Bengaluru Traffic ಸಮರ್ಥಿಸಿಕೊಂಡ ವ್ಯಕ್ತಿಯ ಪೋಸ್ಟ್ ವೈರಲ್! ನಿತ್ಯವೂ ಪ್ರಯಾಣಿಸುವಂತೆ ನೆಟ್ಟಿಗರ ಟಾಂಗ್
ಬೆಂಗಳೂರು: ಐಟಿ ಹಬ್ ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆಯು ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತದೆ. ಅಷ್ಟರ ಮಟ್ಟಿಗಿನ ಇಲ್ಲಿನ ಟ್ರಾಫಿಕ್‌ಗೆ ಜನ ಹೈರಾಣಾಗಿಬಿಟ್ಟಿದ್ದಾರೆ. ಅಂಥದರಲ್ಲಿ ಇಲ್ಲೊಬ್ಬ ವ್ಯಕ್ತಿಯ ನಗರದ ಟ್ರಾಫಿಕ್ ಅನ್ನು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಅಷ್ಟೇನು ಸಮಸ್ಯೆ ಇಲ್ಲವೆಂಬಂತೆ ಹೇಳಿಕೊಂಡಿದ್ದಾರೆ. ಅದಕ್ಕೆ ಜನರು ಕೊಟ್ಟ ಉತ್ತರಗಳು ಮಾತ್ರ ವಾಸ್ತವದಲ್ಲಿ ಹೌದೆನ್ನುವಂತಿವೆ. ವೈರಲ್ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಬೆಂಗಳೂರಿನ ನಿವಾಸಿಯೊಬ್ಬರಾದ ನಿಹಾಲ್ ಶೆಟ್ಟಿ ಎನ್ನುವವರು ನಗರದ ಸಂಚಾರ ಪರಿಸ್ಥಿತಿಯನ್ನು ಸಮರ್ಥಿಸಿಕೊಂಡು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಇದು ಮತ್ತೊಂದು ರೀತಿಯಲ್ಲಿ ಟ್ರಾಫಿಕ್ ಸಮಸ್ಯೆ ಮೇಲೆ ಬೆಳಕು ಚೆಲ್ಲಿದೆ. 'ಜಗತ್ತಿನ ಬೇರೆ ಬೇರೆ ನಗರಗಳಲ್ಲಿಯು ಪೀಕ್ ಹವರ್‌ನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಂಡು ಬರುತ್ತಿದೆ. ಆದರೂ ಬೇರೆ ನಗರಗಳಿಗಿಂತ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕುರಿತು ಹೆಚ್ಚು ಟೀಕಿಸಲಾಗುತ್ತದೆ'. ಉದ್ಯಾನ ನಗರಿ ಟ್ರಾಫಿಕ್ ನಗರಿ ಎಂಬಂತೆ ಟೀಕಿಸಲಾಗುತ್ತದೆ ಎಂದು ಅವರು ಬೇಸರದ ರೀತಿಯಲ್ಲಿ ಅವರು ತಿಳಿಸಿದ್ದಾರೆ.

ಮಾತ್ರವಲ್ಲದೇ 'ನಾನು ಬೆಳಗಿನ ಜಾವದ ವಿಮಾನ ಪ್ರಯಾಣಕ್ಕಾಗಿ ದೇವನಹಳ್ಳಿಯ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣನಿಲ್ದಾಣಕ್ಕೆ ತೆರಳಬೇಕಿತ್ತು. ನಿಹಾಲ್ ಶೆಟ್ಟಿ ಅವರು ಬೆಳಗ್ಗೆ 8.10ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ನಾನು ಬೆಳಗ್ಗೆ 6.10ಕ್ಕೆ ಮನೆಯಿಂದ ಹೊರಟೆ. ಎಲ್ಲಿಯೂ ನನಗೆ ಟ್ರಾಫಿಕ್ ಸಮಸ್ಯೆ ಆಗಲಿಲ್ಲ. ತಾವು ಯಾವುದೇ ತೊಂದರೆಯಿಲ್ಲದೆ ವಿಮಾನ ನಿಲ್ದಾಣವನ್ನು ತಲುಪಿದ್ದಾಗಿ ಹೇಳಿಕೊಂಡಿದ್ದಾರೆ. ವಿಮಾನ ಹತ್ತುವ ಮೊದಲು ಉಪಹಾರ ಸೇವಿಸಲು ಹೆಚ್ಚು ಸಮಯ ಸಹ ಸಿಕ್ಕಿತ್ತು' ಎಂದು ಅವರು ತಮ್ಮ ಪೊಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಇತರ ನಗರಗಳಲ್ಲಿ ಟ್ರಾಫಿಕ್ ಇದ್ದರೂ ಬೆಂಗಳೂರಿನ ಕುರಿತು ಅನೇಕರು ಅಸಮಾಧಾನ ಹೊರ ಹಾಕುವವರಿಗೆ ಇದೊಂದು 'ಪ್ರಮುಖ ಉದಾಹರಣೆ' ಎಂದು ಅವರು ಟ್ರಾಫಿಕ್ ಕುರಿತು ಸಮರ್ಥನೀಯ ಪೋಸ್ಟ್ ಹಂಚಿಕೊಂಡಿದ್ದಾರೆ. ಅದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನು ಡೈಲಿ ಮಾಡಿ ಗೊತ್ತಾಗುತ್ತೆ!: ನೆಟ್ಟಿಗರು ಹೇಳಿದ್ದೇನು?
ಸಾಮಾಜಿಕ ಜಾಲತಾಣದ ಬಳಕೆದಾರರು ಶೆಟ್ಟಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಒಬ್ಬರು "ಬೆಂಗಳೂರಲ್ಲಿ ಬೆಳಗ್ಗೆ 6 ಗಂಟೆಯಲ್ಲಿ ದಟ್ಟಣೆ ಇರುವುದಿಲ್ಲ. ಅದನ್ನು ಗರಿಷ್ಠ ದಟ್ಟಣೆಯ ಸಮಯ ಎನ್ನಲಾಗಲ್ಲ' ಎಂದು ತಿಳಿಸಿದ್ದಾರೆ. ಎರಡನೇಯ ಬಳಕೆದಾರರು "ವಾರದ ದಿನವೊಂದರಲ್ಲಿ ರಾತ್ರಿ 8.10ರ ವಿಮಾನವನ್ನು ಹಿಡಿಯಲು ಪ್ರಯತ್ನಿಸಿ ನೋಡಿ ಆಗ ಬೆಂಗಳೂರು ಟ್ರಾಫಿಕ್ ಅಸಲಿ ಮುಖ ಗೊತ್ತಾಗುತ್ತದೆ.' ಎಂದಿದ್ದಾರೆ.
ಇನ್ನೂ ಮೂರನೇಯವರು "ನಿಮ್ಮ ಈ ಮಾತಿಗೆ ನಿಮ್ಮೊಂದಿಗೆ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ, ಎಂದು ತಿಳಿಸಿದರೆ, ನಾಲ್ಕನೇಯವರು "ಇವತ್ತು ಬೆಳಗ್ಗೆ ವಿಮಾನ ಹಡಿದಂತೆ ದಯವಿಟ್ಟು ಇದನ್ನು ಪ್ರತಿದಿನ ಮಾಡಿ ನೋಡಿ. ನಿತ್ಯವು ಏರ್ ಪೋರ್ಟ್‌ಗೆ ಸಂಚರಿಸಿ ನೋಡಿ, ಆಗ ನಿಮಗೆ ವಿಷಯ ಅರ್ಥವಾಗುತ್ತದೆ," ಎಂದು ಪ್ರತಿಕ್ರಿಯಿಸಿದ್ದಾರೆ.
Bengaluru is unnecessarily infamous for peak hour traffic.I left home at 6:10AM for a 8:10AM flight and I made it the airport comfortably in time and also got time for breakfast. 35 kms ftw. I think peak hour traffic is a problem in every city in India and Bengaluru is just the poster child for everyone who wants to vent.
— Nihal Shetty (@Shetty_nhl) October 10, 2026
ಈ ಸಮಯದಲ್ಲಿ ಹೆಚ್ಚು ಟ್ರಾಫಿಕ್
ನೆಟ್ಟಿಗರು ಹೇಳುವಂತೆ ನಗರದಲ್ಲಿ ಬೆಳಗ್ಗೆ 7ಗಂಟೆ ನಂತರ ಸುಮಾರು 11ಗಂಟೆವರೆಗೂ ಹೆಚ್ಚಿನ ದಟ್ಟಣೆ ಕಾಣುತ್ತಿದ್ದೇವೆ. ಅದೇ ಸಂಜೆ 3 ಅಥವಾ 4ಗಂಟೆ ನಂತರ ರಾತ್ರಿ 9ರವರೆಗೂ ನಾವು ಟ್ರಾಫಿಕ್ ಸಮಸ್ಯೆಯನ್ನು ಹೆಚ್ಚಾಗಿ ಕಾಣುತ್ತೇವೆ. ಟಿನ್ ಫ್ಯಾಕ್ಟರಿ, ಹೆಬ್ಬಾಳ ಜಂಕ್ಷನ್, ತುಮಕೂರು ರಸ್ತೆ, ಮೈಸೂರು ರಸ್ತೆ, ನಗರದ ಒಳಗಿನ ಪ್ರಮುಖ ರಸ್ತೆಗಳಲ್ಲಿ ಸದಾ ದಟ್ಟಣೆ ಕಂಡು ಬರುತ್ತದೆ. ಕೆಲವೊಮ್ಮೆ ಒಂದೆರಡು ಕಿಲೋ ಮೀಟರ್ ಸಂಚಾರಕ್ಕೂ ಗಂಟೆಗಟ್ಟಲೇ ಸಮಯ ಬೇಕಾಗುತ್ತದೆ.


Click it and Unblock the Notifications
