Independence Day: ಬೆಂಗಳೂರು ವಾಹನ ಸವಾರರ ಗಮನಕ್ಕೆ, ಆ.15ರಂದು ಈ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಶನಿವಾರ 'ಫ್ರೀಡಂ ಹಬ್ಬ' ಹಾಗೂ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಜರುಗಲಿದೆ. ಈ ಸಂಬಂಧ ಮೈದಾನ ಸುತ್ತಮುತ್ತ ಪಾರ್ಕಿಂಗ್, ಸಂಚಾರ ಸಂಬಂಧಿಸಿದಂತೆ ಒಂದಷ್ಟು ಬದಲಾವಣೆ ಮಾಡಲಾಗಿದೆ. ವಿಧಾನಸೌಧ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 'ಫ್ರೀಡಂ ಹಬ್ಬ' ನಡೆಯಲಿದ್ದು, ಈ ಸಂಬಂಧ ವಾಹನ ಸವಾರರಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 15 ರಂದು ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ವಿಧಾನಸೌದ ಮೆಟ್ಟಿಲುಗಳ ಮುಂಭಾಗದಲ್ಲಿ "ಫ್ರೀಡಂ ಹಬ್ಬ" ಎಂಬ ಕಾರ್ಯಕ್ರಮ ಮದ್ಯಾಹ್ನ 12:00 ರಿಂದ ರಾತ್ರಿ 10 ಗಂಟೆಯವರೆಗೆ ಆಯೋಜಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

ವಾಹನಗಳಿಗೆ ಈ ರಸ್ತೆ ಸಂಚಾರ ಬಂದ್
* ಡಾ.ಬಿ.ಆರ್. ಅಂಬೇಡ್ಕರ ರಸ್ತೆಯ ಮೂಲಕ ಕೆ.ಆರ್.ಸರ್ಕಲ್ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
* ಶೇಷಾದ್ರಿ ರಸ್ತೆಯ ಕೆ.ಆರ್.ಸರ್ಕಲ್ ದಿಂದ ಅಂಬೇಡ್ಕರ ರಸ್ತೆಯ ಮೂಲಕ ಶಿವಾಜಿನಗರ / ವಸಂತನಗರ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ಮಾಡುವಂತಿಲ್ಲ.
ಪರ್ಯಾಯ ಮಾರ್ಗಗಳು ಯಾವುವು?
* ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್.ಸರ್ಕಲ್ ಕಡೆಗೆ ಸಂಚರಿಸುವ ವಾಹನಗಳು, ಬಾಳೆಕುಂದ್ರಿ ಜಂಕ್ಷನ್ ದಿಂದ ಕನ್ನಿಂಗಹ್ಯಾಂ ರಸ್ತೆಯ ಮೂಲಕ ಚಂದ್ರಿಕಾ ಎಡತಿರುವು ಪಡೆದು ಬಸವೇಶ್ವರ ಜಂಕ್ಷನ್ - ಪ್ಯಾಲೇಸ್ ರಸ್ತೆಯ ಮುಖಾಂತರ ಕೆ.ಆರ್.ಸರ್ಕಲ್ ನಿಂದ ಸಾಗಬೇಕು.
* ಬಾಳೆಕುಂದ್ರಿ ಜಂಕ್ಷನ್‌ದಿಂದ ಸಿಟಿಓ, ಕ್ಲೀನ್ ಜಂಕ್ಷನ್, ಸಿದ್ದಲಿಂಗಯ್ಯ ಜಂಕ್ಷನ್. ಆರ್.ಆರ್.ಎಂ.ಆರ್. ಕಾರ್ಪೋರೇಷನ್ ಸರ್ಕಲ್ ಕಡೆಗೆ ಸಾಗಬಹುದು.
* ಬಿಆರ್ ವಿ - ಅನಿಲ್ ಕುಂಬ್ಳೆ ಬಲ ತಿರುವು ಪಡೆದು ಕ್ಲೀನ್ಸ್ ಜಂಕ್ಷನ್, ಸಿದ್ದಲಿಂಗಯ್ಯ. ಆರ್.ಆರ್.ಎಂ.ಆರ್. ಕಾರ್ಪೋರೇಷನ್ ಸರ್ಕಲ್ ಮೂಲಕ ಮುಂದೆ ಹೋಗಬಹುದು.
* ಬಿ.ಆರ್.ವಿ ಕಡೆಯಿಂದ ಬರುವ ವಾಹನಗಳು ರಾಜಭವನ ರಸ್ತೆಯ ಮೂಲಕ ಚಾಲುಕ್ಯ ಸರ್ಕಲ್ ನಿಂದ ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಮುಖಾಂತರ ಕೆ.ಆರ್.ಸರ್ಕಲ್ ಕಡೆಗೆ ಹೋಗಲುವಂತೆ ವ್ಯವಸ್ಥೆ ಮಾಡಲಾಗಿದೆ.
* ಇನ್ನೂ ಶೇಷಾದ್ರಿ ರಸ್ತೆಯ ಕೆ.ಆರ್.ಸರ್ಕಲ್ ದಿಂದ ಅಂಬೇಡ್ಕರ ರಸ್ತೆಯ ಮೂಲಕ ಶಿವಾಜಿನಗರ / ವಸಂತನಗರ ಕಡೆಗೆ ಸಂಚರಿಸುವ ವಾಹನಗಳು ಮಹಾರಾಣಿ ಮೇಲ್ಸೇತುವೆ ಬಳಿ - ಎಡತಿರುವು ಪಡೆದು ಪ್ಯಾಲೇಸ್ ರಸ್ತೆಯ ಬಸವೇಶ್ವರ ಸರ್ಕಲ್ ಮುಖಾಂತರ ವಸಂತನಗರ/ಶಿವಾಜಿನಗರ ಕಡೆಗೆ ಸಂಚರಿಸುವುದು.
* ಕೆ.ಆರ್.ಸರ್ಕಲ್ ನಿಂದ ನೃಪತುಂಗ ರಸ್ತೆಯ ಮುಖಾಂತರ ಕಾರ್ಪೊರೇಷನ್ ಸರ್ಕಲ್ ಕೆ.ಬಿ.ರಸ್ತೆ ಮುಖಾಂತರ ಶಿವಾಜಿನಗರ ಕಡೆಗೆ ಸಂಚರಿಸುವಂತೆ ಸೂಚನೆ ನೀಡಲಾಗಿದೆ.
3. ಮೆಟ್ರೋ ಪ್ರಯಾಣಿಕರಿಗೂ ಸೂಚನೆ ನೀಡಿದ್ದು, ಅಂಬೇಡ್ಕರ್ ಮೆಟ್ರೋ/ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಪ್ರವೇಶ/ನಿರ್ಗಮನ ತಾತ್ಕಾಲಿಕ ನಿಷೇಧಿಸಲಾಗಿದೆ. ವಿಧಾನಸೌಧ ಮೆಟ್ರೋಗೆ ಬದಲಾಗಿ ಕಬ್ಬನ್‌ಪಾರ್ಕ್ ಮೆಟ್ರೋ ಅಥವಾ ವಿಶೇಶ್ವರಯ್ಯ ಮೆಟ್ರೋ (ಸೆಂಟ್ರಲ್ ಕಾಲೇಜು) ನಿಲ್ದಾಣದಲ್ಲಿ ಮೆಟ್ರೋ ಏರುವುದು, ಇಳಿಯಲು ಅವಕಾಶ ನೀಡಲಾಗಿದೆ.
ಇಲ್ಲಿ ಪಾರ್ಕಿಂಗ್‌ಗೆ ಅವಕಾಶ ಇಲ್ಲ!
* ಕ್ಲೀನ್ಸ್ ರಸ್ತೆಯ ಎರಡು ಬದಿಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ಲೀನ್ಸ್ ವೃತ್ತದ ವರೆಗೆ ಮತ್ತು ಕ್ಲೀನ್ಸ್ ವೃತ್ತದಿಂದ ಸಿ.ಟಿ.ಓ ಜಂಕ್ಷನ್ ವರೆಗೆ, ಲೋಕಭವನ ರಸ್ತೆ. ಟಿ.ಚೌಡಯ್ಯರಸ್ತೆ ಮತ್ತು ರೇಸ್‌ಕೋರ್ಸ್ ರಸ್ತೆಗಳಲ್ಲಿ ಮತ್ತು ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ಸರ್ಕಲ್, ಪ್ರೆಸ್‌ಕ್ಲಬ್ ಮುಂಭಾಗ ವಾಹನಗಳಿಗೆ ನಿಲುಗಡೆ ನಿಷೇಧಿಸಲಾಗಿದೆ.
ಎಲ್ಲೆಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶ?
* ಸೈಟ್ಸ್ ಆಂಡ್ ಗೈಡ್ಸ್ ಪಾರ್ಕಿಂಗ್ ಸ್ಥಳ
* ಯು.ಬಿ.ಸಿಟಿ ಪಾರ್ಕಿಂಗ್
* ಫ್ರೀಡಂಪಾರ್ಕ್ ಎಂ.ಎಲ್.ಸಿ.ಪಿ ಪಾರ್ಕಿಗ್
* ಶಿವಾಜಿನಗರ ಎಂ.ಎಲ್.ಸಿ.ಪಿ ಪಾರ್ಕಿಂಗ್
* ಕಂಠೀರವ ಕ್ರೀಡಾಂಗಣ
* ನೆಹರೂ ತಾರಾಲಯ
* ಯುನಿವರ್ಸಿಟಿ ಪಾರ್ಕಿಂಗ್ (ಜ್ಞಾನಜ್ಯೋತಿ ಆಡಿಟೋರಿಯಂ) ಬಳಿ
* ಸೆಂಟ್ ಜೋಸೆಫ್ ಹೈಸ್ಕೂಲ್ ಮೈದಾನ.
* ಸರ್ಕಾರಿ ಕಲಾ ಕಾಲೇಜು
* ಲಿಂಕ್ ರಸ್ತೆ (ಚಿನ್ನಸ್ವಾಮಿ ಕ್ರೀಡಾಂಗಣ)
* (ಗ್ಯಾಸ್ ಕಾಲೇಜು) ಪಾರ್ಕಿಂಗ್ ಸ್ಥಳ
ಕ್ಯಾಬ್‌ಗಳು ಪಿಕ್‌ಆಪ್ ಮತ್ತು ಡ್ರಾಪ್ ಮಾಡುವ ಸ್ಥಳಗಳು
* ಲೋಕಭವನ ರಸ್ತೆಯ ಸಿಟಿಓ ಜಂಕ್ಷನ್ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ
* ಶೇಷಾದ್ರಿ ರಸ್ತೆ ಕೆ.ಆರ್. ವೃತ್ತ ಮತ್ತು ಕೆ.ಆರ್. ವೃತ್ತ
* ಎಂಎಸ್ ಬಿಲ್ಡಿಂಗ್ ಒಳಭಾಗದಲ್ಲಿ ಬಿಎಂಟಿಸಿ ಬಸ್ ನಿಲುಗಡೆ ಸ್ಥಳ ನಿಗದಿ
* ಬಸ್ ಸಂಚಾರ ಮಾರ್ಗ: ಕೆ.ಆರ್. ವೃತ್ತ, ಟೌನ್ ಹಾಲ್, ಸಿಟಿ ಮಾರ್ಕೆಟ್, ಮೈಸೂರು ರಸ್ತೆ, ಸ್ಯಾಟ್‌ಲೈಟ್
* ಸಿಐಡಿ, ಬಸವೇಶ್ವರ್ ವೃತ್ತ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿ ಪುರಂ, ಲುಲು ಮಾಲ್, ಮಾಗಡಿ ರಸ್ತೆ
* ಕೆ.ಆರ್. ವೃತ್ತ, ಹಡ್ಸನ್ ವೃತ್ತ, ಡಬಲ್ ರಸ್ತೆ, ಶಾಂತಿನಗರ, ಮಡಿವಾಳ
* ಸಿಐಡಿ, ರೇಸ್ ಕೋರ್ಸ್ ರಸ್ತೆ, ಶೇಷಾದ್ರಿಪುರಂ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ನವರಂಗ್, ಶಂಕರ ಮಠ, ಬಸವೇಶ್ವರ ನಗರ,
ಮಾಣಿಕ್ ಷಾ ಮೈದಾನಕ್ಕೆ ಬರುವವರ ಗಮನಕ್ಕೆ
ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆ-2026 ರ ಅಂಗವಾಗಿ ವಿಶೇಷ ಕವಾಯತು ನಡೆಯಲಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧ್ವಜಾರೋಹಣ ಮಾಡಿ ಗೌರವ ಸ್ವೀಕರಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಒಳಗಡೆ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಮಾರ್ಪಡು ಮಾಡಲಾಗಿದೆ.
ಕಾರ್ ಪಾಸ್‌ಗಳನ್ನು ಹೊಂದಿರುವ ಎಲ್ಲಾ ಆಹ್ವಾನಿತರು ಅವರುಗಳ ಪಾಸ್‌ಗಳಲ್ಲಿ ನಿಗಧಿಪಡಿಸಿದ ಗೇಟ್‌ಗಳಲ್ಲಿ ಇಳಿದುಕೊಳ್ಳುವುದು ಹಾಗೂ ಪಾಸ್‌ನಲ್ಲಿ ನಿಗಧಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು. ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ., ಕ್ಯೂ.ಆರ್.ಟಿ. ಬಿ.ಬಿ.ಎಂ.ಪಿ. ಹಾಗೂ ಪಿ.ಡಬ್ಲ್ಯೂ.ಡಿ ವಾಹನಗಳು ಪ್ರವೇಶ ದ್ವಾರ-2 ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
ಮಾದ್ಯಮದವರ ವಾಹನಗಳು ಪ್ರವೇಶ ದ್ವಾರ-4 ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗಧಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು. ಇನ್ನೂ ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ. ಕಬ್ಬನ್‌ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ. ಎಂ.ಜಿ.ರಸ್ತೆ. ಅನಿಲ್ ಕುಂಬ್ಳೆ ವೃತ್ತದಿಂದ ಕ್ಲೀನ್ಸ್ ವೃತ್ತದವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.


Click it and Unblock the Notifications
