Bengaluru-Vijayawada Expressway: ಬೆಂಗಳೂರು–ವಿಜಯವಾಡ ಎಕ್ಸ್‌ಪ್ರೆಸ್‌ವೇನಿಂದ ಕರ್ನಾಟಕಕ್ಕೆ ಏನು ಲಾಭ?

Bengaluru-Vijayawada Expressway: ದೇಶದ ಬಹುನಿರೀಕ್ಷತ ಹೆದ್ದಾರಿಗಳಲ್ಲಿ ಕಾಮಗಾರಿ ಪ್ರಗತಿ ಹಂತದಲ್ಲಿರುವ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ ವೇ ಕೂಡ ಒಂದಾಗಿದೆ. ಈ ಯೋಜನೆ ಪೂರ್ಣಗೊಂಡರೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಿಗೆ ಹೆಚ್ಚು ಅನುಕೂಲ ಹಾಗೂ ಆಸ್ತಿ ಬೆಲೆ ಹೆಚ್ಚು ಹೆಚ್ಚಳ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ (NH-544G) ಭಾರತಮಾಲಾ ಹಂತ-II ಯೋಜನೆಯ ಪ್ರಮುಖ ಹಸಿರು ಮಾರ್ಗವಾಗಿದೆ. ಇದು ದಕ್ಷಿಣ ಭಾರತದ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರ ವೇಗವಾಗಿ ಬೆಳೆಯಲು ಪ್ರಮುಖ ಪಾತ್ರವಹಿಸಲಿದೆ. ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ನಡುವೆ ಸಂಪರ್ಕವನ್ನು ಸುಲಭಗೊಳಿಸುತ್ತಿದ್ದು, ಹೊಸ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ.

Bengaluru Vijayawada Expressway Know What is BenefitS for Karnataka and Property Price

ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಉದ್ದ ಸುಮಾರು 518 ಕಿಲೋ ಮೀಟರ್ ಆಗಿದ್ದು, 4 ರಿಂದ 6 ಲೇನ್‌ಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದು ಕರ್ನಾಟಕದ ಬೆಂಗಳೂರಿನ ಹತ್ತಿರದ ಕೋಡಿಕೊಂಡದಿಂದ ಆರಂಭ ಆಗಲಿದ್ದು, ಆಂಧ್ರಪ್ರದೇಶದ ವಿಜಯವಾಡ ಬಳಿಯ ಅಡ್ಡಂಕಿಗೆ ಕೊನೆಗೊಳ್ಳಲಿದೆ. ಇದರ ನಿರ್ಮಾಣ ವೆಚ್ಚ ₹14,000-₹19,320 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ.

ಈ ಹೆದ್ದಾರಿ ಯೋಜನೆಗೆ 2023ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದರು. ಬಳಿಕ 2024ರಲ್ಲಿ ಮಾರ್ಚ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಮಗಾರಿ ಆರಂಭಕ್ಕೆ ಚಾಲನೆ ಕೊಟ್ಟಿದ್ದರು. 2026 ಅಥವಾ 2027ರ ವೇಳೆಗೆ ಉದ್ಘಾನೆ ಆಗುವ ಸಾಧ್ಯತೆಯಿದೆ ಎಂದು ಹೆದ್ದಾರಿ ಸಚಿವಾಲಯ ಈಗಾಗಲೇ ಭರವಸೆ ನೀಡಿದೆ.

ಇನ್ನೂ ಈ ಹೆದ್ದಾರಿ ಹಾದುಹೋಗುವ ಅಕ್ಕಪಕ್ಕದ ಭೂಮಿಗೆ ಈಗಾಗಲೇ ಚಿನ್ನದ ಬೆಲೆ ಬಂದಿದ್ದು, ಪೂರ್ಣಗೊಂಡರೆ ಈ ಭಾಗದಲ್ಲಿನ ಆಸ್ತಿ ಮಾಲೀಕರಿಗೆ ಬಂಪರ್ ಲಾಟರಿ ಹೊಡೆಯಲಿದೆ. ಯಾಕಂದ್ರೆ ಅಷ್ಟೊತ್ತಿಗೆ ದರ ಮತ್ತಷ್ಟು ದುಪ್ಪಾಟ್ಟಾಗುವುದರಲ್ಲಿ ಆಶ್ಚರ್ಯವಿಲ್ಲ. ಕರ್ನಾಟಕ ಹಾಗೂ ಆಂಧ್ರಪ್ರದೇಶಗಳ ಹಲವು ಜಿಲ್ಲೆಗಳ ಆಸ್ತಿ ಮಾಲೀಕರು ಕೋಟಿ.. ಕೋಟಿ.. ಹಣ ಎಣಿಸುವ ಕಾಲ ಸನಿಹದಲ್ಲಿದೆ.

ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿದೆ?

* ಬೆಂಗಳೂರು ಗ್ರಾಮಾಂತರ
* ಚಿಕ್ಕಬಳ್ಳಾಪುರ
* ಕೋಲಾರ
* ತುಮಕೂರು
* ಚಾಮರಾಜನಗರ

ಆಂಧ್ರಪ್ರದೇಶದ ಯಾವೆಲ್ಲಾ ಜಿಲ್ಲೆಗಳ ಮೂಲಕ ಹಾದುಹೋಗಲಿದೆ?

* ಚಿತ್ತೂರು
* ಅನಂತಪುರಂ
* ಶ್ರೀ ಸತ್ಯಸಾಯಿ
* ನಂದ್ಯಾಲ್
* ಪಲ್ನಾಡು
* ಬಾಪಟ್ಲಾ
* ಗುಂಟೂರು
* ನಲ್ಲೋರೆ
* ಪ್ರಕಾಶಂ

ಉಪಯೋಗಗಳೇನು?

* ಈ ಹೆದ್ದಾರಿ ಪೂರ್ಣಗೊಂಡರೆ, ದೇವನಹಳ್ಳಿ, ಹೊಸಕೋಟೆ, ಬುದಿಗೇರೆ ಕ್ರಾಸ್, ಕೋಲಾರ, ಚಿಕ್ಕಬಳ್ಳಾಪುರ, ಚಿತ್ತೂರು, ತಿರುಪತಿಯಲ್ಲಿ ರಿಯಲ್‌ ಎಸ್ಟೇಟ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಅಲ್ಲದೆ, ಹೊಸ ಕಾರೀಡಾರ್ ನಿರ್ಮಾಣಕ್ಕೂ ಹೆಚ್ಚು ಅನುಕೂಲ ಆಗಲಿದೆ.
* ಬೆಂಗಳೂರು-ವಿಜಯವಾಡ ನಡುವಿನ ಪ್ರಯಾಣ ಸಮಯ 12-13 ಗಂಟೆಯಿಂದ ಕೇಲವಲ 6 ಗಂಟೆಗೆ ಇಳಿಕೆ ಆಗಲಿದೆ.
* ವಾಹನಗಳ ದಟ್ಟಣೆ ಕಡಿಮೆಯಾಗಲಿದೆ.
* ಈ ಪ್ರದೇಶಗಳಲ್ಲಿ ಆಸ್ತಿ ಮತ್ತು ವಾಣಿಜ್ಯ ಅಭಿವೃದ್ಧಿಗೆ ಬೇಡಿಕೆ ಹೆಚ್ಚಾಗಲಿದೆ.
* ಕೈಗಾರಿಕೆಗಳು ತಲೆ ಎತ್ತಲಿದ್ದು, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಲಿವೆ.
* ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ.

ಆಸ್ತಿ ಮಾಲೀಕರಿಗೆ ಬಂಪರ್ ಲಾಟರಿ: ಈಗಾಗಲೇ ಈ ಹೆದ್ದಾರಿ ಹಾದು ಹೋಗುವ ಮಾರ್ಗಗಳಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಉದ್ಯಮಿಗಳು ಈ ಭಾಗದಲ್ಲು ನಿವೇಶನ, ಮನೆ ಖರೀದಿಸಲು ಹಾಗೂ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಎನ್‌ಆರ್‌ಐ ಹೂಡಿಕೆದಾರರು, ರಿಯಲ್ ಎಸ್ಟೇಟ್ ಫಂಡ್ಸ್, ರಿಟೈಲ್ ಲ್ಯಾಂಡ್ ಬ್ಯಾಂಕರ್‌ಗಳು ಹೂಡಿಕೆಗೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಭೂಮಿ ಬೆಲೆ ಎಷ್ಟು ಹೆಚ್ಚಳ?: ಈಗಾಗಲೇ ಈ ಭಾಗಗಳಲ್ಲಿ ಆಸ್ತಿ ಬೆಲೆ ಏರಿಕೆಯಾಗುತ್ತಲಿದೆ. ಇನ್ನು 3-5 ವರ್ಷಗಳಲ್ಲಿ ಇಲ್ಲಿನ ಭೂಮಿಯ ಮೌಲ್ಯ ಶೇಕಡ 30-40% ಹೆಚ್ಚಳ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಉದಾಹರಣೆಗೆ ಈಗಾಗಲೇ ಉದ್ಘಾನೆಯಾಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಭಾಗದ ಭೂಮಿಯ ಮೌಲ್ಯ ಶೇಕಡ 40-50% ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ದಕ್ಷಿಣ ಭಾರತದಲ್ಲಿ ಆಸ್ತಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. ಈ ಭಾಗದಲ್ಲಿ ಮೂಲಸೌಕರ್ಯ, ವಾಸಸ್ಥಾನ, ಉದ್ಯಮ, ವಾಣಿಜ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಬೆಳವಣಿಗೆಗಳು ಆಗುತ್ತಿವೆ. ಮುಂದಿನ ವರ್ಷದಿಂದಲೇ ಈ ಮಾರ್ಗದಲ್ಲಿ ಆಸ್ತಿ ಮೌಲ್ಯ ಮತ್ತು ಹೂಡಿಕೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+