Get Updates
Get notified of breaking news, exclusive insights, and must-see stories!

BIFFes 2023 : ಮಾರ್ಚ್ 23ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ, 200ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ

ಈ 14 ನೇ ಆವೃತ್ತಿಯು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ವಿ.ಕೆ ಮೂರ್ತಿ ಅವರ ಶತಮಾನೋತ್ಸವದ ನೆನಪಿನಲ್ಲಿ ನಡೆಯಲಿದೆ.

ಬೆಂಗಳೂರು, ಮಾರ್ಚ್ 15: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (ಬಿಫ್ಸ್) 14 ನೇ ಆವೃತ್ತಿಯು ಯುಗಾದಿಯ ಮರುದಿನ ಮಾರ್ಚ್ 23 ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅದ್ದೂರಿ ಉದ್ಘಾಟನೆಗೆ ಸಿದ್ಧವಾಗಿದೆ.

ಚಲನಚಿತ್ರೋತ್ಸವದ ಈ 14 ನೇ ಆವೃತ್ತಿಯು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ವಿ.ಕೆ ಮೂರ್ತಿ ಅವರ ಶತಮಾನೋತ್ಸವದ ನೆನಪಿನಲ್ಲಿ ನಡೆಯಲಿದ್ದು, ಅವರು ಚಿತ್ರೀಕರಿಸಿದ ಹಲವಾರು ಚಲನಚಿತ್ರಗಳನ್ನು ಪ್ರದರ್ಶಿಸಿಸಲಾಗುತ್ತದೆ. ಚಲನಚಿತ್ರೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಆಯೋಜಿಸಿದೆ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮೇಲ್ವಿಚಾರಣೆ ಮಾಡುತ್ತದೆ.

BIFFES Set for Grand Inauguration on March 23 In Bengaluru

ಈ ಬಾರಿಯ ಚಿತ್ರೋತ್ಸವ ಮಾರ್ಚ್ 23 ರಿಂದ ಮಾರ್ಚ್ 30, 2023 ರವರೆಗೆ ನಡೆಯಲಿದೆ. ಒರಾಯನ್ ಮಾಲ್ ನ 11 ಪರದೆಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಇದರ ಜೊತೆಗೆ ಚಲನಚಿತ್ರ ಕಲಾವಿದರ ಸಂಘ ಮತ್ತು ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಚಿತ್ರ ಪ್ರದರ್ಶನ ನಡೆಯಲಿದೆ.

ಕನ್ನಡ, ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿನ ಸ್ಪರ್ಧಾತ್ಮಕ ವಿಭಾಗಗಳ ಹೊರತಾಗಿ, ಚಲನಚಿತ್ರೋತ್ಸವದಲ್ಲಿ ಸೆನೆಗಲ್, ಇರಾನ್, ದಕ್ಷಿಣ ಕೊರಿಯಾ ಮತ್ತು ರಷ್ಯಾದ ಚಲನಚಿತ್ರಗಳು ಇರಲಿವೆ. ಈ ಬಾರಿಯ ಉತ್ಸವದಲ್ಲಿ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕನ್ನಡ ಸಿನಿಮಾಗಳಲ್ಲಿ 19.20.21 ಕೂಡ ಆಯ್ಕೆಯಾಗಿದ್ದು, ನಿರ್ದೇಶಕ ಮನ್ಸೋರೆ ಖುಷಿ ಹಂಚಿಕೊಂಡಿದ್ದಾರೆ. "ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಿನೆಮಾ ಕಲಿಕೆಗೆ ನನಗೆ ವಿಶ್ವವಿದ್ಯಾಲಯವಿದ್ದಂತೆ. ನಿರ್ದೇಶನಕ್ಕೆ ಧೈರ್ಯ, ಸ್ಪೂರ್ತಿ, ವಿಭಿನ್ನ ಮಾದರಿಯ ವಿಷಯಗಳು ಕತೆಗಳಾಗಬಹುದು ಎಂದು ಗೊತ್ತಾಗಿದ್ದೆ Bengaluru International Film Festival ಅಲ್ಲಿ. ಅಂತಹ ಮುಖ್ಯ ಚಲನಚಿತ್ರೋತ್ಸವದಲ್ಲಿ ಸತತವಾಗಿ ನನ್ನ ನಾಲ್ಕೂ ಸಿನೆಮಾಗಳು ಆಯ್ಕೆಯಾಗಿರುವುದಕ್ಕೆ ತುಂಬಾ ಖುಷಿ ಇದೆ. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಅದಕ್ಕೆ ಸೂಕ್ತ ಫಲಿತಾಂಶ ಒಂದಲ್ಲಾ ಒಂದು ರೂಪದಲ್ಲಿ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇದೇ ಉದಾಹರಣೆ" ಎಂದಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ 13ನೇ ಆವೃತ್ತಿಯು 45 ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳನ್ನು 13 ಪರದೆಗಳಲ್ಲಿ ಪ್ರದರ್ಶನ ಮಾಡಿತ್ತು. 8000 ಕ್ಕೂ ಹೆಚ್ಚು ಸಿನಿಮಾಸಕ್ತರು ಭಾಗಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+