Bengaluru Rains: ಬೆಂಗಳೂರಿಗೆ 20 ವರ್ಷದ ಬಳಿಕ ಕಮ್ಮಿ ಮಳೆ! ಬೇಸಿಗೆಯಲ್ಲಿ 2-3°C ತಾಪಮಾನ ಏರಿಕೆ: ಐಎಂಡಿ ಎಚ್ಚರಿಕೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಬುಧವಾರ ಮಧ್ಯಾಹ್ನದಿಂದಲೇ ಮುಂದುವರಿಯಿತು. ಆಗಾಗ ಮಳೆಯೆನೋ ಬರುತ್ತಿದೆ, ಮತ್ತೊಂದೆಡೆ ನಗರದ ತಾಪಮಾನ ಏರಿಕೆ ಆಗುತ್ತಿದೆ. 2026ರ ಮುಂಗಾರು ಅವಧಿಯ ನಾಲ್ಕು ತಿಂಗಳಲ್ಲಿ ಬೆಂಗಳೂರು ನಗರಕ್ಕೆ ಅತ್ಯಧಿಕ ಕಡಿಮೆ ಮಳೆ ದಾಖಲಾಗಿದೆ. ಈ ವರ್ಷ ಬೆಂಗಳೂರಿಗರು ಕಳೆದ 26 ವರ್ಷಗಳಲ್ಲೇ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಗೆ ಸಾಕ್ಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹಿಂಗಾರು ಹಾಗೂ ಬೇಸಿಗೆ ಹೇಗಿರುತ್ತದೆ ಎಂದು 'ಒನ್ ಇಂಡಿಯಾ ಕನ್ನಡ'ದ ಜೊತೆಗೆ ಐಎಂಡಿ ವಿಜ್ಞಾನಿ ಮಾತನಾಡಿದ್ದಾರೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಇದು ತೀವ್ರ ಒಣಹವೆ ವಾತಾವರಣಕ್ಕೆ ದಾರಿ ಮಾಡಿಕೊಡುತ್ತದೆ. ಮಳೆ ಕಡಿಮೆ ಆದರೆ ಸಾಮಾನ್ಯವಾಗಿ ಆ ವರ್ಷದ ಬೇಸಿಗೆಯ ಅವಧಿಯು ಹೆಚ್ಚು ಬಿಸಿಲಿನಿಂದ ಕೂಡಿರುತ್ತದೆ. ಅದಂತೆ ಈ ವರ್ಷ (2026) ಬೇಸಿಗೆಯಲ್ಲಿ ಭಾರೀ ಒಣಹವೆ, ಶಾಖದ ಅಲೆ (Heat Wave) ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಐಎಂಡಿ ಊಹಿಸಿದೆ.

Bengaluru Weather

ಬೆಂಗಳೂರಿಗೆ 2006ರ ನಂತರ 2026ರಲ್ಲೇ ಕಡಿಮೆ ಮಳೆ

ಮುಂಗಾರು ಅವಧಿಯ ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗಿನ ನಾಲ್ಕು ತಿಂಗಳಲ್ಲಿ ಬೆಂಗಳೂರಿನ ವಾಡಿಕೆ 597.7 ಮಿ.ಮೀ. ಮಳೆಯ ಬದಲಿಗೆ ಕೇವಲ 313.3 ಮಿಲಿ ಮೀಟರ್ ಮಳೆ ಮಾತ್ರವೇ ದಾಖಲಗಿದೆ. ಈ ರೀತಿ ಕಳೆದ ಎರಡು ದಶಕಗಳ ಹಿಂದೆ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿತ್ತು.

2006ರಲ್ಲಿ ಬೆಂಗಳೂರು ನಗರವು ಇದೇ ನೈಋತ್ಯ ಮುಂಗಾರು ಅವಧಿಯಲ್ಲಿ, ವಾಡಿಕೆಗಿಂತಲೂ 298.3 ಮಿಲಿ ಮೀಟರ್ ಅತ್ಯಂತ ಕಡಿಮೆ ಮಳೆ ದಾಖಲಾಗಿತ್ತು. ಅದರ ನಂತರ 20 ವರ್ಷಗಳ ಬಳಿಕ ಬೆಂಗಳೂರು ಮತ್ತೆ ಅತ್ಯಂತ ಕಡಿಮೆ ಮಳೆಗೆ ಸಾಕ್ಷಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ '-36%' ಕಡಿಮೆ ಮಳೆ

ಬೆಂಗಳೂರು ನಗರಕ್ಕೆ ಹೋಲಿಸಿದರೆ ಭೌಗೋಳಿಕವಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯು ವಿಶಾಲವಾಗಿದೆ. ಬೆಂಗಳೂರ ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2026ರ ಮುಂಗಾರು ಅವಧಿಯಲ್ಲಿ ಶೇ.-36ರಷ್ಟು ಕಡಿಮೆ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತನ್ನ ವರದಿಯಲ್ಲಿ ತಿಳಿಸಿದೆ.

ಈ ವರ್ಷ ವಾಡಿಕೆಯಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 471 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಆದರೆ ಕೇವಲ 302ಮಿಲಿ ಮೀಟರ್ ಮಾತ್ರವೇ ಮಳೆ ಆಗಿದೆ. ಇದು ಮುಂದಿನ ದಿನಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಳ, ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತದೆ. ಮುಂದೆ ಉತ್ತಮ ಹಿಂಗಾರು ಮಳೆ ಆದರೆ ಪರಿಸ್ಥಿತಿ ಕೊಂಚ ಬದಲಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಬೆಂಗಳೂರು ತಾಪಮಾನ ಏರಿಕೆ, ಹಿಂಗಾರು ಮಳೆ, ಹವಾಮಾನ ಮುನ್ಸೂಚನೆಗೆ ಸಂಬಂಧಿಸಿದಂತೆ ಐಎಂಡಿ ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು ಒನ್ ಇಂಡಿಯಾ ಜೊತೆಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

Bengaluru Weather

ತಾಪಮಾನ 2-3 ಡಿ.ಸೆ. ಏರಿಕೆ: ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್

""ಮುಂಗಾರು ಮಳೆ ಹಿಂದಿನ ವರ್ಷಗಳಿಗಿಂತಲೂ ಈ ವರ್ಷ ಬೆಂಗಳೂರಿನಲ್ಲಿ ಕಡಿಮೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ವಾಡಿಕೆಯಷ್ಟು ಬರುವ ನಿರೀಕ್ಷೆ ಇದೆ. ಮಳೆ ಕಡಿಮೆ ಆದಾಗ ತಾಪಮಾನ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಈ ವರ್ಷ ಬೇಸಿಗೆಯಲ್ಲಿ ವಾಡಿಕೆಗಿಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗುವ ಲಕ್ಷಣಗಳಿವೆ. ಹೆಚ್ಚಿನ ಬಿಸಿಲು, ಒಣಹವೆಯ ಅನುಭವ ಆಗಲಿದ್ದು, ನಾಗರಿಕರು ಅಗತ್ಯ ಜಾಗೃತಿ ವಹಿಸಬೇಕು ಎಂದರು.

ಮಾತ್ರವಲ್ಲದೇ, ನಗರದಲ್ಲಿ ಮಣ್ಣಿನ ಪ್ರಮಾಣ ಕಡಿಮೆ. ಎಲ್ಲಿ ನೋಡಿದರೆ ಕ್ರಾಂಕೀಟ್ ಇರುವ ಕಾರಣ ಬಿದ್ದ ಮಳೆ ನೀರು ಇಂಗುವುದಿಲ್ಲ. ಇದರಿಂದ ಬಿಸಿ ವಾತಾವರಣ ಬೇಗನೆ ಸೃಷ್ಟಿಯಾಗುತ್ತದೆ. ಭಾರೀ ಮಳೆ ಬಂದ ಬಳಿಕ ಮೂರು ಗಂಟೆಗಳಲ್ಲಿ ಮಳೆ ಆಗಿಲ್ಲವೆನೋ ಎಂಬಂತಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಅಕ್ಟೋಬರ್ 2ವರೆಗೆ ಮಳೆ ಮುಂದುವರಿಯಲಿದೆ. ನಂತರ ನಗರದಲ್ಲಿ ಮಳೆ ದುರ್ಬಲಗೊಳ್ಳಲಿದೆ. ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ಮಾತ್ರವೇ ಸೋನೆ ಮಳೆ ಆಗಲಿದೆ ಎಂದು ವಿಜ್ಞಾನಿ ಪಾಟೀಲರು ತಿಳಿಸಿದರು.

ಬೆಂಗಳೂರಲ್ಲಿಂದು ಮಳೆ: ರಸ್ತೆಗಳು ಜಲಾವೃತ!

ಮೂರು ದಿನಗಳಿಂದ ಬಂದ ಮಳೆ ಬುಧವಾರ ಸಂಜೆಯು ಮುಂದುವರಿದು ಕೆಲವು ಕಡೆಗಳಲ್ಲಿ ಅವಾಂತರ ಸೃಷ್ಟಿಸಿತು. ಹೂಡಿ, ವರ್ತೂರು, ಹೆಬ್ಬಾಳ ಭಾಗಗಳು ಸೇರಿದಂತೆ ಹಲವೆಡೆ ಜೋರು ಮಳೆಯಿಂದಾಗಿ ವಾಟರ್ ಲಾಗಿಂಗ್ ಸಮಸ್ಯೆ ಉಂಟಾಯಿತು. ಪ್ರಮುಖ ರಸ್ತೆಗಳೇ ಜಲಾವೃತಗೊಂಡಿದ್ದು, ಪ್ರವಾಹದಂತಾಯಿತು. ರಸ್ತೆ ಮೇಲಿನ ಒಂದಡಿ ನೀರಿನಲ್ಲಿ ವಾಹನಗಳು ಸಂಚಾರ ಮಾಡಿದ್ದು ಕಂಡು ಬಂತು. ನಿಧಾನಗತಿಯ ಸಂಚಾರಕ್ಕೆ ಸವಾರರು, ಪ್ರಯಾಣಿಕರು ಹಿಡಿಶಾಪ ಹಾಕಿದರು. ರಸ್ತೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ #BengaluruRains ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದ್ದು, ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ಪ್ರವಾಹ ಸ್ಥಿತಿ ಕಂಡು ನೆಟ್ಟಿಗರು ಸರ್ಕಾರ, ಜಿಬಿಎ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಕೋರಮಂಗಲ, ಈಜಿಪುರ, ಮಡಿವಾಳ, ಬಾಣವಾಸವಾಡಿ, ಮಹದೇವಪುರ, ಮಾರತ್ತಹಳ್ಳಿ, ಕೆ.ಆರ್. ಪುರಂ, ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಡೈರಿ ವೃತ್ತ ಹಾಗೂ ಬೆಂಗಳೂರಿನ ಹೃದಯ ಭಾಗದ ಅನೇಕ ಪ್ರದೇಶಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆ ಆಯಿತು. ಸಂಜೆ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದ ನೌಕರರು, ಬೀದಿ ಬದಿ ವ್ಯಾಪಾರಿಗಳಿಗೆ ಜಿಟಿ ಜಿಟಿ ಮಳೆ ಕಿರಿ ಕಿರಿ ಉಂಟು ಮಾಡಿತು.

ಇಂದು ನಗರದ ತಾಪಮಾನ ಗರಿಷ್ಠ 30-32 ಮತ್ತು ಕನಿಷ್ಠ 19-20 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಮುಂದಿನ ಎರಡು ದಿನ ಇದೇ ರೀತಿ ತಂಪು ವಾತಾವರಣ, ಹಗುರು ಮಳೆ ಆಗಲಿದ್ದು, ನಂತರ ಮಳೆ ಕಡಿಮೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+