ಬೆಂಗಳೂರಿನ ಈ ಭಾಗದ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಬಿಗ್‌ಶಾಕ್!
ಬೆಂಗಳೂರಿನ ಈ ಭಾಗದ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಬಿಗ್‌ಶಾಕ್ ಎದುರಾಗಿದೆ. ಬೆಂಗಳೂರಿನಲ್ಲಿ ಹಾಗೂ ಕರ್ನಾಟಕದಲ್ಲಿ ಕೆಲವೊಂದು ಆಸ್ತಿದಾರರಿಗೆ ಬಿ ಖಾತಾದಿಂದ ಎ ಖಾತಾ ಗುಡ್‌ನ್ಯೂಸ್ ಹಾಗೂ ಕೆಲವೊಂದು ನಿರ್ದಿಷ್ಟ ಕಟ್ಟಡಗಳ ನಿರ್ಮಾಣಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ಬೇಡ ಎಂದು ರಾಜ್ಯ ಸರ್ಕಾರವು ಈಚೆಗೆ ಅಧಿಸೂಚನೆ ಹೊರಡಿಸಿತ್ತು. ಆದರೆ ಇದೀಗ ರಾಜ್ಯದಲ್ಲಿ ಕೆಲವೊಂದು ಕಟ್ಟಡಗಳ ಬಗ್ಗೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತವು ಗಂಭೀರವಾದ ಕ್ರಮಗಳನ್ನು ತೆಗೆದುಕೊಂಡಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ಕೆಲವೊಂದು ನಿರ್ದಿಷ್ಟ ಕಟ್ಟಡಗಳ ವಿಚಾರದಲ್ಲಿ ಸ್ಥಳೀಯ ಆಡಳಿತವು ಕೆಲವೊಂದು ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ನೇತೃತ್ವದಲ್ಲಿ ಸೋಮವಾರ ಇಂಜಿನಿಯರಿಂಗ್ ವಿಭಾಗದ ಸಮನ್ವಯ ಸಭೆ ನಡೆಸಲಾಗಿದ್ದು ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಈ ಸಭೆಯಲ್ಲಿ ಕೆಲವೊಂದು ಪ್ರಾಪರ್ಟಿಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯ ಸಿವಿಲ್ ಕಾಮಗಾರಿಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಲಾಗಿದೆ.
1. ಪೂರ್ಣಗೊಂಡಿರುವ ಕಾಮಗಾರಿಗಳು.
2. ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ 3. ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳು ಎಂಬ ವಿವರವಾದ ಪಟ್ಟಿಯೊಂದಿಗೆ ಕಲರ್ ಕೋಡ್ ಬಳಸಿ ಡಿಜಿಟಲ್ ನಕ್ಷೆ ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ವಿಭಾಗಗಳು, 24 ಉಪ ವಿಭಾಗಗಳು ಹಾಗೂ 50 ವಾರ್ಡ್‌ಗಳನ್ನು (ಕರಡು) ರಚಿಸಿದ್ದು, ಇನ್ನೊಂದು ವಾರದೊಳಗೆ ಎಲ್ಲಾ ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ, ಹಾಗೂ ಸಹಾಯಕ ಎಂಜಿನಿಯರರು ತಮ್ಮ ವಿಭಾಗ, ಉಪವಿಭಾಗ ಹಾಗೂ ವಾರ್ಡ್ ಮಟ್ಟದ ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕೆಂದು ನಿರ್ದೇಶನ ನೀಡಿದ್ದಾರೆ.
ಬಿಟಿಪಿ ಅಸ್ತ್ರಂ, ರಸ್ತೆ ಗುಂಡಿ ಗಮನ ಹಾಗೂ ಸಹಾಯ ಆಪ್‌ಗಳಲ್ಲಿ ದಾಖಲಾಗಿರುವ ರಸ್ತೆ ಗುಂಡಿ ಮುಚ್ಚುವ ಕಾರ್ಯದ ಪ್ರಗತಿ ಮಾಹಿತಿಯನ್ನು ನವೀಕರಿಸಿ, ಪೂರ್ಣಗೊಂಡ ಕಾರ್ಯಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಅಸ್ತ್ರಂ ಆಪ್ ನಲ್ಲಿ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಆಯುಕ್ತರು, ಅಪರ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರರು ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡುಗಳಿಗೆ ವೇಳಾ ಪಟ್ಟಿಮಾಡಿಕೊಂಡು ಪ್ರತಿ ದಿನ ಭೇಟಿ ನೀಡಿ, ವಾರ್ಡ್ ಮಟ್ಟದ ಸ್ಥಳೀಯ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಲಾಗುವುದು ಅಲ್ಲಿ ಕಂಡುಬರುವ ಸಮಸ್ಯೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದಿದ್ದಾರೆ.
ಹೊಸದಾಗಿ ರಚಿಸಲಾದ ಎಂಜಿನಿಯರಿಂಗ್ ವಿಭಾಗದ ಅಡಿಯಲ್ಲಿ ಆರ್ಟರಿಯಲ್, ಸಬ್-ಆರ್ಟರಿಯಲ್, ಮೇಜರ್ ರಸ್ತೆಗಳು, ಕೆರೆಗಳು ಹಾಗೂ ಬೃಹತ್ ರಾಜಕಾಲುವೆಗಳು ಇನ್ನಿತರೆ ಅಭಿವೃದ್ಧಿ ಸಂಬಂಧಿತ ಎಲ್ಲಾ ಪ್ರಮುಖ ಎಂಜಿನಿಯರಿಂಗ್ ಕೆಲಸ ಕಾರ್ಯಗಳು ವಿಭಾಗ ಮಟ್ಟದ ಕಾರ್ಯಪಾಲಕ ಎಂಜಿನಿಯರಿಂಗ್ ಅಧೀನದಲ್ಲಿ ಬರುವುದರಿಂದ, ಇದರ ಕುರಿತು ಎಲ್ಲಾ ಎಂಜಿನಿಯರ್‌ರಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡುವ ಕಾರ್ಯಾಗಾರವನ್ನು (Workshop) ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ: ಇನ್ನು ಬೆಂಗಳೂರಿನ ಈ ಭಾಗದಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಗಳ ವಿರುದ್ಧ ನಿರ್ದಾಕ್ಷ್ಯಾಣವಾಗಿ ಕ್ರಮ ಕೈಗೊಂಡು, ಪ್ರತಿ ವಾರ ವಿಭಾಗಕ್ಕೆ ಒಂದರಂತೆ 8 ವಿಭಾಗಗಳಿಂದ ಒಟ್ಟು 8 ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಶಾಕ್ ಎದುರಾಗಿದೆ.
ಸಭೆಯಲ್ಲಿ ಅಭಿವೃದ್ಧಿ ಕಾರ್ಯಗಳ ವೇಗ, ಗುಣಮಟ್ಟ ಮತ್ತು ಸಮನ್ವಯತೆ ಕುರಿತು ಚರ್ಚೆ ನಡೆಸಲಾಯಿತು. ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಅಪರ ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications