Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.7, 8ರಂದು ವಿದ್ಯುತ್ ಕಡಿತ
ಬೆಂಗಳೂರು, ಫೆಬ್ರವರಿ 7: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಿಗೆ, ಬೆಳಗಿನ ವಿಪರೀತ ಚಳಿ ಹಾಗೂ ಮಧ್ಯಾಹ್ನದ ಬಿರುಬಿಸಿಲಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ತಿಂಗಳುಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ.
ಈಗ ಮತ್ತೆ ಫೆಬ್ರವರಿ 7(ಸೋಮವಾರ) ಮತ್ತು ಫೆಬ್ರವರಿ 8(ಮಂಗಳವಾರ)ರಂದು ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಲಿವೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಣೆ ಮತ್ತು ಇತರ ಉನ್ನತೀಕರಣ ಕಾರ್ಯಗಳಿಂದಾಗಿ ವಿದ್ಯುತ್ ಕಡಿತ ಉಂಟಾಗುತ್ತದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಫೆ.07ರಂದು ವಿದ್ಯುತ್ ವ್ಯತ್ಯಯದ ಪ್ರದೇಶಗಳು
ದಕ್ಷಿಣ ವಲಯ: ಸೋಮವಾರ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಎ.ಟಿ. ಹಳ್ಳಿ, ಬಂಗಿಯಪ್ಪ ಗಾರ್ಡನ್ ಲಕ್ಷ್ಮಿ ರಸ್ತೆ, ಬಂಗಿಯಯ್ಯ ಗಾರ್ಡನ್ ಎ.ಟಿ. ಹಳ್ಳಿ ಲ್ಯಾಂಗ್‌ಫೋರ್ಡ್ ಉದ್ಯಾನ, ಬಿಕಿಸಿಪುರ, ಮಾವಿನ ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಪೈಪ್‌ಲೈನ್ ರಸ್ತೆ, ಸಿದ್ದಾಪುರದ 2ನೇ ಬ್ಲಾಕ್, 18ನೇ ಕ್ರಾಸ್, 8ನೇ ಕ್ರಾಸ್, 6ನೇ ಕ್ರಾಸ್, 10ನೇ ಮುಖ್ಯ 1ನೇ ಬ್ಲಾಕ್, 3ನೇ ಬ್ಲಾಕ್, 18ನೇ ಕ್ರಾಸ್, 7ನೇ ಕ್ರಾಸ್, ಸೋಮೇಶ್ವರನಗರ, ಬಾಲಾಜಿ ಲೇಔಟ್, ತಲಘಟ್ಟಪುರ ಸೆಕ್ಷನ್ ಏರಿಯಾ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ಬಿಎಸ್‌ಆರ್ ಪರದಾಪುರ. SJR ಕಾಲೇಜು ರಸ್ತೆ, ಮುನ್ನಿ ರೆಡ್ಡಿ ಲೇಔಟ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಉತ್ತರ ವಲಯ:
ಬೆಳಗ್ಗೆ 9:30ರಿಂದ ಸಂಜೆ 4ರವರೆಗೆ ಪ್ರಕಾಶ್ ನಗರ 1ನೇ ಮುಖ್ಯ 7ನೇ ಕ್ರಾಸ್, ಇ ಬ್ಲಾಕ್, ರಾಜಾಜಿನಗರ, ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಮತ್ತಿಕೆರೆ ಮುಖ್ಯ ರಸ್ತೆ, ಎಸ್‌ಬಿಎಂ ಕಾಲೋನಿ, ಮತ್ತಿಕೆರೆ ವಿಸ್ತರಣೆ, ರಾಮಯ್ಯ ಲೇಔಟ್, ಫುಲ್ ಫೀಡರ್, ತಿಂಡ್ಲು ಸರ್ಕಲ್ ರಸ್ತೆಯಲ್ಲಿ ಪವರ್ ಕಟ್ ಆಗಲಿದೆ.

ಪೂರ್ವ ವಲಯ:
ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಕಸ್ತೂರಿ ನಗರ, ದೂರವಾಣಿ ನಗರ, ಸ್ಮಶಾನ ಟಿಸಿ, ಮಣಿಪಾಲ ಟಿಸಿ, ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ಇಸಿಸಿ ರಸ್ತೆ, ಇನ್ನರ್ ಸರ್ಕಲ್, ಕರುಮಾರಿಯಪ್ಪ ದೇವಸ್ಥಾನದ ಬೀದಿ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪಶ್ಚಿಮ ವಲಯ:
ಬೆಳಗ್ಗೆ 10:30ರಿಂದ ಸಂಜೆ 7 ಗಂಟೆಯವರೆಗೆ ಸುಬ್ಬಣ್ಣ ಗಾರ್ಡನ್, ವೈಯಾಲಿಕಾವಲ್ ಎಚ್‌ಬಿಸಿಎಸ್, ಹತ್ತಿರದ ವಿನಾಯಕ ಲೇಔಟ್, ಬಾಪೂಜಿ ಲೇಔಟ್ ಕೆನರಾ ಬ್ಯಾಂಕ್ ಕಾಲೋನಿ ಸ್ಕೈಲೈನ್ ಅಪಾರ್ಟ್‌ಮೆಂಟ್ ಮುಖ್ಯ ರಸ್ತೆ, ಕೆನರಾ ಬ್ಯಾಂಕ್ ಕಾಲೋನಿ, ಅನುಭವ ನಗರ, ಮಾರುತಿ ನಗರ, ರಾಜರಾವ್ ನಗರ, ರಾಜರಾವ್ ನಗರ, ಬೈನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಫೆಬ್ರವರಿ 08ರಂದು ವಿದ್ಯುತ್ ವ್ಯತ್ಯಯದ ಪ್ರದೇಶಗಳು
ದಕ್ಷಿಣ ವಲಯ: ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಕರಗಪ್ಪ ಕಾಂಪೌಂಡ್ (2), ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ.ಅಣ್ಣಯ್ಯ ರಸ್ತೆ, ಕನಕ ಲೇಔಟ್, ಗೌಡನಪಾಳ್ಯ, ಎಸ್ 9 ಕಚೇರಿ, ರಿಂಗ್ ರಸ್ತೆಯ 27ನೇ ಮುಖ್ಯ, 25ನೇ ಮುಖ್ಯ, 28ನೇ ಕ್ರಾಸ್, ಯಾರಬ್ ನಗರ ಮುಖ್ಯ ರಸ್ತೆ, ಮಸೀದಿ ರಸ್ತೆ, ಹಾಪ್‌ಕಾಮ್ಸ್ ವಿದ್ಯುತ್ ಸಂಪರ್ಕ ಕಡಿತ.

ಉತ್ತರ ವಲಯ
ಬೆಳಗ್ಗೆ 11ರಿಂದ ಸಂಜೆ 3ರವರೆಗೆ ತ್ರಿಕೋನ ಉದ್ಯಾನವನ[W] 500KVA, ತ್ರಿಕೋನ ಉದ್ಯಾನವನ[E] 500KVA, ಬೆಳಗ್ಗೆ 10ರಿಂದ 7 ಗಂಟೆಯವರೆಗೆ ಬಿ.ಕೆ. ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ನ್ಯೂ ಬೆಲ್ ರಸ್ತೆ, ಸೀನಪ್ಪ ಲೇಔಟ್, ವೈಷ್ಣವಿ ಲೇಔಟ್ ಈಜು ಫೂಲ್ ರಸ್ತೆ, ಶ್ರೀ ರಾಮ್ ಅಪಾರ್ಟ್‌ಮೆಂಟ್ ಲೇಔಟ್, ಶ್ರೀನಿಧಿ ಲೇಔಟ್, ಬಾಲಾಜಿ ಲೇಔಟ್‌ನಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಜನರಿಗೆ ಬೆಸ್ಕಾಂ ಸಹಕರಿಸುವಂತೆ ಮನವಿ ಮಾಡಿದೆ.
ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
Recommended Video
ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications