ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಅಮೆರಿಕಾ ನೌಕರನ ಹೋಂಡಾ ಆಕ್ವೀವಾ ಮೇಲಿದೆ ಒಂದಲ್ಲ, ಎರಡಲ್ಲ 2,00,000 ರೂಪಾಯಿಗೂ ಅಧಿಕ ದಂಡ

ಬೆಂಗಳೂರು, ಜನವರಿ 29: ಸಾಮಾನ್ಯವಾಗಿ ದ್ವಿಚಕ್ರ ವಾಹನ ಸವಾರರು ಸಿಗ್ನಲ್ ಜಂಪ್‌, ಹೆಲ್ಮೆಟ್ ಧರಿಸದೇ ಸಂಚರಿಸಿದ ಕಾರಣಕ್ಕೆ ಸಾವಿರ ರೂಪಾಯಿ ಲೆಕ್ಕದಲ್ಲಿ ದಂಡ ಕಟ್ಟಿರುವ ಉದಾಹರಣೆಗಳಿವೆ. ಆದರೆ, ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ವ್ಯಕ್ತಿಯೋವರ್ನನಿಗೆ ರೂಪಾಯಿ 2 ಲಕ್ಷಕ್ಕೂ ಹೆಚ್ಚು ಮೊತ್ತದ ದಂಡ ಬಿದ್ದಿರುವ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.

KA04 KJ 9629 ನಂಬರಿನ ಬಿಳಿ ಬಣ್ಣದ ಹೋಂಡಾ ಅಕ್ಟೀವಾ ದ್ವಿಚಕ್ರ ವಾಹನದ ಮೇಲೆ ಒಟ್ಟು 2,13,000 ರೂಪಾಯಿ ದಂಡ ಬಿದ್ದಿದೆ. ಈ ವಾಹನದ ಮಾಲೀಕ ಮೊಹಮ್ಮದ್ ಮುಜಾಮಿಲ್ ಫೈಜಲ್ ಎಂದು ತಿಳಿದುಬಂದಿದೆ. ಈ ಪ್ರಕರಣ ಬೆಳಕಿಗೆ ಬಂದಿರುವ ರೀತಿಯೂ ಗಮನ ಸೆಳೆಯುವಂತಿದೆ.

Bengaluru Traffic Fine A Man Fined Over 2 13 Lakh for Traffic Violations Know Complete details

ಘಟನೆ ಬೆಳಕಿಗೆ ಬಂದಿದ್ದು ಹೇಗೆ?: ಭಾನುವಾರ ರಾತ್ರಿ ಮೊಹಮ್ಮದ್ ಮುಜಾಮಿಲ್ ಅವರು ಫ್ರೇಜರ್ ಟೌನ್‌ನಲ್ಲಿರುವ ಲೋಕಾ ಮೊಕಾ (Loca Moca) ಎಂಬ ಕೆಫೆಗೆ ಭೇಟಿ ನೀಡಿದ್ದರು. ಅಲ್ಲಿ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಮಹಿಳೆಯರ ಕಡೆಗೆ ಸಿಗರೇಟ್ ಹೊಗೆ ಬಿಡುತ್ತಾ, ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕೆಫೆ ಸಿಬ್ಬಂದಿ ಎಚ್ಚರಿಕೆ ನೀಡಿದಾಗ, ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದ್ದಾರೆ. ಅಲ್ಲದೇ, "ಹೊರಗೆ ಬಾ, ನಿನ್ನ ನೋಡಿಕೊಳ್ಳುತ್ತೇನೆ," ಎಂಬ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಘಟನೆ ಬಳಿಕ ಕೆಫೆ ಮಾಲಕಿ ನೇತ್ರಾ ಅವರು ಪುಲಿಕೇಶಿನಗರ ಪೊಲೀಸ್ ಠಾಣೆಗೆ ತೆರಳಿ, ಮೊಹಮ್ಮದ್ ಮುಜಾಮಿಲ್ ವಿರುದ್ಧ ಎನ್‌ಸಿಆರ್ (NCR) ದಾಖಲಿಸಿದ್ದಾರೆ. ಇದಕ್ಕೂ ಮುನ್ನ, ಕೆಫೆ ಮಾಲಕಿ ಆತನ ಹೋಂಡಾ ಅಕ್ಟೀವಾ ಮೇಲಿರುವ ಟ್ರಾಫಿಕ್ ದಂಡದ ವಿವರಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ, ಕೇವಲ ಸಿಗ್ನಲ್ ಜಂಪ್ ಪ್ರಕರಣಗಳಿಂದಲೇ 2,13,000 ರೂಪಾಯಿ ದಂಡ ಬಿದ್ದಿರುವುದು ಬೆಳಕಿಗೆ ಬಂದಿದೆ.

ಸಾರ್ವಜನಿಕರು ಹೇಳೋದೇನು?: ಇಷ್ಟೊಂದು ಭಾರೀ ದಂಡಕ್ಕೆ ಒಳಗಾದ ಮೊಹಮ್ಮದ್ ಮುಜಾಮಿಲ್ ಅವರು ಬೆಂಗಳೂರಿನ ಹಲಸೂರಿನಲ್ಲಿ ಇರುವ ಬ್ಯಾಂಕ್ ಆಫ್ ಅಮೆರಿಕಾ ಸಂಸ್ಥೆಯ ಶಾಖೆಯಲ್ಲಿ ಎಚ್‌ಆರ್ (HR) ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, "ಇಂತಹವರಿಗೆ ಹಣದ ಮದ ಹೆಚ್ಚಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಂಡು ಕಾನೂನು ಕ್ರಮ ಜರುಗಿಸಬೇಕು," ಎಂದು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+