Bengaluru Viral: ಬೆಂಗಳೂರಿನಿಂದ ಉತ್ತರ ಭಾರತೀಯರ ಜೀವನ ಸುಧಾರಿಸಿದೆ ಎಂದ ನಾರ್ಥಿ ಯುವತಿ, ಪೋಸ್ಟ್‌ ವೈರಲ್

Bengaluru Viral: ಬೆಂಗಳೂರು ಹಲವು ಉತ್ತರ ಭಾರತೀಯರಿಗೆ ಹೊಸ ಜೀವನ ರೂಪಿಸಿಕೊಟ್ಟಿದೆ ಎಂದು ನಾರ್ಥಿ ಯುವತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ ಇದೀಗ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ನಾರ್ಥಿಯರು ಕನ್ನಡ ಭಾಷೆ ಹಾಗೂ ಬೆಂಗಳೂರು ನಗರದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದೇ ಹೆಚ್ಚು. ಆದರೆ ಇದೀಗ ಯುವತಿಯೊಬ್ಬರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗಿದೆ.

ಬೆಂಗಳೂರು ಹಾಗೂ ಹೈದರಾಬಾದ್ ಸೇರಿದಂತೆ ದಕ್ಷಿಣ ಭಾರತದ ವಿವಿಧ ಪ್ರಮುಖ ನಗರಗಳ ಬಗ್ಗೆ ಯುವತಿ ಮಾತನಾಡಿದ್ದು, ಉತ್ತರ ಭಾರತದ ಬಿಹಾರ ಹಾಗೂ ಉತ್ತರ ಪ್ರದೇಶದ ರಾಜ್ಯದ ಜನರು ಹೇಗೆ ಬೆಂಗಳೂರಿನಂತಹ ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಖುಷಿ ಎನ್ನುವವರು (@khushiirl) ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Bengaluru Viral

ಬೆಂಗಳೂರು ನಗರವು ಲಕ್ಷಾಂತರ ಜನರಿಗೆ ಹೊಸ ಜೀವನ ಕೊಟ್ಟಿದೆ. ಬಿಹಾರದ ಒಬ್ಬ ವ್ಯಕ್ತಿ 3 ವರ್ಷಗಳಲ್ಲಿ ಕೇವಲ ₹14,000 ದಲ್ಲಿ ತನ್ನ ಬಿಸಿಎ ಮುಗಿಸುತ್ತೇನೆ. ತುಂಬಾ ಬಡ ಕುಟುಂಬದಿಂದ ಬಂದವರು ಬೆಂಗಳೂರಿನಂತಹ ನಗರಕ್ಕೆ ಬಂದು ಒಳ್ಳೆಯ ಜೀವನ ಕಟ್ಟಿಕೊಳ್ಳುತ್ತಾನೆ. ಬಿಹಾರದಿಂದ ಬಂದ ವ್ಯಕ್ತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ವಾರ್ಷಿಕ 35 ಲಕ್ಷ ಪ್ಯಾಕೇಜ್ ಪಡೆಯುತ್ತಾನೆ. ಕಠಿಣ ಪರಿಶ್ರಮ ಅವನಿಗೆ ಎಲ್ಲವನ್ನೂ ಬದಲಾಯಿಸುತ್ತೆ. ಹೌದು, ಈ ಉದ್ಯಮವು ಒಳ್ಳೆಯ ಸಂಪಾದನೆ ನೀಡುತ್ತದೆ. ಅದಕ್ಕಾಗಿಯೇ ಜನರು ಇದನ್ನು ಆಯ್ಕೆ ಮಾಡುತ್ತಾರೆ ಎಂದು ಖುಷಿ ಎನ್ನುವವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನು ಬೆಂಗಳೂರಿನೊಂದಿಗೆ ದಕ್ಷಿಣ ಭಾರತದ ಮತ್ತೊಂದು ಪ್ರಮುಖ ನಗರವಾಗಿರುವ ಹೈದರಾಬಾದ್‌ನ ಬಗ್ಗೆಯೂ ಖುಷಿ ಎನ್ನುವವರು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ಹೈದರಾಬಾದ್ ಬಗ್ಗೆ ನಾನು ಗಮನಿಸಿದ ವಿಷಯಗಳು ಎನ್ನುವ ಸಾಲುಗಳೊಂದಿಗೆ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರೂ ಹೈದರಾಬಾದ್‌ನ ಬಗ್ಗೆ ನೆಗೆಟಿವ್ ಆಗಿಯೂ ಸಹ ಪೋಸ್ಟ್‌ ಮಾಡಿದ್ದಾರೆ.

ಹೈದರಾಬಾದ್ ಬಗ್ಗೆ ನಾನು ಗಮನಿಸಿದ ವಿಷಯಗಳು

~ ಪ್ರತಿಯೊಂದು ತಾಂತ್ರಿಕ ಕಟ್ಟಡವೂ ಗಾಜಿನಿಂದ ಕೂಡಿದೆ, ಸಿಂಗಾಪುರದಂತಹ ನಗರಗಳಂತೆಯೇ ಹೆಚ್ಚು ಪರಿಸರ ಸ್ನೇಹಿ ನಗರ ವಿನ್ಯಾಸದ ಅಗತ್ಯವಿದೆ

~ ಕೇವಲ 15 ನಿಮಿಷಗಳ ಮಳೆಯ ನಂತರ, ರಸ್ತೆಗಳು ಈಗಾಗಲೇ ನೀರಿನಿಂದ ತುಂಬಿದ್ದವು.

~ ಯಾರೋ ಒಬ್ಬ ಆಟೋ ಚಾಲಕನಿಗೆ ಡಿಕ್ಕಿ ಹೊಡೆಯುವ ಪರಿಸ್ಥಿತಿಯನ್ನು ನಾನು ನೋಡಿದೆ ಮತ್ತು ಪೊಲೀಸರು ಅಲ್ಲಿದ್ದರು ಆದರೆ ಮಧ್ಯಪ್ರವೇಶಿಸಿದಂತೆ ಕಾಣಲಿಲ್ಲ

~ ಸಂಚಾರ ತುಂಬಾ ಹೆಚ್ಚಾಗಿತ್ತು, ಕೆಲವೊಮ್ಮೆ ನಾನು ರಸ್ತೆ ದಾಟಲು ಸಹ ಸಾಧ್ಯವಾಗಲಿಲ್ಲ

~ ಹಲವಾರು ಪ್ರದೇಶಗಳಲ್ಲಿ ಗುಂಡಿಗಳಿವೆ, ಇದು ಪಾದಚಾರಿಗಳು ಮತ್ತು ವಾಹನಗಳೆರಡಕ್ಕೂ ಅಪಾಯಕಾರಿಯಾಗಬಹುದು

~ ಉಬರ್ ಮತ್ತು ರಾಪಿಡೋ ಸವಾರಿಗಳು ಸಾಕಷ್ಟು ದುಬಾರಿಯಾಗಿದ್ದವು, ವಿಶೇಷವಾಗಿ ಮಳೆಯ ಸಮಯದಲ್ಲಿ ಸುಮಾರು ₹1,100

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+