Bengaluru-Vijayawada Expressway: ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಯಾವಾಗ?
Bengaluru-Vijayawada Expressway: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಇನ್ನು ಬಹುನಿರೀಕ್ಷಿತ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್ ವೇ ಉದ್ಘಾನೆ ಯಾವಾಗ? ಇದಕ್ಕೆ ವೆಚ್ಚ ಎಷ್ಟು? ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿದೆ ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದ ಬಹುನಿರೀಕ್ಷಿತ ಹೆದ್ದಾರಿ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್ ವೇ ಕೂಡ ಒಂದಾಗಿದೆ. ಇದು ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎಂಬ ಪ್ರಶ್ನೆ ಬಹುತೇಕ ಮಂದಿಯಲ್ಲಿ ಹುಟ್ಟಿರುತ್ತವೆ. ಇವುಗಳಿಗೆಲ್ಲ ಉತ್ತರವನ್ನು ಸಂಪೂರ್ಣ ಮಾಹಿತಿ ಸಹಿತ ಇಲ್ಲಿ ಕೊಡಲಾಗಿದೆ ಕಣ್ಣಾಡಿಸಿ.

ಪೂರ್ಣ ಯಾವಾಗ ಹಾಗೂ ವೆಚ್ಚ ಎಷ್ಟು?: ಇದು ಕರ್ನಾಟಕದ ಬೆಂಗಳೂರಿನಿಂದ ಆಂಧ್ರಪ್ರದೇಶದ ವಿಜಯವಾಡಕ್ಕೆ ಸಂಪರ್ಕ ಕಲ್ಪಿಸುವ 518 ಕಿಲೋ ಮೀಟರ್ ಉದ್ದದ ಪ್ರಮುಖ 6 ಲೇನ್ ಎಕ್ಸ್‌ಪ್ರೆಸ್‌ವೇ ಆಗಿದ್ದು, ನಿರ್ಮಾಣ ಹಂತದಲ್ಲಿದೆ. ಇನ್ನು ಈ ಎಕ್ಸ್‌ಪ್ರೆಸ್‌ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಲೋ ಮೀಟರ್ ವೇಗದ ಮಿತಿ ನಿಗದಿಪಡಿಸಲಾಗಿದೆ.
ಈ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 11, 2024ರಂದು ಅಡಿಪಾಯ ಹಾಕಿದ್ದು, ಇದು 2026-27ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯರೂಪಕ್ಕೆ ಬಂದರೆ, ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಮತ್ತು ದೂರ ಗಮನಾರ್ಹವಾಗಿ ಕಡಿಮೆ ಆಗಲಿದೆ.
ಈ ಎಕ್ಸ್‌ಪ್ರೆಸ್ ವೇ ದಕ್ಷಿಣ ಭಾರತದ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರ ವೇಗವಾಗಿ ಬೆಳೆಯಲು ಪ್ರಮುಖ ಪಾತ್ರವಹಿಸಲಿದೆ. ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ನಡುವೆ ಸಂಪರ್ಕವನ್ನು ಸುಲಭಗೊಳಿಸಲಿದ್ದು, ಅಭಿವೃದ್ಧಿ ಕ್ರಾಂತಿಯಾಗಲಿದೆ. ಇದು ರಾಜ್ಯದ ಬೆಂಗಳೂರಿನ ಹತ್ತಿರದ ಕೋಡಿಕೊಂಡದಿಂದ ಆರಂಭವಾಗಲಿದ್ದು, ಆಂಧ್ರಪ್ರದೇಶದ ವಿಜಯವಾಡ ಬಳಿಯ ಅಡ್ಡಂಕಿಗೆ ಕೊನೆಗೊಳ್ಳಲಿದೆ. ಇದರ ನಿರ್ಮಾಣ ವೆಚ್ಚ ₹14,000-₹19,320 ಕೋಟಿ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಭೂಮಿಗೆ ಬಂಗಾರ ಬೆಲೆ: ಈ ಹೆದ್ದಾರಿ ಹಾದುಹೋಗುವ ಅಕ್ಕಪಕ್ಕದ ಭೂಮಿಗೆ ಈಗಾಗಲೇ ಚಿನ್ನದ ಬೆಲೆ ಬಂದಿದ್ದು, ಪೂರ್ಣಗೊಂಡರೆ ಆಸ್ತಿ ಮಾಲೀಕರಿಗೆ ಬಂಪರ್ ಲಾಟರಿ ಹೊಡೆಯುವುದಂತೂ ಪಕ್ಕಾ.. ಪೂರ್ಣಗೊಳ್ಳುವುದರಲ್ಲಿ ಇಲ್ಲಿನ ಭೂಮಿ ಬೆಲೆ ಮತ್ತಷ್ಟು ದುಪ್ಪಾಟ್ಟಾಗುವುದರಲ್ಲಿ ಅನುಮಾನವಿಲ್ಲ.
ಯಾವೆಲ್ಲಾ ಜಿಲ್ಲೆಗಳಿಗೆ ಅನುಕೂಲ?: ಬೆಂಗಳೂರು-ವಿಯಯವಾಡ ಎಕ್ಸ್‌ಪ್ರೆಸ್ ವೇ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಾಮರಾಜನಗರ ಜಿಲ್ಲೆಗಳ ಮೇಲೆ ಹಾದುಹೋಗಲಿದೆ. ಇನ್ನು ಆಂಧ್ರಪ್ರದೇಶದ ಚಿತ್ತೂರು, ಅನಂತಪುರಂ, ಶ್ರೀ ಸತ್ಯಸಾಯಿ, ನಂದ್ಯಾಲ್, ಪಲ್ನಾಡು, ಬಾಪಟ್ಲಾ, ಗುಂಟೂರು, ನಲ್ಲೋರೆ, ಪ್ರಕಾಶಂ ಭಾಗಗಳಿಗೆ ಸಂಪರ್ಕ ಕಲ್ಪಿಸಲಿದೆ.
ಹೀಗೆ ರಾಜ್ಯದಲ್ಲಿ ಕೆಲ ರಾಷ್ಟ್ರೀಯ ಹೆದ್ದಾರಿಗಳು ಕಾಮಗಾರಿ ಹಂತದಲ್ಲಿದ್ದರೆ, ಇನ್ನೂ ಕೆಲವರು ಉದ್ಘಾಟನೆ ಹಂತಕ್ಕೆ ಬಂದು ತಲುಪಿವೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ಮತ್ತಷ್ಟು ಹೆಚ್ಚಳ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಇದರಿಂದ ವಾಹನ ಸವಾರರಿಗೆ ಅಷ್ಟೇ ಅಲ್ಲದೆ, ಹೆದ್ದಾರಿ ಅಕ್ಕಪಕ್ಕದ ಜನರಿಗೂ ಅನುಕೂಲ ಆದಂತಾಗಲಿದೆ. ಯಾಕಂದ್ರೆ ಭೂಮಿಗೆ ಚಿನ್ನದ ಬೆಲೆ ಇರಲಿದ್ದು, ಒಂದು ವೇಳೆ ಮಾರಾಟ ಮಾಡಿದ್ರೆ, ಕೋಟ್ಯಾಧಿಪತಿಗಳಾಗುವುದರಲ್ಲಿ ಅನುಮಾನವಿಲ್ಲ. ಅಷ್ಟರ ಮಟ್ಟಿಗೆ ಹೆದ್ದಾರಿ ಪಕ್ಕದಲ್ಲಿಗೆ ಭೂಮಿಗೆ ಡಿಮ್ಯಾಂಡ್ ಹೆಚ್ಚಾಗುತ್ತಲಿರುತ್ತದೆ. ಮತ್ತೊಂದೆಡೆ, ಉದ್ಯಮಿಗಳು ನಾ ಮುಂದು, ತಾಮುಂದು ಎಂದು ಹೂಡಿಕೆ ಮಾಡಲು ಸರದಿಯಲ್ಲಿರುತ್ತಾರೆ.












Click it and Unblock the Notifications