Bengaluru Jatre: ಮೆಗಾ, ಮೀಡಿಯಂ, ಮಿನಿ ಇವೆಂಟ್ಸ್‌ ಧಮಾಕಾ: ಜಿಬಿಎಯಿಂದ ಸಾಂಸ್ಕೃತಿಕ ಹಬ್ಬಕ್ಕೆ ಕೌಂಟ್‌ಡೌನ್!

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನೇತೃತ್ವದಲ್ಲಿ 'ಬೆಂಗಳೂರು ಜಾತ್ರೆ' ಆಯೋಜಿಸಲಾಗಿದೆ. ಮುಂದಿನ ತಿಂಗಳ ಡಿಸೆಂಬರ್ 4ರಿಂದ 13ರವರೆಗೆ ಅನೇಕ ಕಾರ್ಯಕ್ರಮಗಳು ನಡೆಯಲಿದ್ದು, ಅಗತ್ಯ ಪೂರ್ವ ಸಿದ್ಧತೆಗೆ ಪಾಲಿಕೆ ಮುಂದಾಗಿದೆ.

ಇಂದು ಬುಧವಾರ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಡಿ.ಎಸ್. ರಮೇಶ್ ಅವರು 'ಬೆಂಗಳೂರು ಜಾತ್ರೆ' ಕುರಿತು ಮಹತ್ವದ ಸಭೆ ನಡೆಸಿದರು. ಈ ವೇಳೆ ವಾರ್ಡ್ ಒನ್ ಅಭಿಯಾನದ ಪ್ರಗತಿ, ರಸ್ತೆ ಗುಂಡಿಗಳ ದುರಸ್ತಿ, ಅನಧಿಕೃತ ಕಟ್ಟಡಗಳ ತೆರವು, ಜಂಕ್ಷನ್‌ ಅಭಿವೃದ್ಧಿ, ಬಿಡಾಡಿ ವಾಹನಗಳ ತೆರವು ಹಾಗೂ ಸಾರ್ವಜನಿಕ ದೂರುಗಳ ವಿಲೇವಾರಿಗಾಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

Bengaluru Jatre

ಬೆಂಗಳೂರಲ್ಲಿ ಮೆಗಾ-ಮಿನಿ ಇವೆಂಟ್ ಲಿಸ್ಟ್ ಹೀಗಿದೆ

"ಬೆಂಗಳೂರು ಜಾತ್ರೆ'ಯ ಅಂಗವಾಗಿ ಮೆಗಾ, ಮೀಡಿಯಂ ಹಾಗೂ ಮಿನಿ ಈವೆಂಟ್‌ಗಳನ್ನು ಆಯೋಜಿಸಲಾಗುವುದು. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೀಡಿಯಂ ಈವೆಂಟ್‌ಗಳನ್ನು ಐಟಿಐ ಲಿಮಿಟೆಡ್ ಮತ್ತು ಪಟ್ಟಂದೂರು ಅಗ್ರಹಾರದ ದಸರಾ ಮೈದಾನದಲ್ಲಿ ನಡೆಸಲು ಸ್ಥಳಗಳನ್ನು ಗುರುತಿಸಲಾಗಿದೆ. ಮಿನಿ ಈವೆಂಟ್‌ಗಳನ್ನು 10 ಸ್ಥಳಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಕೆ.ಆರ್. ಪುರ ಮತ್ತು ಮಹದೇವಪುರ ವಲಯಗಳಲ್ಲಿ ತಲಾ ಐದು ಸ್ಥಳಗಳನ್ನು ಆಯ್ಕೆ ಮಾಡುವಂತೆ ಆಯುಕ್ತರು ಸೂಚಿಸಿದರು.

Metro Pink Line ಪ್ರಧಾನಿಯಿಂದ ಚಾಲನೆ: 2027ರಲ್ಲಿ 4 ಹೊಸ ಮೆಟ್ರೋ ಲೈನ್‌ಗಳ ಉದ್ಘಾಟನೆ?: ಕೃಷ್ಣ ಬೈರೇಗೌಡ
Metro Pink Line ಪ್ರಧಾನಿಯಿಂದ ಚಾಲನೆ: 2027ರಲ್ಲಿ 4 ಹೊಸ ಮೆಟ್ರೋ ಲೈನ್‌ಗಳ ಉದ್ಘಾಟನೆ?: ಕೃಷ್ಣ ಬೈರೇಗೌಡ

ಪ್ರತಿ ಸ್ಥಳದಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ವೇದಿಕೆ, ಸೌಂಡ್ಸ್‌, ಲೈಟಿಂಗ್ಸ್‌ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಜಿಬಿಎ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರ ತಂಡಗಳು ಭಾಗವಹಿಸಲಿವೆ. ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರ ಗೌರವಧನ ನಿಗದಿಪಡಿಸಬೇಕು.

ವಾಕ್‌ಥಾನ್, ಸೈಕ್ಲೋಥಾನ್, ಕ್ರೀಡಾಕೂಟ, ರಂಗೋಲಿ ಸ್ಪರ್ಧೆ ಹಾಗೂ ಆಹಾರ ಮೇಳ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಸ್ಥಳೀಯ ಸಾರ್ವಜನಿಕರು, ಕಾಲೇಜುಗಳು ಹಾಗೂ ಸ್ಥಳೀಯ ಗಣ್ಯರನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಸಹಭಾಗಿತ್ವಕ್ಕೆ ಆದ್ಯತೆ ನೀಡಬೇಕು. ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿ ಪಾಲಿಕೆಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಬಿಡಾಡಿ ವಾಹನಗಳ ತೆರವಿಗೆ ಕ್ರಮ

ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲದಿಂದ ನಿಲುಗಡೆ ಮಾಡಿರುವ ಬಿಡಾಡಿ (ಅನಾಥ) ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 53 ಬಿಡಾಡಿ ವಾಹನಗಳನ್ನು ಗುರುತಿಸಲಾಗಿದೆ. ಈ ಪೈಕಿ ಮೂರು ವಾಹನಗಳನ್ನು ಬಿಡುಗಡೆ (ಮಾಲೀಕರಿಗೆ ಹಸ್ತಾಂತರ) ಮಾಡಲಾಗಿದೆ. ಉಳಿದ ವಾಹನಗಳನ್ನು ನಿಯಮಾನುಸಾರ ಸ್ಕ್ರಾಪ್ ಮಾಡಲು ಕ್ರಮ ಕೈಗೊಳ್ಳಬೇಕು. ವಾರ್ಡ್‌ಗಳಲ್ಲಿ ವರ್ಷಗಳಿಂದ ನಿಂತಿರುವ ವಾಹನಗಳನ್ನು ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಗುರುತಿಸಿ ತೆರವುಗೊಳಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಂತೆ ಎಚ್ಚರಿಸಿದರು.

ಅನಧಿಕೃತ ಕಟ್ಟಡಗಳ ತೆರವಿಗೆ ತಾಕೀತು

ಪಾಲಿಕೆ ವ್ಯಾಪ್ತಿಯ ಎಂಟು ಉಪವಿಭಾಗಗಳ ಪೈಕಿ ಆರು ಉಪವಿಭಾಗಗಳಲ್ಲಿ ಮಾತ್ರ ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ನೋಟಿಸ್ ನೀಡಿದ ಬಳಿಕವೂ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು. ಅನಧಿಕೃತ ಕಟ್ಟಡಗಳು ಹಾಗೂ ಪಿಜಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ಮಾಣ ಹಂತದಲ್ಲಿರುವ ಅನಧಿಕೃತ ಕಟ್ಟಡಗಳನ್ನೂ ಗುರುತಿಸಿ ಕ್ರಮ ವಹಿಸಬೇಕು. ಎಲ್ಲಾ ಕಾರ್ಯನಿರ್ವಾಹಕ ಅಭಿಯಂತರರು ತಮ್ಮ ವ್ಯಾಪ್ತಿಯ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ನಮ್ಮ ಮೆಟ್ರೋ ಪ್ರಯಾಣಿಕರು, ಪಾದಾಚಾರಿ, ಸವಾರರಿಗೆ ಬೆಂಗಳೂರು ದಕ್ಷಿಣ ಪಾಲಿಕೆಯಿಂದ ಗುಡ್‌ನ್ಯೂಸ್
ನಮ್ಮ ಮೆಟ್ರೋ ಪ್ರಯಾಣಿಕರು, ಪಾದಾಚಾರಿ, ಸವಾರರಿಗೆ ಬೆಂಗಳೂರು ದಕ್ಷಿಣ ಪಾಲಿಕೆಯಿಂದ ಗುಡ್‌ನ್ಯೂಸ್

ಅಭಿವೃದ್ಧಿ ಕಾಮಗಾರಿಗಳ ಪ್ರಗತಿಗೆ ವೇಗ ನೀಡಿ

ಸಿಎಂಐಡಿಪಿ ಅಡಿಯಲ್ಲಿ ಕೈಗೊಂಡಿರುವ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ತಿಂಗಳೊಳಗೆ ಎಲ್ಲಾ ವಿಭಾಗಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಬಿಲ್‌ಗಳನ್ನು ಸಲ್ಲಿಸಿ, ಕಾಮಗಾರಿಗಳ ಪ್ರಗತಿ ವಿವರ ಸ್ಪ್ರೆಡ್‌ಶೀಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು ಸೇರಿದಂತೆ ಯಾವುದೇ ಸಿವಿಲ್ ಕಾಮಗಾರಿಗಳು ಬಾಕಿ ಉಳಿಯದಂತೆ ಕ್ರಮ ವಹಿಸಬೇಕು ಎಂದು ಆಯುಕ್ತರು ಸೂಚಿಸಿದರು.

ಸಹಾಯ ಆಪ್‌ ದೂರುಗಳ ತ್ವರಿತ ವಿಲೇವಾರಿ

ಸಹಾಯ ಆಪ್‌ನಲ್ಲಿ ಸಾರ್ವಜನಿಕರು ದಾಖಲಿಸಿರುವ ದೂರುಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ವಾರ್ಡ್, ಉಪವಿಭಾಗ ಹಾಗೂ ವಲಯವಾರು ಬಾಕಿ ದೂರುಗಳ ವರದಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಲಾಗಿನ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳು ಸ್ಪಷ್ಟವಾಗಿ ಕಾಣುವಂತೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನವೆಂಬರ್ 12ರಂದು ತರಬೇತಿ ಕಾರ್ಯಕ್ರಮ ಆಯೋಜಿಸಿ, ಸಹಾಯ ಆಪ್‌ಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.

ವಾರ್ಡ್ ಒನ್ ಅಭಿಯಾನ

ವಾರ್ಡ್ ಒನ್ ಅಭಿಯಾನದಡಿ ವಿವಿಧ ವಾರ್ಡ್‌ಗಳಲ್ಲಿ ಕೈಗೊಂಡಿರುವ ರಸ್ತೆ ಗುಂಡಿಗಳ ದುರಸ್ತಿ, ಬ್ಲ್ಯಾಕ್ ಸ್ಪಾಟ್‌ಗಳ ತೆರವು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಚರಂಡಿಗಳ ಹೂಳೆತ್ತುವಿಕೆ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯ ತೆರವು ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಪೂರ್ಣಗೊಂಡಿರುವ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳ ಸಂಪೂರ್ಣ ವಿವರವನ್ನು ಅಧಿಕಾರಿಗಳು ಸಲ್ಲಿಸಬೇಕು. ಸಾರ್ವಜನಿಕರಿಂದ ಸ್ವೀಕರಿಸಿರುವ ದೂರುಗಳಿಗೆ ಆದ್ಯತೆ ನೀಡಿ, ಸಮಸ್ಯೆಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸಬೇಕು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಅಭಿಯಾನದ ಉದ್ದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶಿಸಿದರು.

ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಗೆ ಆದ್ಯತೆ

ತ್ಯಾಜ್ಯ ವಿಂಗಡಣೆ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಗಟ್ಟುವುದು ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪರಿಣಾಮಕಾರಿ ಮಾಹಿತಿ, ಶಿಕ್ಷಣ ಹಾಗೂ ಸಂವಹನ (IEC) ಅಭಿಯಾನ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ರಸ್ತೆ ಗುಂಡಿ ದುರಸ್ತಿ ನಿರ್ಲಕ್ಷ್ಯಕ್ಕೆ ಆಯುಕ್ತರ ಅಸಮಾಧಾನ

ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳನ್ನು ರಸ್ತೆ ಗುಂಡಿ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ. ಈ ಬಗ್ಗೆ ಸಭೆ ನಡೆದು ನಾಲ್ಕು ತಿಂಗಳು ಕಳೆದರೂ ಒಂದೇ ಒಂದು ವಾರ್ಡ್‌ ಅನ್ನು ರಸ್ತೆ ಗುಂಡಿ ಮುಕ್ತ ಎಂದು ಘೋಷಿಸದಿರುವುದಕ್ಕೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆರ್ಟಿರಿಯಲ್ ಮತ್ತು ಸಬ್‌ ಆರ್ಟಿರಿಯಲ್ ರಸ್ತೆಗಳಲ್ಲಿ ಇನ್ನೂ ಗುಂಡಿಗಳಿರುವುದನ್ನು ಗಮನಿಸಿದ ಅವರು, ಆಯ್ಕೆ ಮಾಡಿಕೊಂಡ ವಾರ್ಡ್‌ಗಳಲ್ಲಿನ ಅವ್ಯವಸ್ಥೆ ಸರಿಪಡಿಸಲು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+