ಮೊಬೈಲ್‌ನಲ್ಲಿ ಲೊಕೇಶನ್ ನೋಡಿಕೊಂಡು ಗಾಡಿ ಓಡಿಸ್ತೀರಾ ಹುಷಾರು!
ನೀವು ನಿಮ್ಮ ಮೊಬೈಲ್ ನಲ್ಲಿ ಲೊಕೇಶನ್ ನೋಡ್ಕೊಂಡು ಗಾಡಿ ಓಡಿಸ್ತೀರಾ ಹಾಗಿದ್ದರೆ ನೀವು ತಪ್ಪದೇ ಈ ಸುದ್ದಿಯನ್ನು ಓದಲೇಬೇಕು. ಈಗೆಲ್ಲ ಸಾಮಾನ್ಯವಾಗಿ ಬೈಕ್‌ನ ರೈಟ್ ಸೈಡ್ ಇಲ್ಲವೇ ಲೆಫ್ಟ್ ಸೈಡ್‌ನಲ್ಲಿ ಮೊಬೈಲ್ ಹೋಲ್ಡ್‌ರ್ ಹಾಕಿಕೊಂಡು ವಾಹನ ಚಲಾಯಿಸೋದು ಸಾಮಾನ್ಯ. ಆದರೆ, ಇದನ್ನೇ ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈ ರೀತಿಯ ಘಟನೆಯೊಂದು ವರದಿಯಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ಡ್ರಿಲ್ ಮಾಡಿದ್ದಾರೆ.
ಈಗೆಲ್ಲ ಯಾವ ರೀತಿ ಕಳ್ಳತನ ಆಗುತ್ತದೆ ಅಂತ ಹೇಳುವುದಕ್ಕೆ ಆಗಲ್ಲ. ನಾವು ಎಷ್ಟೇ ಜಾಗರೂಕರಾಗಿದ್ದರೂ, ಕಳ್ಳರು ತಮ್ಮ ಕರಾಮತ್ತನ್ನು ಪ್ರದರ್ಶನ ಮಾಡಿ ಬಿಡುತ್ತಾರೆ. ಬೆಂಗಳೂರಿನಲ್ಲೂ ಅದೇ ರೀತಿಯಾಗಿದೆ. ಬೆಂಗಳೂರಿನ ಅಷ್ಟಲಕ್ಷ್ಮೀ ಲೇಔಟ್‌ನಲ್ಲಿ ಇಂತದ್ದೇ ಘಟನೆ ನಡೆದಿದೆ. ಫೂಡ್ ಡೆಲಿವರಿ ಬಾಯ್ ತಡರಾತ್ರಿ ಫುಡ್ ಡೆಲಿವರಿ ಮಾಡಲು ಲೊಕೇಶನ್ ನೋಡಿಕೊಂಡು ಹೋಗವಾಗ ಕಳ್ಳರು ಮೊಬೈಲ್ ಎಗರಿಸಿದ್ದಾರೆ. ಪುಟ್ಟೇನಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯ ಡಾಲ್ಮಿಯಾ ಮೇಲ್ಸೇತುವೆ ಬಳಿ ಈ ಘಟನೆ ಸಂಭವಿಸಿದೆ. ಡೆಲಿವರಿ ಬಾಯ್ ಲೊಕೇಶನ್ ತಿಳಿಯದೆ ಲೊಕೇಶನ್ ನೋಡಿಕೊಂಡು ಗಾಡಿ ಓಡಿಸುತ್ತಿದ್ದ, ಆಗ ಅವನ ಬಳಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಎಗರಿಸಿದ್ದಾರೆ. ಈ ಸಂಬಂಧ ಡೆಲಿವರಿ ಬಾಯ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪತ್ತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯ ಡಕಾಯಿತ ಪ್ರಕರಣದಲ್ಲಿ ಈಗಾಗಲೇ ಈ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿತ್ತು. ಬಾಡಿ ವಾರೆಂಟ್ ಮೂಲಕ ಪೊಲೀಸರು ಈ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಕಳ್ಳತನ
ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಆರೋಪಿಗಳು ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಭಾಗದ ಜನರಿಂದ ಮೊಬೈಲ್‌ಗಳನ್ನು ಸುಲಿಗೆ ಮಾಡಿರುವುದಾಗಿಯೂ ಒಂದು ಬೈಕ್ ಕಳ್ಳತನ ಮಾಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಅಲ್ಲದೇ 20 ಮೊಬೈಲ್ ಪೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳ ಬೆಲೆ ಬರೋಬ್ಬರಿ 4.17 ಲಕ್ಷ ರೂಪಾಯಿ ಇದೆ.
ರಾತ್ರಿ ವೇಳೆ ಎಚ್ಚರವಾಗಿರಿ
ಬೈಕ್ ಹೋಲ್ಡ್‌ರ್‌ಗಳಲ್ಲಿ ಮೊಬೈಲ್ ಹಾಕಿಕೊಂಡು ವಾಹನ ಚಲಾಯಿಸುವಾಗ ಮತ್ತು ಬೈಕ್‌ನಲ್ಲಿ ಲೊಕೇಶನ್ ನೋಡಿಕೊಂಡು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಮೊಬೈಲ್ ಹೋಲ್ಡ್‌ರ್‌ಗೆ ಮೊಬೈಲ್ ಸರಿಯಾಗಿ ಇಟ್ಟಿದ್ದೇವಾ, ಅದು ಟೈಟ್ ಆಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ. ಮೊಬೈಲ್ ಲೊಕೇಶನ್ ನೋಡಿಕೊಂಡು ವಾಹನ ಓಡಿಸುವಾಗ ಬೇರೆ ಯಾರಾದರೂ ಮಾತನಾಡಲು ಬಂದರೆ ಮೊದಲು ಮೊಬೈಲ್ ಅನ್ನು ಜೋಬಿನಲ್ಲಿ ಹಾಕಿಕೊಳ್ಳಲು ಪ್ರಯತ್ನಿಸಿ, ಇಲ್ಲವೇ ಎರಡರಿಂದ ಮೂರು ಅಡಿ ಅಂತರ ಕಾಪಾಡಿಕೊಳ್ಳಿ. ನಿರ್ಜನ ಪ್ರದೇಶದಲ್ಲಿ ಯಾರೇ ಗಾಡಿ ನಿಲ್ಲಿಸಲು ಕೇಳಿದರೂ ಎಚ್ಚರಿಕೆ ವಹಿಸಿ. ಈ ಮೂಲಕ ಮೊಬೈಲ್ ಕಳ್ಳರಿಂದ ನೀವು ತಪ್ಪಿಸಿಕೊಳ್ಳಬಹುದು.












Click it and Unblock the Notifications