Bengaluru Traffic: ಬೆಂಗಳೂರಿನ ವಿಚಿತ್ರ ಅನುಭವ ಹಂಚಿಕೊಂಡ ಟೆಕ್ಕಿ, ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಚರ್ಚೆ

Bengaluru Traffic: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಪ್ರಾರಂಭವಾಗಿ 12 ವರ್ಷಗಳಾದರೂ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ವಿಪರೀತವಾಗಿದೆ. ಅದರಲ್ಲೂ ಬೆಂಗಳೂರಲ್ಲಿ ಮಳೆ ಬಂದರಂತೂ ವಿಪರೀತ ಸಮಸ್ಯೆ ಆಗುತ್ತದೆ. ನಗರದಲ್ಲಿ ಮಳೆ ಬಂದಾಗ ಹಲವು ಸಮಸ್ಯೆಗಳು ಎದುರಾಗುವುದು ಇದೆ. ಇದೀಗ ಶುಕ್ರವಾರ ಸಂಜೆ ಸುರಿ ಮಳೆಯಿಂದ ವ್ಯಕ್ತಿಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದಾರೆ. ಶುಕ್ರವಾರ ಸಹ ಬೆಂಗಳೂರಿನಲ್ಲಿ ಮಳೆಯಾಗಿದ್ದು, ಮಳೆಯ ನಂತರ ಇಂದಿರಾನಗರದಿಂದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು 2 ಗಂಟೆ 15 ನಿಮಿಷಗಳು ಬೇಕಾಯಿತು ಎಂದು ಬೆಂಗಳೂರಿನ ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣ ಪ್ರಯಾಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಪ್ರಾರಂಭವಾಗಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವವರು ಸಹ ಇತ್ತೀಚಿನ ದಿನಗಳಲ್ಲಿ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಆಗಸ್ಟ್‌ 21ರ ಶುಕ್ರವಾರ ರಾತ್ರಿ ಇಂದಿರಾನಗರದಿಂದ ವಿಮಾನ ನಿಲ್ದಾಣಕ್ಕೆ 2 ಗಂಟೆ 15 ನಿಮಿಷಗಳು ಬೇಕಾಯಿತು ಇದೂ ಸಹ ಸಾಧಾರಣ ಮಳೆಯಿಂದಾಗಿ ಇಷ್ಟೊಂದು ತಡವಾಯಿತು ಎಂದು ನಿತಿನ್ ಶರ್ಮಾ ಎನ್ನುವವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Bengaluru Traffic

ಟ್ರಾಫಿಕ್ ಜಾಮ್ ಸಮಸ್ಯೆ ವಿಮಾನ ನಿಲ್ದಾಣ ತಲುಪುವುದಕ್ಕೆ ತುಂಬಾ ತಡವಾಗಿದ್ದರಿಂದ ನಾನು ವಿಮಾನ ನಿಲ್ದಾಣ ತಲುಪುವ ವಿಚಾರವನ್ನು ಬಿಟ್ಟು, ನನ್ನ ತಲೆಯಲ್ಲಿ ರಾಜಕಾರಣಿಗಳನ್ನು ದೂಷಿಸುವ ವಿಚಾರವೇ ಸುತ್ತುತ್ತಿತ್ತು. ವಿಶ್ವ ದರ್ಜೆಯ ಪ್ರತಿಭಾನ್ವಿತರು ಇಲ್ಲಿಗೆ ಹೇಗೆ ಬರುತ್ತಾರೆ ಎಂದು ನಾವು ಆಶ್ಚರ್ಯ ಪಡುತ್ತಿದ್ದೆವು. ಆದರೆ ನಂತರ ಪ್ರವೇಶದ್ವಾರದಿಂದ ನಿರ್ಗಮನ ದ್ವಾರಕ್ಕೆ ಕೇವಲ 9 ನಿಮಿಷಗಳು. ಡಿಜಿಟಲ್ ಯಾತ್ರೆ ಮತ್ತು ಉತ್ತಮ ವಿಮಾನ ನಿಲ್ದಾಣ ಕಾರ್ಯಾಚರಣೆಗಳಿಗೆ ಧನ್ಯವಾದಗಳು.

ಬೆಂಗಳೂರಿನಲ್ಲಿ ಮೂರನೇ ಹಂತದ ಮೂಲಸೌಕರ್ಯವಿದೆ. ಆದರೆ ನಗರದಲ್ಲಿ ವಿಶ್ವ ದರ್ಜೆಯ ಡಿಜಿಟಲ್ ಮೂಲಸೌಕರ್ಯದಿಂದ ಜೀವನದ ಮತ್ತೊಂದು ದಿನವನ್ನು ಸಹನೀಯವಾಗಿಸಿದೆ. ಬೆಂಗಳೂರು ಆಶಾವಾದಿಗಳಿಗೂ ನಿರಾಶಾವಾದಿಗಳಿಗೂ ಇಬ್ಬರಿಗೂ ನಿರಾಸೆ ಮೂಡಿಸುತ್ತದೆ ಎಂದಿದ್ದಾರೆ.

Bengaluru Traffic: ನೆಟ್ಟಿಗರು ಹೇಳಿದ್ದೇನು ?

ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚುತ್ತಿರುವುದು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವುದಕ್ಕೆ ಕಷ್ಟವಾಗುತ್ತಿರುವ ಬಗ್ಗೆ ಹಲವರು ರಿಯಾಕ್ಟ್‌ ಮಾಡಿದ್ದಾರೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಖಂಡಿತವಾಗಿಯೂ ಮೆಟ್ರೋ ವಿಸ್ತರಿಸುವ ಅವಶ್ಯಕತೆ ಇದೆ. ಅಲ್ಲದೆ ಹೆಬ್ಬಾಳದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಬೇಕು ಎಂದೂ ನೆಟ್ಟಿಗರು ಹೇಳಿದ್ದಾರೆ.

ಮೂಲಸೌಕರ್ಯದ ಕೊರತೆಯಿಂದ ಉಂಟಾಗುವ ಟ್ರಾಫಿಕ್ ದಟ್ಟಣೆ ನಿಜವಾದ ಸಮಸ್ಯೆಯೇ ನಿಜ. ಆದರೆ ರಸ್ತೆಗಳು ಉತ್ತಮವಾಗಿದ್ದು, ಗುಂಡಿಗಳಿಲ್ಲದಂತಿದ್ದರೆ ಅರ್ಧದಷ್ಟು ಸಮಸ್ಯೆಯನ್ನು ಪರಿಹರಿಸಬಹುದು. ಈ ಸಮಸ್ಯೆಯನ್ನು ಬಗೆಹರಿಸುವುದು ಅಷ್ಟೊಂದು ಕಷ್ಟವೇ? ಆಫ್ರಿಕಾದ ಹಲವು ದೇಶಗಳಲ್ಲಿಯೇ ಇದಕ್ಕಿಂತ ಉತ್ತಮ ರಸ್ತೆಗಳಿವೆ ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ.

ಯಾವಾಗಲೂ ರಾಜಕಾರಣಿಗಳನ್ನು ದೂಷಿಸುತ್ತಾರೆ. ಜನರು ರಸ್ತೆಯ ಎಲ್ಲಾ ಬದಿಗಳಲ್ಲಿ ವಾಹನ ಚಲಾಯಿಸುತ್ತಾರೆ, ಚರಂಡಿಗಳನ್ನು ಮುಚ್ಚುವ ಕಸವನ್ನು ಎಸೆಯುತ್ತಾರೆ, ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಳ್ಳುತ್ತಾರೆ, ರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸುತ್ತಾರೆ ಆದರೆ ನಾವೆಲ್ಲರೂ ರಾಜಕಾರಣಿಗಳನ್ನು ಮಾತ್ರ ದೂಷಿಸಲು ಬಯಸುತ್ತೇವೆ ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+