Bengaluru Weather: ಬೆಂಗಳೂರಿಗೆ ವ್ಯಾಪಕ ಮಳೆ: ಡಿಸೆಂಬರ್ 19ರ ವರೆಗಿನ ಹವಾಮಾನ ಮುನ್ಸೂಚನೆ

ಬೆಂಗಳೂರು, ಡಿಸೆಂಬರ್ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆಗೆ ಶುಕ್ರವಾರಕ್ಕೆ ಕೊಂಚ ಕಡಿಮೆ ಆಗಿದೆ. ಕೊಂಚ ಚಂಡಮಾರುತದ ಅಬ್ಬರ ಕಡಿಮೆಯಾಗಿದ್ದರೂ ಸಹಿತ ರಾಜಧಾನಿಗೆ ಇನ್ನೂ ಹಲವು ದಿನಗಳ ಕಾಲ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಇಂದು ಶುಕ್ರವಾರ ರಾತ್ರಿ ಜೋರು ಮಳೆ ಬರುವ ಸಾಧ್ಯತೆ ಇದೆ. ಡಿಸೆಂಬರ್ 19ರವರೆಗಿನ ಹವಾಮಾನ ಮುನ್ಸೂಚನೆ ಇಲ್ಲಿದೆ.

ಸಮುದ್ರ ಮೇಲ್ಮೈನಲ್ಲಿ ಒಂದು ವಾರದ ಹಿಂದೆ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಚಂಡಮಾರುತ ಪರಿಚಲನೆ ಹಂತಕ್ಕೆ ಬಂದು ಕುಗ್ಗಿದಂತೆ ಕಾಣುತ್ತಿದೆ. ಈ ಕಾರಣದಿಂದ ಕರ್ನಾಟಕದ ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಯಾಗಿರುವ ಬೆಂಗಳೂರು ನಗರದಲ್ಲಿ ಇಂದು ಮಳೆ ಪ್ರಮಾಣ ಕಡಿಮೆ ಆಗಿದೆ.

Bengaluru Weather IMD Prediction Moderate Rain Spell In City Until Dec 19th Forecast
Photo Credit: This is an AI generated aticle image through WISE

ಗುರುವಾರ ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಮುಂದುವರಿದಿದ್ದು, ಆಗಾಗ ಜಡಿ ಮಳೆ ಕಂಡು ಬಂತು. ಆದರೆ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಸಿಲಿನ ದರ್ಶನವೇ ಆಗಿಲ್ಲ. ಮುಂದಿನ ಮೂರು ದಿನಗಳಲ್ಲಿ ಕೊಂಚ ಬಿಸಿಲು ಹಾಗೂ ಬೆಳಗ್ಗೆ, ರಾತ್ರಿ ಮಂಜು ವಾತಾವರಣ ಕಂಡು ಬರಲಿದೆ. ನಂತರ ಮತ್ತೆ ಡಿಸೆಂಬರ್ 19ರವರೆಗೆ ಇದೇ ರೀತಿ ಮಳೆಯ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ನಗರದ ಕೊಡಿಗೇಹಳ್ಳಿ ಮತ್ತು ರಾಧಾಕೃಷ್ಣ ಟೆಂಪಲ್ ವಾರ್ಡ್‌ನಲ್ಲಿ ಗುರುವಾರ ತಲಾ 55 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಎಲ್ಲಿಯೂ ಹೆಚ್ಚು ಮಳೆ ಆಗಿಲ್ಲ. ನಿರಂತರವಾಗಿ ಜಿಟಿ ಜಿಟಿ ಮಳೆ ಆಗಿದೆ.

ನಗರದಲ್ಲಿ ತಾಪಮಾನ ಭಾರೀ ಇಳಿಕೆ

ಶುಕ್ರವಾರ ಹವಾಮಾನದಲ್ಲಿ ಬದಲಾವಣೆ ಆಗಿದ್ದು, ಮಳೆ ಮತ್ತು ಬಿಸಿಲಿನ ದರ್ಶನವಾಗಿಲ್ಲ. ಆದರೆ ಮೋಡ ಕವಿದ ವಾತಾವರಣವೇ ನಗರಾದ್ಯಂತ ತುಂಬಿಕೊಂಡಿದೆ. ಕಳೆದ 48 ಗಂಟೆಯಲ್ಲಿ ನಗರದಲ್ಲಿ ತಾಪಮಾನ ತೀವ್ರಗತಿಯಲ್ಲಿ ಇಳಿಕೆ ಆಗಿದೆ. ನಗರದಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಇದೀಗ 25ಕ್ಕೆ ಇಳಿಕೆ ಆಗಿದೆ. ಕನಿಷ್ಠ ತಾಪಮಾನ ಯಥಾ ಸ್ಥಿತಿಯಲ್ಲಿ (19 ಡಿಗ್ರಿ ಸೆಲ್ಸಿಯಸ್) ಮುಂದುವರಿದಿದೆ.

Bengaluru Weather IMD Prediction Moderate Rain Spell In City Until Dec 19th Forecast
Photo Credit: This is an AI generated aticle image through WISE

ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಎರಡು ಪ್ರತ್ಯೇಕ ಚಂಡಮಾರುತ ಸೃಷ್ಟಿಯಾಗಿದ್ದವು. ಅವುಗಳ ತೀವ್ರತೆಯಿಂದ ನೆರೆ ತಮಿಳುನಾಡಿನಲ್ಲಿ, ಚೆನ್ನೈನಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಸದ್ಯ ತಮಿಳುನಾಡು ಕರಾವಳಿಯತ್ತ ಆಗಮಿಸಿದ್ದ ವೈಪರಿತ್ಯದ ಪ್ರಭಾವ ಕೊಂಚ ಕುಗ್ಗಿದಂತೆ ಕಾಣುತ್ತಿದೆ.

ರಾಜ್ಯಕ್ಕೆ ಭಾರೀ ಮಳೆ ಅಂತ್ಯ

ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅಂತ್ಯವಾಗಿದ್ದು, ಮುಂದಿನ ಎರಡು ದಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಇದರ ಹೊರತು ಸದ್ಯಕ್ಕೆ ಭಾರೀ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆಯ ಶುಕ್ರವಾರ ಮುನ್ಸೂಚನಾ ವರದಿಯಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+