Rain Alert: ಬೆಂಗಳೂರಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ! ಹವಾಮಾನ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 18: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿದೆ. ಇಂದು ಶುಕ್ರವಾರ ಸಂಜೆ ಸಹ ಉತ್ತಮ ಮಳೆ ಬರುವ ನಿರೀಕ್ಷೆಗಳು ಇವೆ. ಸದ್ಯದ ಹವಾಮಾನ ಮುನ್ಸೂಚನೆ ಪ್ರಕಾರ, ಚಂಡಮಾರುತ ಪರಿಚಲನೆ ತೀವ್ರಗೊಂಡಿವೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮಳೆ ಸುರಿಸುವ ಮೋಡಗಳು ಸಕ್ರಿಯವಾಗಿವೆ. ಹೀಗಾಗಿ ಕಳೆದ ಕೆಲವು ದಿನಗಳು ಸಂಜೆಯಿಂದ ರಾತ್ರಿವರೆಗೆ ಜೋರು ಮಳೆ ಆಯಿತು. ನಗರದ ಕೆಲವು ಕಡೆಗಳಲ್ಲಿ ಸಂಚಾರ, ಜನ ಜೀವನ ಅಸ್ತವ್ಯಸ್ತ ಉಂಟಾಗಿತ್ತು. ಮುಂದಿನ ಎರಡು ದಿನ ಅಂದರೆ ಏಪ್ರಿಲ್ 20 ಮತ್ತು 21 ರಂದು ಗುಡುಗು ಸಹಿತ ಉತ್ತಮ ಮಳೆ ಆಗಲಿದೆ. ಕೆಲವೆಡೆ ಆಲಿಕಲ್ಲು ಮಳೆ ಸಹಿತ ಬರುವ ಸಂಭವವಿದೆ.

Bengaluru Weather Forecast Thunderstorms Rain alert on April 20 and 21st in City

ಬಂಗಾಳಕೊಲ್ಲಿ, ರಾಜಸ್ಥಾನ, ತೆಲಂಗಾಣ ಒಳಗೊಂಡಂತೆ ಕರ್ನಾಟಕದ ಗಡಿಯಲ್ಲಿ ಸ್ಟ್ರಫ್ ಉಂಟಾಗಿದೆ. ಆಗ್ನೆಯ ಬಂಗಾಳಕೊಲ್ಲಿ ಸಮುದ್ರದ ಭಾಗದಲ್ಲಿ ಉಂಟಾಗಿದ್ದ ವೈಪರೀತ್ಯವು ತೀವ್ರಗೊಂಡಿದೆ. ಇದರ ಪ್ರಭಾವ ಮುಂದಿನ ಮೂರು ದಿನಗಳ ಕಾಲ ಮುಂದುವರಿಯಬಹುದು ಎನ್ನಲಾಗಿದೆ. ಅಷ್ಟರಲ್ಲಿ ತೀವ್ರತೆ ಕಡಿಮೆ ಆದಲ್ಲಿ ಮಳೆ ಪ್ರಮಾಣ ಇಳಿಕೆ ಆಗುವ ನಿರೀಕ್ಷೆ ಇದೆ. ಒಂದು ವೇಳೆ ಮತ್ತಷ್ಟು ತೀವ್ರಗೊಂಡರೆ, ಬೆಂಗಳೂರು ಮಾತ್ರವಲ್ಲದೇ ಚೆನ್ನೈ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಸಹ ಭಾರೀ ಮಳೆ ಸುರಿಯಲಿದೆ.

Take a Poll

ಬೆಂಗಳೂರಿನಲ್ಲಿ ಇಂದು ಮಳೆ

ನಗರದಲ್ಲಿ ಇಂದು ಅಲ್ಲಲ್ಲಿ ಮೋಡ ಕವಿದ, ಮಬ್ಬು ವಾತಾವರಣ ನಿರ್ಮಾಣವಾಗಿದೆ. ಎಲ್ಲೆಡೆ ತಂಪು ಗಾಳಿ ಬೀಸುತ್ತಿದೆ. ತಾಪಮಾನವು (ಇಂದು ಸಂಜೆ 4 ಗಂಟೆ ವರದಿ ಪ್ರಕಾರ) ಕನಿಷ್ಠ 18-20 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಉಳಿದಂತೆ ನಿತ್ಯ ಗರಿಷ್ಠ ತಾಪಮಾನ 32-33 ಡಿ.ಸೆ. ಹಾಗೂ ಕನಿಷ್ಠ 21 ಡಿ.ಸೆ. ದಾಖಲಾಗುತ್ತಿತ್ತು. ಕಳೆದ ಎರಡು ದಿನ ಯಲಹಂಕ, ದೊಮ್ಮಲೂರು, ಹೆಬ್ಬಾಳ ಭಾಗದ ಕಡೆಯಿಂದ ಮಳೆ ಸುರಿಯಲಾರಂಭಿಸಿತು. ನಂತರ ಕೋರಮಂಗಲ, ಲಾಲ್‌ಬಾಗ್ ಹೀಗೆ ಮಳೆ ಇಡೀ ನಗರ ಆವರಿಸಿತ್ತು. ಇವತ್ತು ಸಹ ಅದೇ ರೀತಿ ಜಿಟಿ ಜಿಟಿ ರೂಪದಲ್ಲಿ ಆರಂಭವಾಗಲಿರುವ ಮಳೆ ನಂತರ ಜೋರಾಗು ಬರುವ ನಿರೀಕ್ಷೆ ಇದೆ.

ಮುಂದಿನ 03 ಗಂಟೆಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ

ಹಾವಾಮಾನ ಇಲಾಖೆಯ ಮುಂದಿನ ಮೂರು ದಿನ ರಾಜ್ಯದಾದ್ಯಂತ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎಂದು ತಿಳಿಸಿದೆ. ಇಂದಿನ ಮುನ್ಸೂಚನೆ ಪ್ರಕಾರ, ಮುಂದಿನ ಮೂರು ಗಂಟೆಗಳಲ್ಲಿ ಚಿತ್ರದುರ್ಗ, ಮೈಸೂರು, ಬೆಳಗಾವಿ, ಕೊಪ್ಪಳ, ವಿಜಯಪುರ, ಗದಗ ಸೇರಿದಂತೆ ಒಂದೆರಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಇದರಲ್ಲಿ ಕೆಲವೆಡೆ ಆಲಿಕಲ್ಲು ಸಹಿತ ಮಳೆ ಆಗಲಿದೆ ಎಂದು ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+