Bengaluru Towing: ಬೆಂಗಳೂರಲ್ಲಿ ಅನಾಥ ವಾಹನಗಳ ತೆರವು ಕಾರ್ಯಾಚರಣೆಯೊಂದಿಗೆ ಟೋಯಿಂಗ್ ಜೋರು!

Bengaluru Towing: ಬೆಂಗಳೂರಿನಲ್ಲಿ ಅನಾಥ ವಾಹನಗಳ ಜಪ್ತಿಯೊಂದಿಗೆ ಟೋಯಿಂಗ್ ಪ್ರಕ್ರಿಯೆಯು ಸಹ ಚುರುಕು ಪಡೆದುಕೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಹಲವು ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಮೊದಲಿಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯೊಂದಿಗೆ ಪ್ರಾರಂಭವಾದ ಈ ಅಭಿಯಾನವು ನಂತರ ಸ್ವಚ್ಛತಾ ಅಭಿಯಾನ, ಅನಾಥ ವಾಹನಗಳ ತೆರವು ಸೇರಿದಂತೆ ವಿವಿಧ ಕಾರ್ಯಾಚರಣೆಗಳಿಗೆ ಕಾರಣವಾಗಿದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್ ಪ್ರಕ್ರಿಯೆಯೂ ಸಹ ಪ್ರಾರಂಭವಾಗಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ಹಾಗೂ ಬೆಂಗಳೂರು ಪಶ್ಚಿಮ ಸಂಚಾರ ಪೊಲೀಸ್ ವಿಭಾಗದ ಉಪ ಆಯುಕ್ತರಾದ ಡಾ. ಅನೂಪ್ ಎ. ಶೆಟ್ಟಿ ಅವರು ಅನಾಥ ವಾಹನಗಳ ತೆರವು ಅಭಿಯಾನ ಸೇರಿದಂತೆ ಸಂಚಾರ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪಾಲಿಕೆ‌ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ್ದು, ಹಲವು ಮಹತ್ವದ ಸೂಚನೆಗಳನ್ನು ಈ ಸಂದರ್ಭದಲ್ಲಿ ಕೊಡಲಾಗಿದೆ.

Bengaluru Towing

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಆದೇಶ ಅನುಸಾರ, ಪಾಲಿಕೆ ಹಾಗೂ ಸಂಚಾರ ಪೊಲೀಸ್‌ ಇಲಾಖೆಯ ಜಂಟಿ ಸಹಯೋಗದಲ್ಲಿ, ಪಾಲಿಕೆ ವ್ಯಾಪ್ತಿಯ ರಸ್ತೆ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ತೆರವು ಕಾರ್ಯಾಚರಣೆ ಅಂಗವಾಗಿ ಅನಾಥ ವಾಹನಗಳಿಗೆ ನೋಟಿಸ್‌ ಅಂಟಿಸಿ, ವೀಲ್‌ ಕ್ಲ್ಯಾಂಪಿಂಗ್‌ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪಾಲಿಕೆಯ ಎಲ್ಲ ವಿಭಾಗಗಳಲ್ಲಿ ಸಂಬಂಧಿತ ಕಾರ್ಯಪಾಲಕ ಎಂಜಿನಿಯರರು ಹಾಗೂ ಸಂಚಾರ ಪೊಲೀಸ್‌ ಸಹಾಯಕ ಆಯುಕ್ತರ (ಎಸಿಪಿ) ಸಮನ್ವಯದೊಂದಿಗೆ ಅಭಿಯಾನವು ವ್ಯವಸ್ಥಿತವಾಗಿ, ಯಶಸ್ವಿಯಾಗಿ ಪೂರ್ಣಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

Bengaluru Towing: 'ಅನಾಥ ವಾಹನಗಳ ತೆರವು ಅಭಿಯಾನ'

ಇನ್ನು ಅನಾಥ ವಾಹನಗಳನ್ನು ಸಾರ್ವಜನಿಕರು, ಸಂಚಾರ ಪೊಲೀಸ್‌ ಹಾಗೂ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರರು ಗುರುತಿಸುತ್ತಿದ್ದು, ಗುರುತಿಸಲ್ಪಟ್ಟ ಅನಾಥ ವಾಹನಗಳನ್ನು ವಿಧಾನಸಭಾ ವ್ಯಾಪ್ತಿ ಅನುಸಾರವಾಗಿ ಪಟ್ಟಿ ಮಾಡಬೇಕು. ನೋಟಿಸ್‌ ಅಂಟಿಸಿಯೂ ಸಂಬಂಧಿತ ವಾಹನಗಳ ಮಾಲಕರು ತೆರವುಗೊಳಿಸದಿದ್ದಲ್ಲಿ ಅಭಿಯಾನದ ನಿಯಮಾನುಸಾರ ಟೋಯಿಂಗ್‌ ಮಾಡಬೇಕು. ದಂಡ ವಿಧಿಸುವಿಕೆ, ಅನಾಥ ವಾಹನಗಳ ಹರಾಜು ಕ್ರಮಗಳು ಸೇರಿದಂತೆ ಒಟ್ಟಾರೆ ಅಭಿಯಾನದ ಕ್ರಮಗಳು ವ್ಯವಸ್ಥಿತವಾಗಿ ನಡೆಯಬೇಕು ಎಂದು ಸೂಚನೆ ನೀಡಲಾಗಿದೆ.

Bengaluru Towing: 'ಅನಾಥ ವಾಹನಗಳ ತೆರವು ಅಭಿಯಾನ' ಪ್ರಗತಿ

ಇನ್ನು ಬೆಂಗಳೂರಿನ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 33 ಅನಾಥ ವಾಹನಗಳಿಗೆ ನೋಟಿಸ್‌; 14 ವಾಹನ ಟೋಯಿಂಗ್ ಪ್ರಕ್ರಿಯೆ ಆಗಿದೆ. ಇದೀಗ ಅನಾಥ ವಾಹನಗಳ ಜಪ್ತಿಯೊಂದಿಗೆ ವಾಹನಗಳ ಟೋಯಿಂಗ್ ಪ್ರಕ್ರಿಯೆಯೂ ಚುರುಕು ಪಡೆದುಕೊಂಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ಒಟ್ಟು 33 ಅನಾಥ ವಾಹನಗಳಿಗೆ ನೋಟಿಸ್‌ ಅಂಟಿಸಿ ವೀಲ್‌ ಕ್ಲ್ಯಾಂಪಿಂಗ್‌ ಮಾಡಲಾಗಿದೆ. ಈ ಪೈಕಿ 23 ನಾಲ್ಕು ಚಕ್ರದ ವಾಹನಗಳು, 5 ಮೂರು ಚಕ್ರದ ವಾಹನಗಳು ಹಾಗೂ 5 ದ್ವಿಚಕ್ರ ವಾಹನಗಳಾಗಿವೆ. ಈ ಪೈಕಿ ಕೆಂಗೇರಿ ವಿಭಾಗದಲ್ಲಿ 12 ವಾಹನಗಳು, ಗೋವಿಂದರಾಜನಗರ ವಿಭಾಗದಲ್ಲಿ 11, ಮಹಾಲಕ್ಷ್ಮೀಪುರ ಮತ್ತು ಮಲ್ಲೇಶ್ವರ ವಿಭಾಗಗಳಲ್ಲಿ ತಲಾ 5 ವಾಹನಗಳು ಪತ್ತೆಯಾಗಿವೆ.

ಅಲ್ಲದೆ, ಕಾರ್ಯಾಚರಣೆಯ ಎರಡನೇ ಹಂತವಾಗಿ ಟೋಯಿಂಗ್‌ ಕೂಡ ಚಾಲ್ತಿಯಲ್ಲಿದೆ. ಆ ಪ್ರಕಾರ, ನೋಟಿಸ್‌ ನೀಡಿದ 7 ದಿನಗಳ ಒಳಗಾಗಿ ಆ ವಾಹನದ ಮಾಲೀಕರು ವಾಹನ ತೆರವುಗೊಳಿಸಬೇಕಿದ್ದು, ಇಲ್ಲದಿದ್ದಲ್ಲಿ ವಾಹನವನ್ನು ಟೋಯಿಂಗ್‌ ಮಾಡಿ, ಜಪ್ತಿ ಮಾಡಲಾಗುತ್ತಿದೆ. ಅದರಂತೆ ಇಂದು 14 ವಾಹನಗಳನ್ನು ಟೋಯಿಂಗ್‌ ಮಾಡಲಾಗಿದೆ.

ಈ ಪೈಕಿ 10 ವಾಹನಗಳು ರಾಜರಾಜೇಶ್ವರಿನಗರ ವಿಭಾಗ ಹಾಗೂ ತಲಾ 2 ವಾಹನಗಳು ಮಹಾಲಕ್ಷ್ಮೀಪುರ ಮತ್ತು ಬಸವನಗುಡಿ ವಿಭಾಗಕ್ಕೆ ಸೇರಿವೆ. ಅಲ್ಲದೆ, ಮಹಾಲಕ್ಷ್ಮೀಪುರ ವಿಭಾಗದಲ್ಲಿ 1000 ರೂ. ದಂಡ ಕೂಡ ಸಂಗ್ರಹಿಸಲಾಗಿದೆ ಎಂದೂ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+