Bengaluru Traffic Advisory: ಆ.6ರಿಂದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಸಂಚಾರ ಬಂದ್, ಬೇರೆ ರಸ್ತೆಗಳು ಇಲ್ಲಿವೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ-44 ಮೂಲಕ ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳಿಂದ ಬೆಂಗಳೂರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಆಗಮಿಸುತ್ತಿವೆ. ಈ ದಟ್ಟಣೆ ಪರಿಹಾರ್ಥವಾಗಿ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಸಂಚಾರ ಸಲಹೆ ನೀಡಿದೆ.

ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ ಸಂಚಾರ ದಟ್ಟಣೆ ಹೆಚ್ಚಾಗಿ, ಸಾರ್ವಜನಿಕ ವಾಹನಗಳ ಮತ್ತು ಅಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ತುರ್ತು ವಾಹನಗಳಿಗೆ ಅನುಕೂಲವಾಗುವಂತೆ ಸಂಚಾರದ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸಲು ಆಗಸ್ಟ್ 6ರಂದು ಪ್ರಾಯೋಗಿಕವಾಗಿ ತಾತ್ಕಾಲಿಕ ಸಂಚಾರ ಬದಲಾವಣೆ ಮಾಡಲಾಗಿದೆ.

Bengaluru Traffic Advisory

ವಾಹನ ಸವಾರರೇ ಗಮನಿಸಿ

ಸರ್ಜಾಪುರ, ಮಾರತ್ತಹಳ್ಳಿ, ಹೊಸೂರು ರಸ್ತೆ, ಎಸ್‌ಪಿ ರಸ್ತೆ, ಎಂ.ಪಿ.ಎಸ್. ಜಂಕ್ಷನ್, ಕೇಂದ್ರೀಯ ಸದನ ಮಾರ್ಗದಲ್ಲಿ ನಿತ್ಯ ಒಡಾಡುವ ಬೈಕ್, ಕಾರು ಹಾಗೂ ಇನ್ನಿತರ ವಾಹನ ಸವಾರರು ಗಮನಿಸಿ ಈ ಮಾರ್ಗಗಳಲ್ಲಿ ಸಂಚರಿಸಬೇಕು.

ಆಗಸ್ಟ್ 6ರಂದು ಗುರುವಾರದಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 10.30 ಗಂಟೆಯವರೆಗೆ ಎಸ್.ಪಿ. ರಸ್ತೆ (ಸರ್ಜಾಪುರ ರಸ್ತೆ), ವಾಟರ್ ಟ್ಯಾಂಕ್ ಜಂಕ್ಷನ್ ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ನೀಡಲಾಗಿದೆ.

ಬೆಂಗಳೂರು ಸಂಚಾರ ನಿರ್ಬಂಧ

ಎಸ್.ಪಿ. ರಸ್ತೆ (ಸರ್ಜಾಪುರ ರಸ್ತೆ) ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಬರುವ ಎಲ್ಲಾ ವಾಹನಗಳ ಸಂಚಾರವನ್ನು ಎಸ್.ಪಿ. ರಸ್ತೆ (ಸರ್ಜಾಪುರ ರಸ್ತೆ) ಜಂಕ್ಷನ್‌ನಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗುತ್ತದೆ.

100 ಅಡಿ ರಸ್ತೆಯಿಂದ ವಾಟರ್ ಟ್ಯಾಂಕ್ ಜಂಕ್ಷನ್ ಮೂಲಕ ಅಯ್ಯಪ್ಪ ಜಂಕ್ಷನ್‌ಗೆ ಬಂದು ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ಅಯ್ಯಪ್ಪ ಜಂಕ್ಷನ್‌ನಲ್ಲಿ ನಿಷೇಧಿಸಲಾಗಿದೆ.

ಸಂಚಾರಕ್ಕೆ ಪರ್ಯಾಯ ಮಾರ್ಗಗಳು

ಎಸ್.ಪಿ. ರಸ್ತೆ (ಸರ್ಜಾಪುರ ರಸ್ತೆ) ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಹಾಗೂ ವಾಟರ್ ಟ್ಯಾಂಕ್ ಜಂಕ್ಷನ್ ಕಡೆಯಿಂದ ಅಯ್ಯಪ್ಪ ಜಂಕ್ಷನ್ ಮೂಲಕ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಈ ಕೆಳಕಂಡ ಪರ್ಯಾಯ ಮಾರ್ಗ ಬಳಸಬಹುದು.

ಎಸ್.ಪಿ. ರಸ್ತೆ (ಸರ್ಜಾಪುರ ರಸ್ತೆ) ಜಂಕ್ಷನ್ ಎಡ ತಿರುವು ವಾಟರ್ ಟ್ಯಾಂಕ್ ಜಂಕ್ಷನ್, ಕೃಪಾನಿಧಿ ಜಂಕ್ಷನ್ ಕಾಲೇಜು ಜಂಕ್ಷನ್ ಮೂಲಕ ಬಲ ತಿರುವು ಪಡೆದು ಮಡಿವಾಳ ಮಾರುಕಟ್ಟೆ ರಸ್ತೆ, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಎಡ ತಿರುವು ಮೂಲಕ ಹೊಸೂರು ಮುಖ್ಯರಸ್ತೆ ಮೂಲಕ ಸಂಚರಿಸಬಹುದು.

ಸಾರ್ವಜನಿಕರು ಮೇಲ್ಕಂಡಂತೆ ಪ್ರಾಯೋಗಿಕವಾಗಿ ಮಾಡಿರುವ ತಾತ್ಕಾಲಿಕ ಸಂಚಾರ ಮಾರ್ಪಾಡಿಗೆ ಸಹಕರಿಸಿ, ಸಂಚಾರ ನಿಯಮಗಳನ್ನು ಪಾಲಿಸುವ ಮಡಿವಾಳ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+