GBA ‘ವಾರ್ಡ್ ಒನ್’ ಅಭಿಯಾನದ ಭರ್ಜರಿ ಯಶಸ್ಸು: 2ನೇ ವಾರದಲ್ಲೇ ಶೇ. 76 ರಷ್ಟು ಸಮಸ್ಯೆಗಳು ಇತ್ಯರ್ಥ, ಮಾದರಿ ಹೆಜ್ಜೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒತ್ತುವರಿ ತೆರವು, ರಾಜಕಾಲುವೆ ಹೂಳು ತೆಗೆಯುವುದು, ಬ್ಲಾಕ್ ಸ್ಪಾಟ್ ತೆರವಿನಂತಹ ಕೆಲಸಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವೇಗ ನೀಡಿದೆ. ಇದೀಗ ವಾರ್ಡ್ ಒನ್ ಅಭಿಯಾನವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದೆ. ಅಭಿಯಾನ ಆರಂಭವಾದ ಎರಡನೇ ವಾರದಲ್ಲಿ 11 ವಾರ್ಡ್‌ಗಳಲ್ಲಿ ಶೇ. 76 ರಷ್ಟು ಸಮಸ್ಯೆಗಳು ಇತ್ಯರ್ಥವಾಗಿದೆ. ಜೊತೆಗೆ 6 ವಿಭಾಗಗಳ 28.64 ಕಿ.ಮೀ ರಸ್ತೆಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಕ್ರಮವಹಿಸಲಾಗಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನವೆಂಬರ್ 1 ರಂದು ಚಾಲನೆಗೊಂಡ 'ವಾರ್ಡ್ ಒನ್' ಅಭಿಯಾನದ ಎರಡನೇ ವಾರದಲ್ಲಿ 6 ವಿಭಾಗಗಳ ಒಟ್ಟು 11 ವಾರ್ಡ್‌ಗಳಲ್ಲಿ ಗುರುತಿಸಲಾಗಿದ್ದ 526 ಸಮಸ್ಯೆಗಳ ಪೈಕಿ 400 ಸಮಸ್ಯೆಗಳನ್ನು (ಶೇ. 76) ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ ಎಂದು ಶುಕ್ರವಾರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ಅವರು ತಿಳಿಸಿದ್ದಾರೆ.

Bengaluru Ward One Campaign

ಎರಡನೇ ವಾರದ ವಾರ್ಡ್‌ವಾರು ಪ್ರಗತಿ ಶೇ. 86 ರಷ್ಟು

ಅಂಜನಾಪುರ, ಹರಿನಗರ, ಕೋಣನಕುಂಟೆ, ಅಬ್ದುಲ್ ಕಲಾಂ ನಗರ, ಮಾರೇನಹಳ್ಳಿ ದಕ್ಷಿಣ, ಜಕ್ಕಸಂದ್ರ, ಪದ್ಮನಾಭನಗರ, ಕದಿರೇನಹಳ್ಳಿ, ಬೊಮ್ಮನಹಳ್ಳಿ, ಹೊಸಪಾಳ್ಯ ಮತ್ತು ಹೆಚ್.ಎಸ್.ಆರ್ ಲೇಔಟ್ ವಾರ್ಡ್‌ಗಳ ಒಟ್ಟು 28.64 ಕಿ.ಮೀ ಉದ್ದದ ರಸ್ತೆಗಳಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 'ವಾರ್ಡ್ ಒನ್' ಅಭಿಯಾನದ ಎರಡನೇ ವಾರದ ಪ್ರಗತಿ ವಿವರ
ಒಟ್ಟಾರೆ ಪ್ರಗತಿ: 6 ವಿಭಾಗಗಳ 11 ವಾರ್ಡ್‌ಗಳ 28.64 ಕಿ.ಮೀ ರಸ್ತೆಗಳಲ್ಲಿ ಗುರುತಿಸಲಾಗಿದ್ದ ಒಟ್ಟು 526 ಸಮಸ್ಯೆಗಳ ಪೈಕಿ 400 ಸಮಸ್ಯೆಗಳು (ಶೇ. 76) ಬಗೆಹರಿದಿವೆ. ಶೇ. 81 ರಷ್ಟು ಸಾಧನೆಯಾಗಿದೆ ಎಂದರು.

Bengaluru Jatre: ಮೆಗಾ, ಮೀಡಿಯಂ, ಮಿನಿ ಇವೆಂಟ್ಸ್‌ ಧಮಾಕಾ: ಜಿಬಿಎಯಿಂದ ಸಾಂಸ್ಕೃತಿಕ ಹಬ್ಬಕ್ಕೆ ಕೌಂಟ್‌ಡೌನ್!
Bengaluru Jatre: ಮೆಗಾ, ಮೀಡಿಯಂ, ಮಿನಿ ಇವೆಂಟ್ಸ್‌ ಧಮಾಕಾ: ಜಿಬಿಎಯಿಂದ ಸಾಂಸ್ಕೃತಿಕ ಹಬ್ಬಕ್ಕೆ ಕೌಂಟ್‌ಡೌನ್!

ಕಟ್ಟಡ ತ್ಯಾಜ್ಯ ವಿಲೇವಾರಿ (C&D Waste): ಗುರುತಿಸಲಾಗಿದ್ದ 80 ಟನ್ ತ್ಯಾಜ್ಯದ ಪೈಕಿ 75.09 ಟನ್ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದ್ದು, ಶೇ. 94 ರಷ್ಟು ಪ್ರಗತಿ ಸಾಧಿಸಲಾಗಿದೆ. ಕಸದ ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆ: ಗುರುತಿಸಲಾಗಿದ್ದ 45 ಬ್ಲಾಕ್ ಸ್ಪಾಟ್‌ಗಳ ಪೈಕಿ 41 ಕಸದ ತಾಣಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ ಶೇ. 91 ರಷ್ಟು ಪ್ರಗತಿ ಕಂಡು ಬಂದಿದೆ. ಇದೇ ರೀತಿ ಅಭಿಯಾನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರ ಸೌಂದರ್ಯಿಕರಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ತೆರವಿಗೆ ಸಂಬಂಧಿಸಿದಂತೆ 110 ಫ್ಲೆಕ್ಸ್/ಬ್ಯಾನರ್‌ಗಳ ಪೈಕಿ 96 ಬ್ಯಾನರ್‌ಗಳನ್ನು ತೆರವುಗೊಳಿಸಿ ಶೇ. 87 ರಷ್ಟು ಸಾಧನೆ ಮಾಡಲಾಗಿದೆ. ಗುರುತಿಸಲಾಗಿದ್ದ 70 ಅಡೆತಡೆಗಳಲ್ಲಿ 61 ಫುಟ್‌ಪಾತ್ ಅಡೆತಡೆಗಳನ್ನು ತೆರವುಗೊಳಿಸಿ ಶೇ. 87 ರಷ್ಟು ಸಾಧನೆ ಮಾಡಲಾಗಿದೆ.

ಪಾಲಿಕೆಯಿಂದ ಮಾದರಿ ಹೆಜ್ಜೆ

ಪಾಲಿಕೆ ಅಧಿಕಾರಿಗಳಿಂದ ಗುರುತಿಸಲಾಗಿದ್ದ 96 ಗುಂಡಿಗಳಲ್ಲಿ 80 ಗುಂಡಿಗಳನ್ನು ಮುಚ್ಚಲಾಗಿದೆ. ಮರದ ಕೊಂಬೆಗಳ ಕಟಾವು (Pruning): ರಸ್ತೆ ಹಾಗೂ ಬೀದಿ ದೀಪಗಳಿಗೆ ಅಡ್ಡಲಾಗಿದ್ದ 26 ಮರಗಳ ಪೈಕಿ 21 ಮರಗಳ ಕೊಂಬೆಗಳನ್ನು ಕಟಾವು ಮಾಡಲಾಗಿದ್ದು, ಶೇ. 81 ರಷ್ಟು ಸಾಧಿಸಲಾಗಿದೆ.ಇನ್ನೂ 4.18 ಕಿ.ಮೀ ಪೈಕಿ 2.98 ಕಿ.ಮೀ ಫುಟ್‌ಪಾತ್ ದುರಸ್ತಿ ಕಾರ್ಯ ಪೂರ್ಣಗೊಂಡಿವೆ. ಈ ಮೂಲಕ ಬೆಂಗಳೂರು ದಕ್ಷಿನ ನಗರ ಪಾಲಿಕೆ ಇತರ ವಾರ್ಡ್‌ಗಳಿಗೂ ಮಾದರಿಯಾಗುವ ಹೆಜ್ಜೆ ಇಟ್ಟಿದೆ.

ರಸ್ತೆ ಬದಿಯ ಚರಂಡಿ ಹೂಳೆತ್ತುವುದು: ಒಟ್ಟು 3.8 ಕಿ.ಮೀ ಉದ್ದದ ಪೈಕಿ 2.5 ಕಿ.ಮೀ ಚರಂಡಿಯ ಹೂಳೆತ್ತಲಾಗಿದೆ. ಒಟ್ಟು 4.13 ಕಿ.ಮೀ ಪೈಕಿ 2.72 ಕಿ.ಮೀ ಉದ್ದದ ರಸ್ತೆಯಲ್ಲಿನ ಕರ್ಬ್‌ಗಳನ್ನು ಸರಿಪಡಿಸಿ ಬಣ್ಣ ಬಳಿಯಲಾಗಿದ್ದು, ಶೇ. 66 ರಷ್ಟು ಸಾಧನೆಯಾಗಿದೆ ಎಂದು ಅವರು ವಿವರಿಸಿದರು.

24 ಜಂಕ್ಷನ್‌ಗಳಲ್ಲಿ ಸ್ವಚ್ಛತಾ ಕಾರ್ಯ

ಈಗಾಗಲೇ ಗುರುತಿಸಿರುವ 24 ಜಂಕ್ಷನ್‌ಗಳ ಪೈಕಿ 13 ಜಂಕ್ಷನ್‌ಗಳನ್ನು ಸ್ವಚ್ಛಗೊಳಿಸಿ ಸರಿಪಡಿಸಲಾಗಿದ್ದೆ. ರಾಜಕಾಲುವೆ/ಮಳೆನೀರು ಚರಂಡಿ ಹೂಳೆತ್ತುವುದು: ಒಟ್ಟು 1.19 ಕಿ.ಮೀ ಪೈಕಿ 0.75 ಕಿ.ಮೀ ಹೂಳೆತ್ತಲಾಗಿದ್ದು, ಶೇ. 63 ರಷ್ಟು ಪ್ರಗತಿಯಾಗಿದೆ ಸಾರ್ವಜನಿಕ ಸ್ಥಳಗಳಲ್ಲಿದ್ದ 2 ಅನಾಥ ವಾಹನಗಳ ಪೈಕಿ 1 ವಾಹನವನ್ನು ತೆರವುಗೊಳಿಸಲಾಗಿದೆ ಎಂದರು.

Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?
Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?

ಇಲಾಖಾವಾರು ಸಮನ್ವಯದ ಕಾಮಗಾರಿಗಳು

ಪಾಲಿಕೆ ವ್ಯಾಪ್ತಿಯ ಬೆಸ್ಕಾಂನ 7 ವಿದ್ಯುತ್ ಸಮಸ್ಯೆಗಳ ಪೈಕಿ 4 (ಶೇ. 57) ಹಾಗೂ 6 ಅಡೆತಡೆಗಳ ಪೈಕಿ 3 (ಶೇ. 50) ಬಗೆಹರಿದಿದ್ದು, ಒಟ್ಟಾರೆ 13 ಸಮಸ್ಯೆಗಳಲ್ಲಿ 7 ಇತ್ಯರ್ಥಗೊಂಡಿವೆ.ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿನ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತರು ಸೂಚಿಸಿದ್ದಾರೆ. ಎರಡನೇ ವಾರದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು (ಚರಂಡಿ ಸ್ಲಾಬ್ಸ್, ರಸ್ತೆ ಗುಂಡಿಗಳು ಹಾಗೂ ಜಲಮಂಡಳಿ/ಬೆಸ್ಕಾಂ ಸಂಬಂಧಿತ ಕಾಮಗಾರಿಗಳು) ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಅವರು ಕಿವಿ ಮಾತು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+