WEATHER: ವಾಯುಭಾರ ಕುಸಿತ: ಬೆಂಗಳೂರು ಹಾವಾಮಾನ ಎಚ್ಚರಿಕೆ
ಬೆಂಗಳೂರು, ಫೆಬ್ರವರಿ 26: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ತಾಪಮಾನ ಏರುಗತಿಯಲ್ಲಿದೆ. ಮುಂದಿನ ಕೆಲವು ದಿನಗಳಲ್ಲಿ ನಗರವು ಸ್ಥಿರವಾದ 33 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಸಾಕ್ಷಿಯಾಗಲಿದೆ. ಮುಂದಿನ ಎರಡು ತಿಂಗಳು ನಿರಂತರ ಬಿಸಿ ಅಲೆ ಇರಲಿದೆ. ಸಮುದ್ರಮಟ್ಟದ ಮೇಲ್ಮೈನಲ್ಲಿ ಒಂದಷ್ಟು ಬದಲಾವಣೆ, ವೈಪರಿತ್ಯಗಳು ಉಂಟಾಗಿವೆ. ಉಷ್ಣ ಅಲೆ ಕೇವಲ ಬೆಂಗಳೂರಿಗೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಅನ್ವಯಿಸಲಿದೆ. ಕಾರವಾರದಲ್ಲಿ 34 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ 38.4 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಿದೆ. ವಿವಿಧ ಜಿಲ್ಲೆಗಳಲ್ಲಿ ಇಂಥದ್ದೆ ವಾತಾವರಣ ನಿರ್ಮಾಣವಾಗಿದೆ.
ಇಂದು ಬುಧವಾರ ರಾಜ್ಯದ ಕಾರವಾರದ ಜೊತೆಗೆ ಪೆಣಂಬೂರಿನಲ್ಲಿ 38.3 ಡಿಗ್ರಿ ಸೆಲ್ಸಿಯಸ್, ಮಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್, ಹೊನ್ನಾವರದಲ್ಲಿ 38 ಹಾಗೂ ಕಲಬುರಗಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮಾರ್ಚ್ 1ರಿಂದ ಬೆಂಗಳೂರಿನಲ್ಲೂ ತಾಪಮಾನದ ಬಿಸಿ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಲಭ್ಯವಾಗಲಿದೆ.

ಆರೋಗ್ಯ ಎಚ್ಚರಿಕೆಗಳು ಹೀಗಿವೆ
ಜನರು ಸಾಮಾನ್ಯವಾಗಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗಿನ ಸಮಯದಲ್ಲಿ ಗರಿಷ್ಠ ಉಷ್ಣಾಂಶ ಇರುತ್ತದೆ. ಹೀಗಾಗಿ ಈ ವೇಳೆ ಹೊರಾಂಗಣ ಕಾರ್ಯಕ್ರಮ, ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದಷ್ಟು ಈ ಸಮಯದಲ್ಲಿ ಮನೆಯಲ್ಲಿಯೇ, ಸುರಕ್ಷತ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಗರಿಷ್ಠ ತಾಪಮಾನದ ಹೊತ್ತಲ್ಲಿ ನೇರ ಸೂರ್ಯನ ಬೆಳಕಿನಿಂದ ದೂರವಿಬೇಕು. ನಿತ್ಯವು ಸಾಕಷ್ಟು ನೀರು ಕುಡಿಯಬೇಕು. ಇದರಿಂದ ನಿಮ್ಮ ದೇಶದಲ್ಲಿ ನೀರಿನಂಶ ಸಮತೋಲನಕ್ಕೆ ಬರುತ್ತದೆ. ತಿಳಿ ಬಣ್ಣದ ಸಡಿಲ ಬಟ್ಟೆ ಧರಿಸುವುದು, ಟೋಪಿ, ಕೊಡೆ ಬಳಕೆ ಉತ್ತಮ ಎಂದು ಆರೋಗ್ಯ ತಜ್ಞರು ಆರೋಗ್ಯ ಕಾಳಜಿ ವಹಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಆದಷ್ಟು ಮನೆಯಲ್ಲಿಯೇ ತಯಾರಿಸಿದ ಲಿಂಬು ಪಾನಕ, ನೀರಿನಂಶ ಹೆಚ್ಚಿರುವ ಪದಾರ್ಥ ಸೇವನೆ ಮಾಡಬೇಕು. ಓಆರ್‌ಎಸ್, ಮಜ್ಜಿಗೆ ಲಸ್ಸಿ ಮತ್ತು ಅಕ್ಕಿ ನೀರನ್ನು ಸೇವಿಸಬೇಕು. ಇದರಿಂದ ಆರೋಗ್ಯ ಅಪಾಯ ತಡೆಯಬಹುದಾಗಿದೆ ಎಂದು IMD ವಿಜ್ಞಾನಿ ಎನ್. ಪುವಿಯರಸನ್ ಹೇಳಿದ್ದಾರೆ.

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಬೆಳಗ್ಗೆ ಮಂಜುಕವಿದ ವಾತಾವರಣ ಇರಲಿದೆ. ರಾತ್ರಿ ಆಗಾಗ ತಂಪು ಗಾಳಿ ಬೀಸುವ ನಿರಿಕ್ಷೆ ಇದೆ. ನಗರಾದ್ಯಂತ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ಹವಾಮಾನ ಇಲಾಖೆ ರಾಜ್ಯಾದ್ಯಂತ ಶುಷ್ಕ ಹವಾಮಾನ ಮುನ್ಸೂಚನೆ ನೀಡಿದೆ.
ಸಮುದ್ರ ಮೇಲ್ಮೈನಲ್ಲಿ ಹವಾಮಾನ ವೈಪರಿತ್ಯ
ಬಂಗಾಳಕೊಲ್ಲಿ ಆಗ್ನೇಯ ಭಾಗ ಮತ್ತು ಹಿಂದೂ ಮಹಾಸಾಗರದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಸಮುದ್ರ ಮೈಲ್ಮೈನಲ್ಲಿ ಬದಲಾವಣೆ ಆದ ಕಾರಣ ವಾತಾವರಣದಲ್ಲಿ ಒಂದಷ್ಟು ಬದಲಾವಣೆ ಆಗಿವೆ. ಸದ್ಯದ ಮುನ್ಸೂಚನೆ ಪ್ರಕಾರ, ಯಾವ ಮಳೆ ಮುನ್ಸೂಚನೆ ಇಲ್ಲ. ಬದಲಾಗಿ ರಾಜ್ಯವ್ಯಾಪಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.












Click it and Unblock the Notifications