ನೀರಿನ ಬಿಕ್ಕಟ್ಟು: ಸರ್ಕಾರದ ಎಚ್ಚರಿಕೆ ಬಳಿಕವೂ ಬಾಡಿಗೆ ಸಿಕ್ಕಿದ್ದು ಕೇವಲ 315 ಟ್ಯಾಂಕರ್
ಬೆಂಗಳೂರು, ಮಾರ್ಚ್ 07: ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಮಹಾನಗರ ಬೆಂಗಳೂರಿನಲ್ಲಿ ನೀರಿನ ತಾತ್ವಾರ ಉಲ್ಬಣಗೊಳ್ಳುತ್ತಿದೆ. ಇದರ ಪರಿಹಾರ ಕ್ರಮಗಳ ಭಾಗವಾಗಿ ನೀರಿನ ಟ್ಯಾಂಕರ್ ಗಳನ್ನು ಬಾಡಿಗೆ ಪಡೆಯುಲು ಸರ್ಕಾರ ಮುಂದಾಗಿತ್ತು. ನೀರಿನ ಟ್ಯಾಂಕರ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಹೊರತಾಗಿಯು ಕೇವಲ 315 ಟ್ಯಾಂಕರ್‌ಗಳು ಮಾತ್ರವೇ ಬಾಡಿಗೆ ಸಿಕ್ಕಿವೆ.
ಹೌದು, ಬೆಂಗಳೂರಿನಲ್ಲಿ ನೀರು ಪೂರೈಕೆಯ ಕೊರತೆಯಾಗಿದೆ. ಬರಗಾಲ ಹಿನ್ನೆಲೆ ನದಿಯಗಳಲ್ಲಿ ನೀರಿಲ್ಲ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳು ಸೇರಿದಂತೆ ಬೆಂಗಳೂರಿನಾದ್ಯಂತ ನೀರಿಗೆ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಈ ಸಂಬಂಧ ಟ್ಯಾಂಕರ್ ಇರುವ ಮಾಲೀಕರು ಸರ್ಕಾರಕ್ಕೆ ಸಹಕರಿಸಬೇಕು.

ಡಿಸಿಎಂ ಸೂಚನೆಗೆ ಬಗ್ಗದ ಟ್ಯಾಂಕರ್ ಮಾಲೀಕರು
ಬೆಂಗಳೂರಿನಲ್ಲಿರುವ 3500 ಟ್ಯಾಂಕರ್‌ಗಳ ಮಾಲೀಕರಿಗೆ ಟ್ಯಾಂಕರ್ ಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮಾರ್ಚ್ 7ರವರೆಗೆ ದಿನಾಂಕ ನಿಗದಿ ಮಾಡಿತ್ತು. ನೋಂದಣಿ ಮಾಡದ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಸ್ವತಃ ಡಿಕೆ ಶಿವಕುಮಾರ್ ಅವರೇ ಸೂಚನೆ ನೀಡಿದ್ದರು.
ಇಂದು (ಮಾರ್ಚ್ 7) ನೀರಿನ ಟ್ಯಾಂಕರ್ ನೋಂದಣಿಗೆ ಕೊನೆ ದಿನವಾಗಿದೆ. ಇಲ್ಲಿಯವರೆಗೆ ನಗರದಲ್ಲಿಒಟ್ಟು 970 ನೀರಿನ ಟ್ಯಾಂಕರ್‌ಗಳು ನೋಂದಣಿ ಆಗಿವೆ. ಆದರೆ ಅದಲ್ಲಿ ಕೇವಲ 351 ಮಂದಿ ಮಾತ್ರ ತಮ್ಮ ಟ್ಯಾಂಕರ್ ಬಾಡಿಗೆ ನೀಡಲು ಮುಂದಾಗಿದ್ದಾರೆ. ಉಳಿದವರ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ನೋಂದಣಿಯಿಂದ ಎಷ್ಟು ನೀರು ಪೂರೈಕೆ ಸಾಧ್ಯ?
ನೋಂದಣಿ ಆಗಿರುವುದು ಒಟ್ಟು 73.72 ಲಕ್ಷ ಲೀಟರ್ ನೀರು ಪೂರೈಕೆ ಟ್ಯಾಂಕರ್ (970) ವಾಹನಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ 351 ಟ್ಯಾಂಕರ್ ಬಾಡಿಗೆ ನೀಡಲು ಒಪ್ಪಿದ್ದರಿಂದ ಟ್ಯಾಂಕರ್‌ಗಳ ಮೂಲಕ ನಗರಕ್ಕೆ 23.38 ಲಕ್ಷ ಲೀಟರ್ ನೀರಿನ ಪೂರೈಕೆ ಸಾಧ್ಯವಾಗುತ್ತಿದೆ.
163 ಖಾಸಗಿ ನೀರಿನ ಟ್ಯಾಂಕರ್ ವಶ
ಎರಡು ದಿನಗಳ ಹಿಂದಷ್ಟೇ ಸರ್ಕಾರ ಬೆಂಗಳೂರಿನಲ್ಲಿ ಒಟ್ಟು 163 ಖಾಸಗಿ ನೀರಿನ ಟ್ಯಾಂಕರ್ ವಶಕ್ಕೆ ಪಡೆದುಕೊಂಡಿದೆ. ಆರ್‌ಟಿಒ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಈ ವಾಹನಗಳನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮೂಲಕ ನೀರು ಪೂರೈಕೆಗೆ ಬಳಸಿಕೊಳ್ಳಲಿದೆ.
ಇದೆಲ್ಲ ಬೆಳವಣಿಗೆ ಮಧ್ಯೆ ನೀರಿನ ಟ್ಯಾಂಕರ್ ಮಾಫಿಯಾ ನಡೆಯುತ್ತಿದೆ. ಪರಿಸ್ಥಿತಿಯ ಲಾಭ ಪಡೆದು ಮನ ಬಂದ ದರಕ್ಕೆ ಟ್ಯಾಂಕರ್‌ಗಳುರು ನೀರು ಪೂರೈಕೆಗೆ ಮುಂದಾಗಿದ್ದವು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೀರಿನ ಟ್ಯಾಂಕರ್‌ಗಳಿಗೆ ದರ ನಿಗದಿ ಮಾಡಿ ಸರ್ಕಾರ ಆದೇಶಿಸಿತು.
ಟ್ಯಾಂಕರ್ ದರ ಪಟ್ಟಿ
6000 ಲೀಟರ್ ನೀರಿನ ಟ್ಯಾಂಕರ್ ಬೆಲೆ 600-750 ರೂಪಾಯಿ
8000 ಲೀಟರ್ ನೀರಿನ ಟ್ಯಾಂಕರ್ ಬೆಲೆ 700-850 ರೂಪಾಯಿ
12000 ಲೀಟರ್ ನೀರಿನ ಟ್ಯಾಂಕರ್ ಬೆಲೆ 1,000- 1,200 ರೂಪಾಯಿ
ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿ.ಮೀಟರ್ ಗೆ 510 ರೂ ಮತ್ತು 10 ಕಿಲೋ ಮೀಟರ್ ದೂರ ಹೋದರೆ 650 ರೂ. ದರ ನಿಗದಿ ಮಾಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.












Click it and Unblock the Notifications