ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಾತಿಮಾ ಎಂಬ ಮುಗ್ಧ ಬಾಲಕಿಯ ಹೃದಯ ಹಿಂಡುವ ಕಥೆ!

By ಮೈತ್ರೇಯಿ
|
Google Oneindia Kannada News

ಹೃದಯಕ್ಕೆ ಹತ್ತಿರವಾಗುವ ಈ ಡಾಕ್ಯುಮೆಂಟರಿಯನ್ನು ನೀವು ನೋಡಲೇಬೇಕು. ಬಾಲ ಕಾರ್ಮಿಕ ಪದ್ಧತಿ ಮತ್ತು ಅದರಿಂದ ಒದಗುವ ದುಷ್ಪರಿಣಾಮ, ಪದ್ಧತಿ ಮಕ್ಕಳ ಮನಸ್ಸಿನಲ್ಲಿ ಉಂಟುಮಾಡುವ ನಿರಾಶಾವಾದ ಎಲ್ಲವನ್ನು ಆಧಾರವಾಗಿಟ್ಟುಕೊಂಡು ಬೆಂಗಳೂರಿನ ಎನ್ ಜಿಒ ವೊಂದು ತಯಾರು ಮಾಡಿರುವ " Forgotten On the Pyjama Trail" ಚಿತ್ರವನ್ನು ನೋಡಲೇಬೇಕು.

ಜೂನ್ 12 ರಂದು ಡಾಕ್ಯುಮೆಂಟರಿಯನ್ನು ಬಿಡುಗಡೆ ಮಾಡಲಾಗಿದೆ. ಮಕ್ಕಳ ಹಕ್ಕು ಕಾಪಾಡಲು ಶ್ರಮಿಸುತ್ತಿರುವ ಬೆಂಗಳೂರು ಮೂಲದ ಎನ್ ಜಿಒ Concerned for Working Children (CWC) ಈ ಸಾಕ್ಷ್ಯಚಿತ್ರವನ್ನು ತಯಾರು ಮಾಡಿದೆ.[ಲೋಕ ಜಂಗಮ: ಸಿದ್ದಗಂಗಾಶ್ರೀ ಸಾಕ್ಷ್ಯಚಿತ್ರ ಲೋಕಾರ್ಪಣೆ]

child

ಚಿಕ್ಕ ಮಗುವೊಂದು ತನ್ನ ಕತೆಯನ್ನು ಹೇಳುತ್ತಾ ಸಾಗುತ್ತದೆ. ಮೊರಾಕೊದಲ್ಲಿ ನಡೆಯುವ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಚಿತ್ರ ತಯಾರು ಮಾಡಲಾಗಿದೆ.

ತನ್ನ ಕುಟುಂಬವನ್ನು ನಿರ್ವಹಣೆ ಮಾಡಲು ಮೋರಾಕೊದ ಗಾರ್ಮೆಂರ್ಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಅನಿವಾರ್ಯಕ್ಕೆ ಸಿಕ್ಕಿಹಾಕಿಕೊಳ್ಳುವ ಪುಟ್ಟ ಹೆಣ್ಣು ಮಗು ತನ್ನ ಕತೆಯನ್ನು ಹೇಳುತ್ತಾ ಸಾಗುತ್ತದೆ. ಈ ಹಿಂದೆ ಅಂದರೆ 2012, 13 ಮತ್ತು 14 ರಲ್ಲಿ ಎನ್ ಜಿಒ ತಯಾರು ಮಾಡಿದ್ದ ಚಿತ್ರಗಳು ನೋಬೆಲ್ ಅಂಗಳಕ್ಕೂ ಹೋಗಿದ್ದವು.[ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಏನು ಮಾಡಬಹುದು?]

child

ಫಾತಿಮಾ ಎಂಬ ಬಾಲಕಿಯ ಕತೆಯೇ ಇಡಿ ಚಿತ್ರದ ಜೀವಾಳ. ಬಾಲ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ, ಕಂಪನಿ ಯಾವುದಾದರೊಂದು ಹೊಸ ನಿರ್ಧಾರ ತೆಗೆದುಕೊಳ್ಳುವ ವೇಳೆ ಬಾಲ ಕಾರ್ಮಿಕರ ಅಭಿಪ್ರಾಯ ಕೇಳದಿರುವುದು, ಬಾಲ ಕಾರ್ಮಿಕರ ಮೇಲೆ ಕಂಪನಿಯ ನಿರ್ಧಾರಗಳು ಬೀರುವ ಪರಿಣಾಮ, ಅವರ ಮನಸ್ಸಿನಲ್ಲಿ ಉಂಟಾಗುವ ನಿರಾಶಾವಾದ.. ಎಲ್ಲವನ್ನು ಚಿತ್ರ ಕಟ್ಟಿಕೊಡುತ್ತಾ ಸಾಗುತ್ತದೆ.

ಈ ಸಾಕ್ಷ್ಯ ಚಿತ್ರ ಮತ್ತೊಮ್ಮೆ ಬಾಲಕಾರ್ಮಿಕ ಪದ್ಧತಿ ಬಗ್ಗೆ ಪ್ರಶ್ನೆ ಎತ್ತಿಹಾಕುತ್ತದೆ. ಇಡೀ ಪ್ರಪಂಚವನ್ನೇ ಕಾಡುತ್ತಿರುವ ಸಮಸ್ಯೆಗೆ ಪರಿಹಾರದ ಸೂತ್ರಗಳನ್ನು ಕಂಡು ಹಿಡಿಯಲು ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ನೀವು ಸಾಕ್ಷ್ಯ ಚಿತ್ರವನ್ನು ಒಮ್ಮೆ ನೋಡಿಕೊಂಡು ಬನ್ನಿ...

English summary
A heart-wrenching documentary film titled-- Forgotten On the Pyjama Trail-tells us why a simplistic understanding of child labour results in negative consequences for children. The film was made by Bengaluru-based NGO the Concerned for Working Children (CWC). The film was released on June 12 recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X