Get Updates
Get notified of breaking news, exclusive insights, and must-see stories!

Bengaluru Viral Video: ಹೃದಯಾಘಾತ ಅಂಗಲಾಚಿದರೂ ಸಿಗಲಿಲ್ಲ ಸಹಾಯ; ರಸ್ತೆಯಲ್ಲೇ ವ್ಯಕ್ತಿ ಸಾವು

Bengaluru Viral Video: ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಈ ಘಟನೆ ಇಡೀ ಬೆಂಗಳೂರು ತಲೆತಗ್ಗಿಸುವಂತೆ ಮಾಡಿದೆ. ಮಾನವೀಯತೆ ವಿಚಾರದಲ್ಲಿ ನಾಗರಿಕ ಸಮಾಜವೊಂದು ಯಾವ ರೀತಿ ನಡೆದುಕೊಳ್ಳಬಾರದು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಈ ಘಟನೆ ಇದೆ. ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಡು ರಸ್ತೆಯಲ್ಲೇ ಒದ್ದಾಡಿ ಸಾವನ್ನಪ್ಪಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳವಾರ (ಡಿಸೆಂಬರ್ 16) ನಡೆದಿರುವ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮೃತರ ಪತ್ನಿಯು ಯಾರಾದರೂ ಒಬ್ಬರಾದರೂ ಸಹಾಯ ಮಾಡಿದ್ದರೆ ನನ್ನ ಪತಿ ಉಳಿಯುತ್ತಿದ್ದರು. ಯಾರೂ ಸಹಾಯ ಮಾಡಲಿಲ್ಲ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಹ ಸಿಗಲಿಲ್ಲ ಎಂದು ಹೇಳಿದ್ದಾರೆ.

Bengaluru Viral Video Man Dies After Heart Attack No Help

ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ದಾರಿಯಲ್ಲಿಯೇ ಸಾವನ್ನಪ್ಪಿದ್ದಾರೆ. ದಾರಿಯಲ್ಲಿ ಹೋಗುವವರ ಬಳಿ ಜೀವ ಉಳಿಸುವುದಕ್ಕೆ ಅಂಗಲಾಚಿದರೂ ಯಾರೊಬ್ಬರೂ ಮುಂದೆ ಬಂದು ಸಹಾಯ ಮಾಡಿಲ್ಲ. ಈ ದುರಂತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದದ್ದೇನು ?

ಬೆಂಗಳೂರಿನಲ್ಲಿ ಮಂಗಳವಾರ ತಡರಾತ್ರಿ ಸಮಯದಲ್ಲಿ ಈ ಘಟನೆ ನಡೆದಿದೆ. ನಗರದ ಬನಶಂಕರಿ ಸಮೀಪದ ಕದಿರೇನಹಳ್ಳಿಯಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಹಾಗೂ ಅವರ ಪತ್ನಿ ಆಸ್ಪತ್ರೆಗೆ ಹೋಗಬೇಕು ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದರೂ ಯಾರೂ ಸಹ ಸಹಾಯಕ್ಕೆ ಬಂದಿಲ್ಲ. ಹೃದಯಾಘಾತಕ್ಕೆ ಒಳಗಾಗದ ವೆಂಕಟರಮಣ ಎನ್ನುವವರನ್ನು ಜಯದೇವ ಆಸ್ಪತ್ರೆಗೆ ಸಾಗಿಸಲು ಅವರ ಪತಿ ರೂಪಾ ಅವರು ಪರದಾಡಿದ್ದಾರೆ.

ವೆಂಕಟರಮಣ ಅವರ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಸಹ ಸಿಕ್ಕಿಲ್ಲ. ಹೀಗಾಗಿ ದಂಪತಿಯೇ ಬೈಕ್‌ನಲ್ಲಿ ಆಸ್ಪತ್ರೆಗೆ ಹೋಗುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಬೈಕ್‌ವೊಂದಕ್ಕೆ ಡಿಕ್ಕಿಯಾಗಿದ್ದು ವೆಂಕಟರಮಣ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಬೇಡಿಕೊಂಡರೂ ಯಾರೂ ಸಹ ಸಹಾಯ ಮಾಡಿಲ್ಲ. ಯಾರಾದರೂ ಆಗ ಸಹಾಯಕ್ಕೆ ಬಂದಿದ್ದರೆ ನನ್ನ ಗಂಡನ ಜೀವ ಉಳಿಸಬಹುದಾಗಿತ್ತು ಎಂದು ರೂಪಾ ಅವರು ಹೇಳಿದ್ದಾರೆ.

ಘಟನೆಯ ಹಿನ್ನೆಲೆ ಏನು ?

ಮಂಗಳವಾರ ಸಂಜೆ ವೆಂಕಟರಮಣ ಅವರು ತೀವ್ರ ಎದೆನೋವು ಅನುಭವಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಮೊದಲು ಹತ್ತಿರದ ಆಸ್ಪತ್ರೆಗೆ ಕರೆದಿದ್ದು, ಅವರು ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ ಕೂಡಲೇ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಆಂಬುಲೆನ್ಸ್ ಸೇವೆ ಕಲ್ಪಿಸಿಲ್ಲ ಎಂದು ರೂಪಾ ಅವರು ಆರೋಪಿಸಿದ್ದಾರೆ. ಬೇರೆ ದಾರಿಯಿಲ್ಲದೆ, ದಂಪತಿಗಳು ಆಸ್ಪತ್ರೆ ತಲುಪಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆವು.

ವಾಹನದಲ್ಲಿ ಹೋಗುವಾಗಲೇ ವೆಂಕಟರಮಣ ಅವರ ಸ್ಥಿತಿ ಹದಗೆಟ್ಟಿತ್ತು. ಅಲ್ಲದೇ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಇಬ್ಬರೂ ರಸ್ತೆಯಲ್ಲಿ ಬಿದ್ದೆವು. ವೆಂಕಟರಮಣ ಅವರು ರಕ್ತಸ್ರಾವವಾಗಿ ಉಸಿರಾಡಲು ಕಷ್ಟಪಡುತ್ತಾ ಕುಸಿದುಬಿದ್ದರು. ಯಾರೂ ಸಹಾಯಕ್ಕೆ ಬರಲೇ ಇಲ್ಲ ಯಾರಾದರೂ ಒಬ್ಬರು ಬಂದಿದ್ದರೂ ಅವರ ಜೀವವನ್ನು ಉಳಿಸಬಹುದಾಗಿತ್ತು ಎಂದು ರೂಪಾ ಹೇಳಿದ್ದಾರೆ.

15 ನಿಮಿಷ ನಾನು ಬೇಡಿಕೊಂಡರೂ ಯಾರೊಬ್ಬರೂ ಬರಲಿಲ್ಲ. ಕೊನೆಯದಾಗಿ ಯಾರೋ ಕ್ಯಾಬ್ ಬುಕ್ ಮಾಡಿಕೊಟ್ಟರು ಆದರೆ ಅಷ್ಟೊತ್ತಿಗಾಗಲೇ ವೆಂಕಟರಮಣ ಅವರು ಸಾವನ್ನಪ್ಪಿದ್ದರು ಎಂದು ರೂಪಾ ಅವರು ಹೇಳಿದ್ದಾರೆ.

ಕಣ್ಣುಗಳ ದಾನ: ಸಮಾಜದಲ್ಲಿ ಯಾರೊಬ್ಬರೂ ಸಹಾಯ ಮಾಡದಿದ್ದರೂ ವೆಂಕಟರಮಣ ಅವರು ಮತ್ತೊಬ್ಬರ ಬದುಕಿಗೆ ಆಶಾಕಿರಣವಾಗಿದ್ದಾರೆ. ಅವರ ಸಾವಿನ ನಂತರ ತೀವ್ರ ದುಃಖದ ನಡುವೆಯೂ ಪತಿಯ ನೇತ್ರದಾನ ಮಾಡುವುದಕ್ಕೆ ಅವರ ಪತ್ನಿ ರೂಪಾ ಮುಂದಾಗಿದ್ದು, ಅವರ ಕಣ್ಣುಗಳನ್ನು ದಾನ ಮಾಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+