Bengaluru Suburban Rail Project: ಕರ್ನಾಟಕ ಸರ್ಕಾರಕ್ಕೆ ಅಶ್ವಿನಿ ವೈಷ್ಣವ್ ಸೂಚನೆ ಏನು?-ಮಾಹಿತಿ, ವಿವರ
ಬೆಂಗಳೂರು, ಮಾರ್ಚ್, 15: ಬೆಂಗಳೂರು ಉಪನಗರ ರೈಲು ಯೋಜನೆಯು ಎಲ್ಲಿಗೆ ಬಂದಿದೆ. ಹಾಗೂ ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಯನ್ನು ವೇಗ ನೀಡಿ ಅತೀ ಬೇಗ ಮುಗಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ.

ಉಪನಗರ ರೈಲು ಯೋಜನೆಗೆ ವೇಗ ನೀಡಲು ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಕಂಪನಿಯಾಗಿರುವ ಕೆ-ರೈಡ್‌ನಲ್ಲಿ ಅಧಿಕಾರಿಗಳು ತಜ್ಞರನ್ನು ನೇಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
"ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ KRIDE ಕಂಪನಿಯು ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಜವಾಬ್ದಾರಿಯನ್ನು ಹೊತ್ತೊಕೊಂಡಿದ್ದು, ಇದು ಹೆಚ್ಚು ತಾಂತ್ರಿಕ ಪರಿಣತಿಯನ್ನು ಹೊಂದಿರುವವರನ್ನು ನೇಮಿಸಿಕೊಂಡಿಲ್ಲ. ಅಂತಹ ತಜ್ಞರನ್ನು ನೇಮಿಸಿಕೊಳ್ಳಲು ಕರ್ನಾಟಕ ಸರ್ಕಾರಕ್ಕೆ ವಿನಂತಿಸಿಕೊಳ್ಳುತ್ತೇನೆ. ಇದರಿಂದ ಯೋಜನೆಯ ಕೆಲಸ ವೇಗ ಪಡೆಯುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ," ಅಂತಾ ಪಿಟಿಐ ವರದಿ ಮಾಡಿದೆ.
"ಬೆಂಗಳೂರು ಉಪನಗರ ರೈಲ್ವೇ ಯೋಜನೆಯು ತುಂಬಾ ಬಹಳ ಪ್ರಮುಖವಾಗಿದೆ. ಆದರೆ ದುರದೃಷ್ಟವಶಾತ್ ಪ್ರಸ್ತುತ KRIDEಗೆ ಇರಬೇಕಾದ ಪರಿಣತಿ ತಜ್ಞರ ಕೊರತೆಯಿದೆ. ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬದಲಾವಣೆ ಮಾಡಿ. ಇ ಶ್ರೀಧರನ್ ಅವರಂತಹ ಜನರು ನಮಗೆ ಅಗತ್ಯವಿದೆ" ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಇತ್ತೀಚೆಗೆ ಯೋಜನೆ ಪೂರ್ಣಗೊಳಿಸುವ ದಿನಾಂಕವನ್ನು ಡಿಸೆಂಬರ್ 2025ರಿಂದ ಡಿಸೆಂಬರ್ 2027ಕ್ಕೆ ಮುಂದೂಡಿದೆ.
ಇನ್ನು ಈ ಯೋಜನೆ ಕುರಿತು ಮಾತನಾಡಿದ್ದ ಸಚಿವ ಎಂ.ಬಿ.ಪಾಟೀಲ್ ಅವರು, ಕಾಮಗಾರಿಯನ್ನು ವಿಳಂಬ ಮಾಡದಂತೆ ಕೆ-ರೈಡ್‍ಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದರು. ಈ ಯೋಜನೆಗೆ ಧನಸಹಾಯ ನೀಡಲು ಕರ್ನಾಟಕ ಸರ್ಕಾರವು ಜರ್ಮನಿಯ ಕೆಎಫ್ಡಬ್ಲ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನೊಂದಿಗೆ ಎಂಒಯುಗೆ ಸಹಿ ಹಾಕಿದೆ. ಬ್ಯಾಂಕ್ 20 ವರ್ಷಗಳ ಕಾಲ ವಾರ್ಷಿಕ ಶೇಕಡ 4ರಷ್ಟು ಬಡ್ಡಿ ದರದಲ್ಲಿ 4,561 ಕೋಟಿ ರೂಪಾಯಿ ಸಾಲ ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು.
ಇದು ಜರ್ಮನಿಯ ಕೆಎಫ್ಡಬ್ಲ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಕೆ-ರೈಡ್ ನಡುವಿನ ಪೂರಕ ಒಪ್ಪಂದ ಆಗಿದೆ. ನಂತರ ಡಿಸೆಂಬರ್ 15, 2023ರಂದು ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು KfW ನಡುವಿನ 4,561 ಕೋಟಿಯ ನೀಡಲು ಮೊದಲ ಒಪ್ಪಂದ ಆಗಿದೆ. ಸದ್ಯ ಚಿಕ್ಕಬಾಣಾವರದಿಂದ ಯಶವಂತಪುರದವರೆಗಿನ ಎರಡನೇ ಕಾರಿಡಾರ್ ಕಾಮಗಾರಿಗಳು ನಡೆಯುತ್ತಿವೆ. ಜೂನ್ 2025ರೊಳಗೆ ಪೂರ್ ಆಗುವ ನಿರೀಕ್ಷೆ ಇದೆ. ಯಶವಂತಪುರದಿಂದ ಬೆನ್ನಿಗಾನಿಹಳ್ಳಿ ಮಾರ್ಗವು 2026ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಕಾರಿಡಾರ್ 1 ಅನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಯಲಹಂಕದಿಂದ ದೇವನಹಳ್ಳಿವರೆಗೆ ಮೊದಲ ಭಾಗ ಡಿಸೆಂಬರ್ 2026ರ ವೇಳೆಗೆ ಪೂರ್ಣವಾಗುತ್ತದೆ. ಬೆಂಗಳೂರು ನಗರದಿಂದ ಯಲಹಂಕ ಡಿಸೆಂಬರ್ 2027ರೊಳಗೆ ಪೂರ್ಣ ಆಗಲಿದೆ ಎಂದು ತಿಳಿದುಬಂದಿದೆ.












Click it and Unblock the Notifications