Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು, ನಾಳೆ ಪವರ್ ಕಟ್! ನಿಮ್ಮ ಏರಿಯಾದಲ್ಲಿ ಪವರ್ ಇರುತ್ತಾ?
ಬೆಂಗಳೂರು, ನವೆಂಬರ್ 21: ಸಿನಿಕಾನ್ ಸಿಟಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಇಂದು ಮತ್ತು ನಾಳೆ ಕೆಲವು ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಮಾಡುತ್ತಿರುವ ಹಿನ್ನೆಲೆ ಬೆಂಗಳೂರು ನಗರದಲ್ಲಿ ನಿಗದಿತ ಸಮಯದಲ್ಲಿ ಪವರ್ ಕಟ್ ಆಗುವ ಸಾಧ್ಯತೆ ಇದೆ.
ಹೌದು, ನವೆಂಬರ್ 21 ಮತ್ತು ನವೆಂಬರ್ 22 ರಂದು ಬೆಂಗಳೂರು ನಗರದಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ. ವಿದ್ಯುತ್ ಸರಬರಾಜು ಕಂಪನಿಗಳ ಈ ಕಾಮಗಾರಿಗಳು ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಮಿಯೊಳಗೆ ಕೇಬಲ್‌ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕದ ನಿರ್ವಹಣೆ, ಮರದ ಟ್ರಿಮ್ಮಿಂಗ್, ಜಲಸಿರಿ 24×7 ನೀರು ಸರಬರಾಜು ಕೆಲಸ, ಹದಗೆಟ್ಟ ಕಂಬಗಳ ಬದಲಾವಣೆ, ಭೂಮಿಯೊಳಗಿನ ಕೇಬಲ್ ಹಾನಿ ಸರಿಪಡಿಸುವಿಕೆ ಇತ್ಯಾದಿ ಕಾರ್ಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರ ನಡುವೆ ನಡೆಯುವ ನಿರೀಕ್ಷೆಯಿದ್ದು, ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ.

ಮಂಗಳವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ನವೆಂಬರ್ 21 ರಂದು ಎಸ್.ಜೆ.ಎಂ.ನಗರ, ಬಾಬು ಜಗಜೀವನ ನಗರ ಹಾಗೂ ಇತರೆ ಪ್ರದೇಶಗಳು, ದೇವರಾಜ್ ಅರಸ್ ಬಡಾವಣೆ, ವಿಜಯನಗರ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ಎಸ್ಪಿ ಕಚೇರಿ, ಆರ್ಟಿಒ ಕಚೇರಿ ಹಾಗೂ ಎಸ್.ಎಂ.ಕೆ.
ಬುಧವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಇನ್ನೂ ನವೆಂಬರ್ 21 ರಂದು ಬೆಂಗಳೂರು ನಗರದ ಚೋಳೂರುಪಾಳ್ಯ, ಪ್ರೇಮನಗರ, ಶಂಕರಪ್ಪ ಇಂಡಸ್ಟ್ರಿಯಲ್ ಎಸ್ಟೇಟ್, ಯುನಾನಿ ಆಸ್ಪತ್ರೆ, ನಿರೀಕ್ಷಿತ ಭವನ ಮತ್ತು ಪಿ ಆ್ಯಂಡ್ ಟಿ ಲೇಔಟ್ ನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ.
ಬೆಸ್ಕಾಂ ಟ್ವೀಟ್ ಮೂಲಕ ಹೇಳಿದ್ದೇನು?
ಹೌದು, ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಫೋಟೋಗಳು, ಸಂದೇಶಗಳು ಅಥವಾ ವೀಡಿಯೊಗಳನ್ನು ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸುವ ಮೂಲಕ ಪರಿಹಾರ ಪಡೆದುಕೊಳ್ಳಲು ಬೆಸ್ಕಾಂ ಸಲಹೆ ನೀಡಿದೆ.












Click it and Unblock the Notifications