Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್‌ಡೇಟ್
ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ ಕನಸು ನನಸಾಗುವ ಸಾಧ್ಯತೆ ಹೆಚ್ಚಾಗಿದೆ. ಎರಡು ನಗರಗಳ ನಡುವಿನ ಮೆಟ್ರೋ ಯೋಜನೆ ಬಗ್ಗೆ ಹೊಸ ಅಪ್‌ಡೇಟ್ ಸಿಕ್ಕಿದ್ದು, 52.41 ಕಿ.ಮೀ. ಮಾರ್ಗದಲ್ಲಿ, 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ಮಾದಾವರ (BIEC) ನಿಲ್ದಾಣದಿಂದ ಪ್ರಾರಂಭವಾಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಿಸುವ ಗುರಿ ಹೊಂದಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭವಾಗಿಸಲಿದೆ.

19 ಎಲಿವೇಟೆಡ್ ನಿಲ್ದಾಣಗಳು ಪ್ರಮುಖ ಪ್ರದೇಶಗಳಿಗೆ ಸೇವೆ ಸಲ್ಲಿಸಲು ಮತ್ತು ತುಮಕೂರಿನೊಳಗೆ ತಡೆರಹಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ನಮ್ಮ ಮೆಟ್ರೋ ಮಾರ್ಗದ ಅಂದಾಜು ಉದ್ದ 52.41 ಕಿಮೀ ಪ್ರಯಾಣದ ಸಮಯ ಮತ್ತು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ರಸ್ತೆ ಸಾರಿಗೆ ಮೇಲೆ ಒತ್ತಡ ಕಡಿಮೆ
ತುಮಕೂರು ಮೆಟ್ರೋ ಯೋಜನೆಯು ಆರ್ಥಿಕ ಅಭಿವೃದ್ಧಿ ಮತ್ತು ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಭರವಸೆಯನ್ನು ಹೊಂದಿದೆ. ಸಮರ್ಥ ಮೆಟ್ರೋ ವ್ಯವಸ್ಥೆಯು ತುಮಕೂರು-ಬೆಂಗಳೂರು ನಡುವೆ ಹೂಡಿಕೆಯನ್ನು ಆಕರ್ಷಿಸಲು, ನಗರದ ವಿವಿಧ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಸುಧಾರಿಸಲು ಮತ್ತು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ತುಮಕೂರು ಮೆಟ್ರೊ ಯೋಜನೆಗೆ ಯೋಜನೆಗಳನ್ನು ಅಂತಿಮಗೊಳಿಸಲು ಮತ್ತು ಅಗತ್ಯ ಅನುಮೋದನೆಗಳನ್ನು ಪಡೆಯಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಒಮ್ಮೆ ಯೋಜನೆ ಕಾರ್ಯರೂಪಕ್ಕೆ ಬಂದರೆ ಬೆಂಗಳೂರಿಗೆ ಉಪನಗರವಾಗಿ ತುಮಕೂರು ಅಭಿವೃದ್ಧಿ ಹೊಂದಲಿದೆ.
ಬಜೆಟ್ ವೇಳೆ ಪ್ರಸ್ತಾವನೆ
ಗೃಹ ಸಚಿವ ಜಿ. ಪರಮೇಶ್ವರ ಅವರು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಯೋಜನೆಯನ್ನು ಅಭಿವೃದ್ಧಿಪಡಿಸುವ ವಿಚಾರವನ್ನು ಬಹಿರಂಗಪಡಿಸಿದ್ದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ ಅವರು, ನಗರದ ಮೇಲಿನ ಒತ್ತಡವನ್ನು ನಿವಾರಿಸಲು ಬೆಂಗಳೂರಿನ ಸಂವಹನ ವ್ಯವಸ್ಥೆಯನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದರು. ತುಮಕೂರಿಗೆ ಮೆಟ್ರೋ ವಿಸ್ತರಣೆಯು ಈ ಯೋಜನೆಯ ಭಾಗವಾಗಿದ್ದು, ಪ್ರಸ್ತುತ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದರು.
ಬಜೆಟ್‌ನಲ್ಲಿ ಕೂಡ ತುಮಕೂರು-ಬೆಂಗಳೂರು ಮೆಟ್ರೋ ಕಾಮಗಾರಿ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ಮಾಡುವ ಭರವಸೆ ನೀಡಲಾಗಿತ್ತು.
🔘 Tumkur Metro:
— Naveen (@maddyvoldy) March 28, 2024
19 elevated stations proposed on the Tumkur Metro line.
Starting from Madavara (BIEC) station to Tumkur Bus Stand
Line estimated to be 52.41km approximately#BMRCL #NammaMetro pic.twitter.com/4hDrR82WTl
19 ನಿಲ್ದಾಣಗಳು ಯಾವುವು?
1) ಮಾದಾವರ
2) ಮಾಕಳಿ
3) ದಾಸನಪುರ
4) ನೆಲಮಂಗಲ
5) ನೆಲಮಂಗಲ ಬಸ್ ನಿಲ್ದಾಣ
6) ನೆಲಮಂಗಲ ರಾ.ಹೆ. ಕೊನೆ
7) ಬೂದಿಹಾಳ
8) ಟಿ.ಬೇಗೂರು
9) ಕುಲುವನಹಳ್ಳಿ
10) ಸೋಂಪುರ ಕೈಗಾರಿಕಾ ಪ್ರದೇಶ
11) ಡಾಬಸ್‌ಪೇಟೆ
12) ನಲ್ಲಯ್ಯನಪಾಳ್ಯ
13) ಚಿಕ್ಕಹಳ್ಳಿ
14) ಹಿರೇಹಳ್ಳಿ
15) ಪಂಡಿತನಹಳ್ಳಿ
16) ಕ್ಯಾತ್ಸಂದ್ರ
17) ಬಟವಾಡಿ
18) ತುಮಕೂರು ವಿಶ್ವ ವಿದ್ಯಾನಿಲಯ
19) ತುಮಕೂರು ಬಸ್ ನಿಲ್ದಾಣ












Click it and Unblock the Notifications