ಬಿಚ್ಚುಗತ್ತಿ ಪುಸ್ತಕ ಲೋಕಾರ್ಪಣೆ ಮಾಡಲಿರುವ ಯದುವೀರ
ಬೆಂಗಳೂರು, ನವೆಂಬರ್ 20 : ಸಾಹಿತ್ಯ ಸಿಂಧು ಪ್ರಕಾಶನವು ಇಂಡಿಯನ್ ಹಿರೋಯಿಸಮ್ ಇನ್ ಇಸ್ರೇಲ್ ಪುಸ್ತಕದ ಕನ್ನಡಾನುವಾದ" ಬಿಚ್ಚುಗತ್ತಿ " ಪುಸ್ತಕ ಬಿಡುಗಡೆ ಸಮಾರಂಭವನ್ನು ನವೆಂಬರ್ 25ರಂದು ಆಯೋಜಿಸಿದೆ.
ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಸಭಾಂಗಣದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಪ್ರಚಾರ ಪ್ರಮುಖರಾಗಿರುವ ಪ್ರದೀಪ ಮೈಸೂರು ಅವರು ಅನುವಾದಿಸಿರುವ ಕೃತಿ ಇದಾಗಿದೆ. ರಂಗ ಕಲಾವಿದರಾದ ಪ್ರಕಾಶ್ ಬೆಳವಾಡಿ, ತುಮಕೂರು ವಿವಿಯ ಪತ್ರಿಕೋದ್ಯಮ ವಿಭಾಗದ ಸಿಬಂತಿ ಪದ್ಮನಾಭ, ದಿ ಮಿಥಿಕ್ ಸೊಸೈಟಿ ಗೌರವ ಕಾರ್ಯದರ್ಶಿ ವಿ. ನಾಗರಾಜ್ ಪಾಲ್ಗೊಳ್ಳಲಿದ್ದಾರೆ.
ಪುಸ್ತಕ-ಚಿತ್ತುಗತ್ತಿ
ಬಿಡುಗಡೆ- ಯದುವೀರ ಕೃಷ್ಣದತ್ತ ಒಡೆಯರ್
ಸ್ಥಳ-ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣ ಬಸವನಗುಡಿ
ದಿನಾಂಕ, ವೇಳೆ- ನವೆಂಬರ್ 25, ಬೆಳಗ್ಗೆ 10












Click it and Unblock the Notifications