರಕರಣಗಳು ದಾಖಲಾದರೂ ಪೊಲೀಸರು ಅದನ್ನು ಮೊದಲು ತನಿಖೆ ಮಾಡಿ ಬಳಿಕ ಸತ್ಯಾಸತ್ಯತೆಯನ್ನು ಜಾಲಾಡುತ್ತಾರೆ. ಅದರಲ್ಲೂ ಪ್ರೇಮಿಗಳ ಜಗಳ, ಗಂಡ-ಹೆಂಡತಿ ಜಗಳದಂತಹ ಪ್ರಕರಣಗಳನ್ನು ಎರಡು ಕಡೆಯಿಂದಲೂ ಹೇಳಿಕೆ ದಾಖಲಿಸಿಕೊಳ್ಳುತ್ತಾರೆ. ಬಳಿಕ, ಸತ್ಯವನ್ನು ಹೊರಗೆಳೆಯುತ್ತಾರೆ.

ಇನ್ನೂ ಇತ್ತೀಚೆಗಷ್ಟೇ ಮಹಿಳೆಯೊಬ್ಬರು ತನ್ನ ಪತಿ ಬೆಡ್‌ರೂಂನಲ್ಲಿ ಕ್ಯಾಮೆರಾ ಇಟ್ಟು ನಾವು ಜೊತೆಗೆ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ. ಬಳಿಕ ಸ್ನೇಹಿತರಿಗೆ ಶೇರ್ ಮಾಡಿದ್ದಾರೆ ಎಂದು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಇದೀಗ ಈ ಆರೋಪವನ್ನು ಪತಿ ತಳ್ಳಿಹಾಕಿದ್ದಾನೆ.
ಬೆಂಗಳೂರಿನ ಬೆಡ್‌ರೂಮ್ ವಿಡಿಯೋ ಪ್ರಕರಣದಲ್ಲಿ, ಆರೋಪಿ ಪತಿ ಸೈಯದ್ ಇನಾಮುಲ್ ಹಕ್ ವಿಡಿಯೋ ಬಿಡುಗಡೆ ಮಾಡಿ ಪತ್ನಿಯ ಎಲ್ಲಾ ಆರೋಪಗಳನ್ನ ತಳ್ಳಿಹಾಕಿದ್ದಾನೆ. ನಾವು ಪತ್ನಿಗೆ ಯಾವುದೇ ಮೋಸ, ಬ್ಲಾಕ್‌ಮೇಲ್ ಮಾಡಿಲ್ಲ, ಬದಲಾಗಿ ತನ್ನ ಪತ್ನಿಯೇ ಹೇಗೆ ಬೇಕೋ ಹಾಗೆ ನಡೆಸಿಕೊಂಡು ಕಿರುಕುಳ ನೀಡುತ್ತಿದ್ದಳು ಎಂದು ಆರೋಪ ಮಾಡಿದ್ದಾನೆ.
ಹೀಗೆ ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಆರೋಪ ಪ್ರಕರಣ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರೋಪ ಮಾಡಿದ್ದ ಮಹಿಳೆಯ ಪತಿ ಸೈಯದ್ ಇನಾಮುಲ್ ಹಕ್ ವಿಡಿಯೋ ಬಿಡುಗಡೆ ಮಾಡಿದ್ದು, ತಮ್ಮ ಮೇಲಿನ ಆರೋಪಗಳ ಸಂಬಂಧ ಪ್ರತಿಕ್ರಿಯೆ ನೀಡಿದ್ದಾನೆ. ಸೈಯದ್ ಇನಾಮುಲ್ ಹಕ್ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಅಗಿದೆ ಎಂದು ತಿಳಿದುಬಂದಿ.
ಪತಿ ಸೈಯದ್ ಇನಾಮುಲ್ ಹಕ್ 21 ಮದುವೆ ಆಗಿದ್ದಾನೆ ಎಂದು ಮಹಿಳೆ ಅರೋಪ ಮಾಡಿದ್ದಳು. ಪತ್ನಿಯ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ ಸೈಯದ್ ಇನಾಮುಲ್ ಹಕ್, ವಿವಾಹದ ಮುಂಚೆಯೇ ಆಕೆಯೊಂದಿಗೆ ಸಂಬಂಧ ಹೊಂದಿದ್ದು ನಿಜ. ಆಕೆಯೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಕಾರಣ ಇಬ್ಬರ ನಡುವೆ ಸಂಬಂಧ ಬೆಳೆಯಿತು. ಆದ್ದರಿಂದ ಆಕೆಯನ್ನು ವಿವಾಹ ಆದೆ ಎಂದು ಹೇಳಿಕೆ ನೀಡಿದ್ದಾನೆ.
ಪತ್ನಿ ಅವಳಿಗೆ ಹೇಗೆ ಬೇಕೋ ಹಾಗೆ ನಡೆಸಿಕೊಂಡು ನನಗೆ ತುಂಬಾ ತೊಂದರೆ ಕೊಡುತ್ತಿದ್ದಳು. ಇದಕ್ಕೂ ಮುಂಚೆ ನನಗೆ ಮದುವೆ ಆಗಿತ್ತು. ಆ ವಿಷಯ ಆಕೆಗೂ ತಿಳಿದಿತ್ತು. ಇದೆಲ್ಲಾ ವಿಷಯವನ್ನು ತಿಳಿದುಕೊಂಡೇ ಆಕೆಯ ಪೋಷಕರು ನಮ್ಮಿಬ್ಬರ ವಿವಾಹ ಮಾಡಿಸಿದ್ದಾರೆ. ಪತ್ನಿಯ ಕುಟುಂಬಸ್ಥರು ನನ್ನಿಂದ 17,00,000 ರೂಪಾಯಿ ವಸೂಲಿ ಮಾಡಿದ್ದಾರೆ. ಪತ್ನಿಗೆ 13,00,000 ರೂಪಾಯಿ ಮೌಲ್ಯದ ಒಡವೆಗಳನ್ನು ಕೊಡಿಸಿದ್ದೇನೆ ಎಂದು ಸೈಯದ್ ಇನಾಮುಲ್ ಹಕ್ ವಿಡಿಯೋದಲ್ಲಿ ಹೇಳಿದ್ದಾನೆ.
ಪತ್ನಿ ನನ್ನ ಮೇಲೆ ಮಾಡುತ್ತಿರುವ ಆರೋಪಗಳೆಲ್ಲವೂ ನಿಜವಲ್ಲ. ಪತ್ನಿಯ ಅಕ್ಕಳಿಗೂ ಎರಡು ಬಾರಿ ಡಿವೋರ್ಸ್ ಆಗಿದೆ. ಆಕೆಯೂ ಮಾಜಿ ಪತಿಗಳಿಂದ ಹಣ ವಸೂಲಿ ಮಾಡಿದ್ದಾರೆ. ನಾನು ಆಕೆಯನ್ನು ಪ್ರೀತಿಸಿ ಮದುವೆ ಆಗಿದ್ದೇನೆ. ಯಾವ ವ್ಯಕ್ತಿ ತನ್ನ ಹೆಂಡತಿ ವಿಡಿಯೋ ಮಾಡಿ ಬೇರೆಯವರಿಗೆ ಕಳುಹಿಸುತ್ತಾನೆ ಹೇಳಿ? ಎಂದು ಆರೋಪಿ ಸೈಯದ್ ಇನಾಮುಲ್ ಹಕ್ ಪ್ರಶ್ನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ನನ್ನ ಪತ್ನಿ ನನ್ನ ತಂದೆ-ತಾಯಿಗೆ ಪ್ರತಿ ನಿತ್ಯ ಚಿತ್ರ ಹಿಂಸೆ ನೀಡುತ್ತಿದ್ದಳು. ಆಗಲೂ ಸಹ ನಾನು ಸಿಸಿಟಿವಿ ಹಾಕಿಸಿಲ್ಲ. ನಾನು ಯಾವುದೇ ವಿಡಿಯೋ ಶೂಟ್ ಮಾಡಿಲ್ಲ. ಪತ್ನಿಯ ಆರೋಪಗಳಿಂದ ನೊಂದಿದ್ದೇನೆ ಎಂದು ಸೈಯದ್ ಇನಾಮುಲ್ ಹಕ್ ಅಳಲು ತೋಡಿಕೊಂಡಿದ್ದಾನೆ. ಅಲ್ಲದೆ, ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡುತ್ತಿರುವ ಕೆಲವೊಂದು ವಿಡಿಯೋಗಳನ್ನು ಆರೋಪಿ ಹಂಚಿಕೊಂಡಿದ್ದಾನೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಇಂತಹವರನ್ನು ನೋಡಿದ ಮೇಲೆ ಈಗಿನ ಕಾಲದಲ್ಲಿ ಯಾರನ್ನ ನಂಬಬೇಕೋ ಬಿಡಬೇಕೋ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಜನರಲ್ಲಿ ಮೂಡಿಬಿಡುತ್ತದೆ. ಹೀಗೆ ಯಾರೋ ಮಾಡಿದ ಇಂತಹ ತಪ್ಪುಗಳಿಂದ ಇನ್ನಿತರರ ಮೇಲೂ ಪರಿಣಾಮ ಬೀರುತ್ತಿದೆ.












Click it and Unblock the Notifications