TTD Train: ಉತ್ತರ ಕರ್ನಾಟಕದಿಂದ ತಿರುಪತಿಗೆ 4 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ, ಮಾರ್ಗ, ವೇಳಾಪಟ್ಟಿ

ಬೆಂಗಳೂರು: ದಸರಾ, ದುರ್ಗಾಪೂಜೆ ಹಿನ್ನೆಯೆಲ್ಲಿ ಸಂಚರಿಸುವ ಹೆಚ್ಚುವರಿ ಪ್ರಯಾಣಿಕರ ಅನುಕೂಲ ಹಾಗೂ ದಟ್ಟಣೆ ನಿಯಂತ್ರಿಸಲು ನೈಋತ್ಯ ರೈಲ್ವೆಯು (SWR) ತಿರುಪತಿಗೆ ನಾಲ್ಕು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆ ಮಾಡುತ್ತಿದೆ. ಈ ಮೂಲಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಈ ರೈಲುಗಳು ಅಕ್ಟೋಬರ್ 4ರಿಂದಲೇ ಸೇವೆ ನೀಡಲಿವೆ. ಎಲ್ಲಿಂದ, ಯಾವ ಮಾಗದಲ್ಲಿ ಕಾರ್ಯಾಚರಣೆ, ನಿಲುಗಡೆ ನಿಲ್ದಾಣ, ಸಮಯ, ವೇಳಾಪಟ್ಟಿ ಸಂಪೂರ್ಣ ಮಾಹಿತಿ ಮುಂದಿದೆ.

ಉತ್ತರ ಕರ್ನಾಟಕ ವಿಜಯಪುರದಿಂದ-ತಿರುಪತಿ ವಿಶೇಷ ವಾರಾಂತ್ಯದ ಎಕ್ಸ್‌ಪ್ರೆಸ್ ರೈಲುಗಳನ್ನು ಬಿಡುಗಡೆ ಮಾಡಲಾಗಿದೆ. ಈ ರೈಲುಗಳ ಒಟ್ಟು 04 ಟ್ರಿಪ್‌ ಸೇವೆ ನೀಡಲಿವೆ ಎಂದು ರೈಲ್ವೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Tirupati-Vijayapura

ವಿಜಯಪುರ-ತಿರುಪತಿ-ವಿಜಯಪುರ ರೈಲು ವೇಳಾಪಟ್ಟಿ

* ತಿರುಪತಿ-ವಿಜಯಪುರ ವಾರಾಂತ್ಯದ ವಿಶೇಷ ರೈಲು (07419) ಶನಿವಾರ 2026 ಅಕ್ಟೋಬರ್ 4 ರಿಂದ ಅಕ್ಟೋಬರ್ 25 ಪ್ರತೀ ಭಾನುವಾರ ಬೆಳಗ್ಗೆ 08:15 ಕ್ಕೆ ತಿರುಪತಿಯಿಂದ ಹೊರಟು ಅದೇ ದಿನ ರಾತ್ರಿ 10.25ಕ್ಕೆ (22:25) ಕ್ಕೆ ವಿಜಯಪುರ ನಿಲ್ದಾಣ ತಲುಪುತ್ತದೆ.

* ಮರಳಿ ಅದೇ ದಿಕ್ಕಿನಲ್ಲಿ ವಿಜಯಪುರ-ತಿರುಪತಿ ವಾರಾಂತ್ಯದ ವಿಶೇಷ ರೈಲು (07420) ಅಕ್ಟೋಬರ್ 4 ರಿಂದ 25 ರವರೆಗೆ ಪ್ರತೀ ಭಾನುವಾರ ಸೇವೆ ಒದಗಿಸಲಿದೆ. ವಿಜಯಪುರದಿಂದ ರಾತ್ರಿ 11.35ಕ್ಕೆ (23:35) ಸಂಚಾರ ಆರಂಭಿಸಿ ಮರುದಿನ ಮಧ್ಯಾಹ್ನ 14:15 ಕ್ಕೆ ತಿರುಪತಿ ನಿಲ್ದಾಣಕ್ಕೆ ಬಂದು ಸೇರಲಿದೆ.

ಸಂಚಾರ ಮಾರ್ಗ/ ನಿಲುಗಡೆ ನಿಲ್ದಾಣಗಳು ಯಾವುವು?

ನಾಲ್ಕು ಟ್ರಿಪ್ ಕಾರ್ಯಾಚರಣೆ ಮಾಡುವ ಈ ವಿಶೇಷ ರೈಲುಗಳು ಎರಡೂ ಬದಿ ಸಂಚಾರ ವೇಳೆ ರೇಣುಗುಂಟಾ, ಕೋಡೂರು, ರಾಜಂಪೇಟ್, ಕಡಪ, ಯರ್ರಗುಂಟ್ಲಾ, ತಡಿಪತ್ರಿ, ಗೂಟಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹೊಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

11 ಬೋಗಿಗಳ ರೈಲು

ಎಸಿ, ನಾನ್ ಎಸಿ, ಸ್ಲೀಪರ್, ಜನರಲ್ ಸೇರಿ ತಿರುಪತಿ-ವಿಜಯಪುರ-ತಿರುಪತಿ ವಿಶೇಷ ರೈಲುಗಳು ಒಟ್ಟು 11 ಕೋಚ್‌ಗಳನ್ನು ಒಳಗೊಂಡಿವೆ. ಪ್ರಸ್ತುತ ರೈಲಿನ ಸಮಯ ಹಾಗೂ ಹೆಚ್ಚಿನ ವಿವರಗಳಿಗಾಗಿ ಪ್ರಯಾಣಿಕರು ಅಧಿಕೃತ ವೆಬ್‌‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ ಐಆರ್ ಸಿಟಿಸಿ ಆಪ್ ಅಥವಾ 139 ಸಂಖ್ಯೆಗೆ ಕರೆ ಮಾಡುವಂತೆ ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿ: ಗಾಂಧಿ ಜಯಂತಿ, ಸ್ವಚ್ಛತಾ ಅಭಿಯಾನ

ಹುಬ್ಬಳ್ಳಿ ರೈಲ್ವೆ ವಿಭಾಗದ ವತಿಯಿಂದ ವಿಭಾಗೀಯ ರೈಲ್ವೆ ಕಚೇರಿ ಆವರಣದಲ್ಲಿ (ಹುಬ್ಬಳ್ಳಿ) ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಇಂದು ಶುಕ್ರವಾರ ಆಚರಿಸಲಾಯಿತು. ಇದೇ ವೇಳೆ ಸ್ವಚ್ಛ ಭಾರತ ದಿವಸ ಮತ್ತು ಸ್ವಚ್ಛತಾ ಹಿ ಸೇವಾ-2026 ಅಭಿಯಾನದ ಸಮಾರೋಪ ಸಮಾರಂಭವು ಜರುಗಿತು.

Free Travel: ಮಹಿಳೆಯರಿಗೆ ಭರ್ಜರಿ ಗುಡ್‌ನ್ಯೂಸ್; ಇನ್ಮುಂದೆ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲೂ ಉಚಿತ ಪ್ರಯಾಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೇಲಾ ಮೀನಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್‌ಎಂ) ಮಾತನಾಡಿ, ಮಹಾತ್ಮ ಗಾಂಧೀಜಿಯವರ ಆದರ್ಶಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು. ಸ್ವಚ್ಛತೆ ಕೇವಲ ಆಚರಣೆಗೆ ಸೀಮಿತವಾಗದೆ, ದೈನಂದಿನ ಜೀವನದ ಅಭ್ಯಾಸವಾಗಬೇಕು ಎಂದು ಹೇಳಿದರು.

ಸ್ವಚ್ಛತಾ ಗುರಿ ಘಟಕ (Cleanliness Target Unit-CTU) ಅನ್ವಯ ಸ್ವಚ್ಛತೆ ಶ್ರಮದಾನದಲ್ಲಿ ಉತ್ತಮ ಸಾಧನೆ ತೋರಿದ ಶಾಖೆಗಳಿಗೆ ಪ್ರಶಸ್ತಿ ನೀಡಲಾಗಿತ್ತು. ಅದೇ ರೀತಿ ಚಿತ್ರಕಲೆ, ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ , ನಾಟ್ಯಾಂಜಲಿ ನೃತ್ಯ ಕೇಂದ್ರ ಹಾಗೂ ಫಾತಿಮಾ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮೊದಲು DRM ಕಚೇರಿ ಆವರಣದಲ್ಲಿ ಸಾಮೂಹಿಕ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+