ಜಯನಗರ ಕ್ಲಬ್ ಗೆ 14ಲಕ್ಷ ದಂಡ ವಿಧಿಸಿದ ಬೆಸ್ಕಾಂ
ಬೆಂಗಳೂರು, ಆಗಸ್ಟ್ 29: ಬೆಸ್ಕಾಂ ನಗರದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಜನಗರ ಕ್ಲಬ್ ಗೆ 14 ಲಕ್ಷ ರೂ. ದಂಡ ವಿಧಿಸಿದೆ. ಹೆಚ್ಚುವರಿ ವಿದ್ಯುತ್ ಸಂಪರ್ಕವನ್ನು ಅನಧಿಕೃತವಾಗಿ ಪಡೆದಿರುವ ಕಾರಣಕ್ಕೆ ದಂಡ ವಿಧಿಸಿದೆ.
ಬೆಸ್ಕಾಂ ವಿಚಕ್ಷಣ ದಳವು ಸ್ಥಳ ಪರಿಶೀಲನೆ ನಡೆಸಿದಾಗ ಕಟ್ಟಡದಲ್ಲಿ ನಡಯುವ ಚಟುವಟಿಕೆಗೆ ನಿಗದಿಗಿಂತ ಹೆಚ್ಚು ಪ್ರಮಾಣದ ವಿದ್ಯುತ್ ಬಳಸಿಕೊಂಡಿರುವುದು ದೃಢಪಟ್ಟಿದೆ. ಇದನ್ನು ವರದಿ ರೂಪದಲ್ಲಿ ವಿಚಕ್ಷಣಾ ಅಧಿಕಾರಿಗಳು ಮೇಲಧಿಕಾರಿಗಳಿಗೆ ರವಾನಿಸಿದ್ದರು.
ಜತೆಗೆ ನಿಯಮದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಅನಧಿಕೃತವಾಗಿ ಹೆಚ್ಚುವರಿ ಸಂಪರ್ಕ ಪಡೆದಿರುವುದಕ್ಕೆ 14ಲಕ್ಷ ರೂ. ದಂಡವನ್ನಯ ಪಾವತಿಸುವಂತೆ ಕ್ಲಬ್ ಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಜತೆಎ ಹೆಚ್ಚುವರಿಯಾಗಿ ಪಡೆದ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳುವಂತೆ ಕ್ಲಬ್ ಗೆ ಸೂಚಿಸಲಾಗಿದೆ.
ಜಯನಗರ ಕ್ಲಬ್‌ನಲ್ಲಿ ಅನಧಿಕೃತವಾಗಿ ವಿದ್ಯುತ್ ಬಳಸಿಕೊಳ್ಳಲಾಗುತ್ತಿದೆ ಎಂದು ಬೆಸ್ಕಾಂಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಸ್ಕಾಂ ಅಧಿಕಾರಿಗಳು ಕ್ಲಬ್ ಗೆ ಭೇಟಿ ನೀಡಿದ್ದರು, ಪರಿಶೀಲನೆ ವೇಳೆ ಈ ಸತ್ಯ ಬಹಿರಂಗಗೊಂಡಿದೆ. ಅಧಿಕಾರಿಗಳು ಈ ಕುರಿತು ಪಶ್ನೆ ಮಾಡಿದ್ದು ಜತೆಗೆ 14 ಲಕ್ಷ ರೂ ದಂಡ ವಿಧಿಸಿದ್ದಾರೆ.












Click it and Unblock the Notifications