Free Travel: ಮಹಿಳೆಯರಿಗೆ ಭರ್ಜರಿ ಗುಡ್‌ನ್ಯೂಸ್; ಇನ್ಮುಂದೆ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲೂ ಉಚಿತ ಪ್ರಯಾಣ
ಚೆನ್ನೈ; ಕರ್ನಾಟಕದಲ್ಲಿ 'ಶಕ್ತಿ' ಯೋಜನೆಯಡಿ ಜಾರಿಯಲ್ಲಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯವು ತಮಿಳುನಾಡಿನಲ್ಲಿಯು ಜಾರಿಯಲ್ಲಿತ್ತು. ಆದರೀಗ ಆ ಉಚಿತ ಬಸ್ ಸಂಚಾರ ಸೌಲಭ್ಯವನ್ನು ತಮಿಳುನಾಡು ಸರ್ಕಾರ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಿಗೂ ವಿಸ್ತರಣೆ ಮಾಡಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿ.ವಿಜಯ್ ಜೋಸೆಫ್ ಅವರು 'ವೆಟ್ರಿ ಪಯಣಂ' ಯೋಜನೆ ವಿಸ್ತರಿಸಿದ್ದಾಗಿ ಶುಕ್ರವಾರ ಘೋಷಿಸಿದರು. ಈ ಮೂಲಕ ರಾಜ್ಯದ 84.32 ಲಕ್ಷ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ರಾಜ್ಯದಲ್ಲಿ ಮಹಿಳೆಯರು 'ವೆಟ್ರಿ ಪಯಣಂ' ಯೋಜನೆಯಡಿ ಉಚಿತವಾಗಿ ಸ್ಥಳೀಯ ಸಾರಿಗೆ ಬಸ್‌ಗಳಲ್ಲಿ ಸಂಚಾರ ಮಾಡುತ್ತಿದ್ದರು. ಇದೀಗ ಆ ಸೌಲಭ್ಯವನ್ನು ಯಾವುದೇ ಷರತ್ತು ಇಲ್ಲದೇ ಡಿಲಕ್ಸ್, ಎಕ್ಸ್‌ಪ್ರೆಸ್, ಮೊಫುಸಿಲ್, ಘಾಟ್ ರಸ್ತೆಗಳ ಬಸ್‌ಗಳಿಗೂ ವಿಸ್ತರಣೆ ಮಾಡಿದ್ದಾಗಿ ಸಿಎಂ ವಿಜಯ್ ಪ್ರಕಟಿಸಿದರು. ಅಲ್ಲದೇ ಸ್ವತಃ ವಿಜಯ್ ಅವರು ಬಸ್‌ನಲ್ಲಿ ಪ್ರಯಾಣಿಸಿ, ಮಹಿಳೆಯರಿಗೆ ಟಿಕೆಟ್ ವಿತರಿಸಿ ಚಾಲನೆ ನೀಡಿದರು. ಪ್ರಯಾಣಿಕರೊಂದಿಗೆ ಸಂವಾದ ನಡೆಸಿ ಯೋಜನೆ ಕುರಿತು ಅಭಿಪ್ರಾಯ ಪಡೆದರು.

ಷರತ್ತು ಇಲ್ಲದೇ ಯೋಜನೆ ವಿಸ್ತರಣೆ!
ಯಾವುದೇ ಷರತ್ತು ಇಲ್ಲದೇ ಡಿಲಕ್ಸ್‌ನಂತಹ ಬಸ್‌ಗಳಿಗೂ ಉಚಿತ ಬಸ್ ಪ್ರಯಾಣ ವಿಸ್ತರಣೆ ಆಗಿದೆ. ತಮಿಳನಾಡು ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ವಾರ್ಷಿಕ ಆದಾಯ ಮಿತಿ ಇಲ್ಲ. ದಿನಕ್ಕೆ ಸಿಮೀತವಾಗಿ ಪ್ರಯಾಣಿಸುವ ನಿಯಮವಿಲ್ಲ. 84 ಮಹಿಳಾ ಪ್ರಯಾಣಿಕರಿಗೆ 12,692 ಸರ್ಕಾರಿ ಬಸ್‌ಗಳು ಸೇವೆ ನೀಡುವಂತೆ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಈ ಯೋಜನೆಯಿಂದ ರಾಜ್ಯ ಸರ್ಕಾರ ಭೊಕ್ಕಸಕ್ಕೆ ವಾರ್ಷಿಕ 6000 ರೂ. ಕೋಟಿ ತಗುಲಲಿದೆ. ಟಿಕೆಟ್ ವಿತರಣಾ ಇಟಿಎಂ ಯಂತ್ರಗಳಿಗೆ ವಿಶೇಷ ಸಾಫ್ಟವೇರ್ ಅಳವಡಿಸಲಾಗಿದೆ. ಇದರಿಂದ ಟಿಕೆಟ್ ವಿತರಣೆ ಮಾಹಿತಿ ಸರ್ಕಾರಕ್ಕೆ ಸಿಗಲಿದೆ.
ಈವರೆಗೆ ಮಹಿಳೆಯರು ಸ್ಥಳೀಯವಾಗಿ ಸಂಚರಿಸುವ ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದರು. ಇದೀಗ ಗ್ರಾಮೀಣ ಭಾಗದಿಂದ ಸುಮಾರು 40-50ಗಿಂತಲೂ ದೂರವಿರುವ ಪ್ರದೇಶಗಳಲ್ಲಿ ಆರಾಮದಾಯಕ ಅನುಭವ ನೀಡುವ ಬಸ್‌ಗಳಲ್ಲೂ ಸಂಚಾರ ಮಾಡಬಹುದಾಗಿದೆ. ಮಹಿಳೆಯರಿಗೆ ದೈನಂದಿನ ಸಾರಿಗೆ ಖರ್ಚಿನ ಚಿಂತೆಯನ್ನು ಸಿಎಂ ವಿಜಯ್ ನೇತೃತ್ವದ ಸರ್ಕಾರದ ದೂರ ಮಾಡಿದೆ.
ತಮಿಳುನಾಡಲ್ಲಿ ಒಟ್ಟು 7 ಸಾರಿಗೆ ಸಂಸ್ಥೆಗಳು ಸೇವೆ ಮಾಡುತ್ತಿವೆ. ಈ ಸಂಸ್ಥೆಗಳ ಎಲ್ಲ ಬಸ್‌ಗಳ ಪೈಕಿ 12,600ಕ್ಕೂ ಅಧಿಕ ಬಸ್‌ಗಳು 'ವೆಟ್ರಿ ಪಯಣಂ' ಯೋಜನೆಯಡಿ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ನೀಡಲಿವೆ. ಪುರುಷರಿಗೆ ಯಾವುದೇ ಉಚಿತ ಪ್ರಯಾಣ ಇಲ್ಲ. ಅವರು ತಮ್ಮ ಟಿಕೆಟ್‌ಗಳನ್ನು ಹಣ ನೀಡಿ ಪಡೆಯಬೇಕಿದೆ.
ಬಂಗಾರದ ಉಂಗುರ ನೀಡಿದ್ದ ವಿಜಯ್, ಯೋಜನೆಗೆ ಚಾಲನೆ
ತಮಿಳುನಾಡಲ್ಲಿ ಜನರಿಗೆ ಹೊಸ ಹೊಸ ಯೋಜನೆಗಳನ್ನು ತಲುಪಿಸುತ್ತಿರುವ ಸಿಎಂ ವಿಜಯ್ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ 'ಸೋದರಮಾವನ ಬಂಗಾರದ ಉಂಗುರು ಯೋಜನೆ' ಜಾರಿ ಮಾಡಿದ್ದರು. ಘೋಷಣೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ 1 ಗ್ರಾಂ ಬಂಗಾರದ ಉಂಗುರು ನೀಡುವ ಯೋಜನೆ ಇದಾಗಿದೆ.
ಇತ್ತೀಚೆಗೆ ಸಿಎಂ ವಿಜಯ್, ಮಧುರೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ 25ನವಜಾತ ಶಿಶುಗಳಿಗೆ ಒಂದು ಗ್ರಾಂ ಬಂಗಾರದ ಉಂಗುರು ನೀಡುವ ಮೂಲಕ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದರು. ಅದರ ಬೆನ್ನಲ್ಲೆ 'ವೆಟ್ರಿ ಪಯಣಂ' ಯೋಜನೆ ವಿಸ್ತರಣೆ ಮಾಡಿದ್ದಾರೆ.


Click it and Unblock the Notifications
