Namma Metro: ಬೆಂಗಳೂರು TO ತುಮಕೂರು ಮೆಟ್ರೋ, ಯಾರಿಗೆಲ್ಲಾ ಉಪಯೋಗ ಹೆಚ್ಚು?
'ನಮ್ಮ ಮೆಟ್ರೋ' ಇದ್ರೆ ಸಾಕು ನೆಮ್ಮದಿಯಾಗಿ ಸಂಚಾರ ಮಾಡಬಹುದು ಅಂತಾರೆ ನಮ್ಮ ಬೆಂಗಳೂರಿನ ಜನ. ಯಾಕಂದ್ರೆ ಈಗಿನ ಟ್ರಾಫಿಕ್ ನರಕದಲ್ಲಿ ನಮ್ಮ ಮೆಟ್ರೋ ಬೆಸ್ಟ್ ಅಂತ ಜನರೇ ಹೇಳುತ್ತಾರೆ. ಈಗಾಗಲೇ ಬೆಂಗಳೂರಿನ ಬಹುತೇಕ ಜಾಗಗಳಿಗೆ ನಮ್ಮ ಮೆಟ್ರೋ ಸೇವೆ ಸಿಗುತ್ತಿದೆ. ಈಗ ಬೆಂಗಳೂರಿನ ಪಕ್ಕದ ಜಿಲ್ಲೆ ತುಮಕೂರಿನಲ್ಲಿ ಕೂಡ ಮೆಟ್ರೋ ಸೇವೆಯನ್ನು ಆರಂಭಿಸಲಾಗುತ್ತಿದೆ. ಹಾಗಾದ್ರೆ ಬೆಂಗಳೂರು TO ತುಮಕೂರು ಮೆಟ್ರೋದಿಂದ ಯಾರಿಗೆಲ್ಲಾ ಉಪಯೋಗ ಹೆಚ್ಚು?
'ನಮ್ಮ ಮೆಟ್ರೋ' ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ ದೇಶದಲ್ಲೇ ಅತ್ಯುತ್ತಮ ಸೇವೆ ನೀಡುತ್ತಿರುವ ಸಂಸ್ಥೆ ಪೈಕಿ ಒಂದಾಗಿದೆ. ಅದ್ರಲ್ಲೂ ಬೆಂಗಳೂರಿನ ಟ್ರಾಫಿಕ್ ನರಕದಲ್ಲಿ ಪರದಾಡುತ್ತಿದ್ದ ಬಸ್ ಪ್ರಯಾಣಿಕರಿಗೆ ಮೆಟ್ರೋ ದೇವರಂತೆ ಎಂಟ್ರಿ ಕೊಟ್ಟಿದೆ. ಹೀಗಿದ್ದಾಗಲೇ ಮೆಟ್ರೋ ತುಮಕೂರು, ದೇವನಹಳ್ಳಿಗೂ ಎಂಟ್ರಿ ಕೊಡುತ್ತಿದೆ. ಇದರಿಂದ ಲಕ್ಷಾಂತರ ಜನರಿಗೆ ಭಾರಿ ಉಪಯೋಗವೂ ಆಗಲಿದೆ. ಬೆಂಗಳೂರಿನ ನಮ್ಮ ಮೆಟ್ರೋ ತುಮಕೂರು & ದೇವನಹಳ್ಳಿಗೆ ವಿಸ್ತರಿಸುವ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಳಿಸಿದ್ದರು. ಈಗ ಯೋಜನೆಗೆ ಸಖತ್ ವೇಗ ಸಿಕ್ಕಿದೆ.

ತುಮಕೂರು ಮೆಟ್ರೋ ವಿವರ
ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ ತುಮಕೂರಿನ ತನಕ ಸೇರಿದಂತೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ದೇವನಹಳ್ಳಿಯ ತನಕ ಸಾರ್ವಜನಿಕ & ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ರೈಲು ವಿಸ್ತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗೆ ಪ್ಲ್ಯಾನ್ ಮಾಡಿದ ಹಿನ್ನೆಲೆ ಅಧಿಕಾರಿಗಳು ಕೂಡ ಪ್ರಾಥಮಿಕ ಕೆಲಸಗಳನ್ನು ಆರಂಭಿಸಿದ್ದಾರೆ.
8 ಲಕ್ಷ ಜನರಿಗೆ ಲಾಭ
ಪ್ರತಿದಿನ 8 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಸೇವೆ ಬಳಸುತ್ತಿದ್ದಾರೆ. ಮಾರ್ಚ್ 2025 ರ ಒಳಗಾಗಿ ಹೆಚ್ಚುವರಿ 44 ಕಿಲೋ ಮೀಟರ್ ಮೆಟ್ರೋ ಮಾರ್ಗ ಅಳವಡಿಸಲು ಸಿದ್ಧತೆ ಸಾಗಿದೆ. ಹೀಗಾಗಿಯೇ ತುಮಕೂರು ತನಕ ಮೆಟ್ರೋ ವಿಸ್ತರಣೆ ಆಗುತ್ತಿದೆ. ಹಾಗಾದ್ರೆ ತುಮಕೂರು ಮೆಟ್ರೋ ಒಟ್ಟು ಎಷ್ಟು ನಿಲ್ದಾಣ ಹೊಂದಿರಲಿದೆ? ಇದರಿಂದ ಹೇಗೆ ಪ್ರಯೋಜನ ಆಗಲಿದೆ? ಪ್ರಯಾಣಿಕರು ಯಾವ ರೀತಿ ಅನುಕೂಲ ಪಡೆಯಬಹುದು? ಬನ್ನಿ ತಿಳಿಯೋಣ.
ತುಮಕೂರು ಮಾರ್ಗದ 19 ಮೆಟ್ರೋ ನಿಲ್ದಾಣ!
1). ಮಾದಾವರ
2). ಮಾಕಳಿ
3). ದಾಸನಪುರ
4). ನೆಲಮಂಗಲ (ಒಟ್ಟು 3 ನಿಲ್ದಾಣ)
5). ಬೂದಿಹಾಳ
6). ಟಿ.ಬೇಗೂರು
7). ಕುಲುವನಹಳ್ಳಿ
8). ಸೋಂಪುರ
9). ಡಾಬಸ್‌ಪೇಟೆ
10). ನಲ್ಲಯ್ಯನಪಾಳ್ಯ
11). ಚಿಕ್ಕಹಳ್ಳಿ
12). ಹಿರೇಹಳ್ಳಿ
13). ಪಂಡಿತನಹಳ್ಳಿ
14). ಕ್ಯಾತ್ಸಂದ್ರ
15). ಬಟವಾಡಿ
16). ತುಮಕೂರು ವಿವಿ
17). ತುಮಕೂರು ಬಸ್ ಸ್ಟ್ಯಾಂಡ್
ಲಕ್ಷಾಂತರ ಜನರಿಗೆ ಸಹಾಯ
ತುಮಕೂರು ಮತ್ತು ಬೆಂಗಳೂರು ನಡುವೆ ಲಕ್ಷಾಂತರ ಜನರು ಪ್ರತಿನಿತ್ಯ ಪ್ರಯಾಣ ಮಾಡಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಾರೆ. ಆದರೆ ಇವರಿಗೆ ಪ್ರತಿನಿತ್ಯ ಓಡಾಟ ನಡೆಸಲು, ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಬೆಂಗಳೂರು ಟು ತುಮಕೂರು ಮಾರ್ಗದ ಮೆಟ್ರೋ ಆರಂಭ ಮಾಡಿದರೆ ಲಕ್ಷಾಂತರ ಜನರಿಗೆ ಇದರಿಂದ ಭಾರಿ ಉಪಯೋಗ ಆಗಲಿದೆ. ಹಾಗೇ ಟ್ರಾಫಿಕ್‌ನ ನರಕದಿಂದ ಎಲ್ಲರೂ ಬಚಾವ್ ಆಗಿ, ಆರಾಮವಾಗಿ ತಮ್ಮ ತಮ್ಮ ಮನೆ ಮತ್ತು ಕಚೇರಿಯ ತಲುಪಬಹುದು.
ಒಟ್ನಲ್ಲಿ ತುಮಕೂರು ಮಾರ್ಗದ ಮೆಟ್ರೋ ಭವಿಷ್ಯದಲ್ಲಿ ದೊಡ್ಡ ಬದಲಾವಣೆಗೆ ನಾಂದಿಯ ಹಾಡುವ ನಿರೀಕ್ಷೆ ಇದೆ. ಹೀಗಾಗಿ ನಮ್ಮ ಮೆಟ್ರೋ ಅಧಿಕಾರಿಗಳು ಕೂಡ ಈ ಕಾಮಗಾರಿಗೆ, ಸಕಲ ಸಿದ್ಧತೆ ಆರಂಭಿಸಿದ್ದಾರೆ. ಇನ್ನು ಕೆಲವೇ ವರ್ಷದಲ್ಲಿ ತುಮಕೂರು ಮಾರ್ಗಕ್ಕೂ ನಮ್ಮ ಮೆಟ್ರೋ ಶುರುವಾಗುವ ನಿರೀಕ್ಷೆ ಇದೆ.
ಅಭಿವೃದ್ಧಿಗೂ ಮೆಟ್ರೋ ಸೇವೆ ಪೂರಕ!
ಈಗಾಗಲೇ ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಸಿಕ್ಕಿದ್ದು, ಇದೀಗ ನಮ್ಮ ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಿಗೂ ಮೆಟ್ರೋ ಸಂಪರ್ಕ ಕೂಡಲಿದೆ. ಈ ಮೂಲಕವಾಗಿ ಹೊಸ ಅಧ್ಯಾಯ ಬರೆಯಲು ನಮ್ಮ ಮೆಟ್ರೋ ಸಜ್ಜಾಗಿದೆ. ಹಾಗೇ ಇಷ್ಟು ದಿನ ಬಸ್ ಹಾಗು ರೈಲು ಪ್ರಯಾಣ ನಂಬಿಕೊಂಡಿದ್ದ ತುಮಕೂರು ಜನರಿಗೆ ಇದೀಗ ಮೆಟ್ರೋ ಸಂಪರ್ಕ ಕೂಡ ಭರವಸೆ ನೀಡುತ್ತಿದೆ. ಹಾಗೇ ಮೆಟ್ರೋ ಸಂಪರ್ಕ ಸಿಗುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲು ಇರುವ ಪ್ರದೇಶಗಳ ಅಭಿವೃದ್ಧಿ ಕೂಡ ಸಾಧ್ಯವಾಗಲಿದೆ. ಹೀಗಾಗಿ ಬೆಂಗಳೂರು & ತುಮಕೂರು ಮೆಟ್ರೋ ಕಾಮಗಾರಿ ತೀವ್ರ ಕುತೂಹಲ ಕೆರಳಿಸಿದೆ. ಹಾಗೇ ಇದರಿಂದ ಸಾಕಷ್ಟ ಪ್ರಯೋಜನ ಕೂಡ ಸಿಗಲಿದೆ.
ತುಮಕೂರು ಅಭಿವೃದ್ಧಿಗೂ ಪೂರಕ!
ಈಗಾಗಲೇ ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗವು ಹೋಗಿರುವ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿಯು ಆಗಿದೆ. ಹೀಗಾಗಿ ತುಮಕೂರು ಸುತ್ತಮುತ್ತಲ ಹಳ್ಳಿಗಳಲ್ಲೂ ಅಭಿವೃದ್ಧಿ ಆಗಲಿದೆ ಎಂಬ ನಿರೀಕ್ಷೆ ಇದೆ. ಯಾಕಂದ್ರೆ ಹೀಗೆ ತುಮಕೂರು ಮಾರ್ಗದಲ್ಲಿ ಹತ್ತಾರು ಮೆಟ್ರೋ ನಿಲ್ದಾಣ ನಿರ್ಮಾಣ ಮಾಡುವ ರಣತಂತ್ರ ಇದೆ. ಈ ಮೂಲಕ ಮೆಟ್ರೋ ಮಾರ್ಗ, ಅಭಿವೃದ್ಧಿಗೂ ಪೂರಕ ಆಗಲಿದೆ. ಇದೇ ಕಾರಣಕ್ಕೆ ಬೆಂಗಳೂರು & ತುಮಕೂರು ಮೆಟ್ರೋ ಮಾರ್ಗಕ್ಕೆ, ಈಗ ಕನ್ನಡಿಗರು ಕಾಯುತ್ತಿದ್ದಾರೆ. ಇದರಿಂದ ಲಕ್ಷಾಂತರ ಜನರಿಗೂ ಉಪಯೋಗ ಆಗಲಿದೆ. ಹಾಗೇ ಭವಿಷ್ಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ, ಹೊಸ ನಗರವನ್ನು ರೂಪುಗೊಳಿಸಿದಂತೆ ಆಗುತ್ತದೆ ಎಂಬುದು ತಜ್ಞರ ಅಭಿಮತ.












Click it and Unblock the Notifications