Bengaluru Sub Urban Rail: 'ಕನಕ -ಮಲ್ಲಿಗೆ' ಕಾರಿಡಾರ್ ಯೋಜನೆ ಅಪ್ಡೇಟ್ಸ್, ಹಳಿ ಪೂರೈಕೆಗೆ 3 ಕಂಪನಿಗಳು ಒಲವು
ಬೆಂಗಳೂರು, ಫೆಬ್ರವರಿ 03: ಕೇಂದ್ರ ಬಜೆಟ್‌ನಲ್ಲಿ 350 ಕೋಟಿ ರೂಪಾಯಿ ಘೋಷಣೆ ಬೆನ್ನಲ್ಲೆ ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ (BSRP) ಒಂದಷ್ಟು ಬೆಳವಣಿಗೆಗಳು ನಡೆದಿವೆ. ಒಟ್ಟು ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಮಾಣವಾಗುತ್ತಿರುವ ಉಪನಗರ ರೈಲ್ವೆ ಪೈಕಿ ಎರಡು ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ನಲ್ಲಿ ಮೂರು ಸಂಸ್ಥೆಗಳು ಮೂಲಸೌಕರ್ಯ ಪೂರೈಕೆಗೆ ಮುಂದೆ ಬಂದಿವೆ.
ಈಗಾಗಲೇ ಗಡುವು ಮೀರಿರುವ ಸಬ್‌ಅರ್ಬನ್ ರೈಲು ಯೋಜನೆಗೆ ಶೀಘ್ರವೇ ವೇಗ ಸಿಗಲಿವೆ. ರೈಲಿನ ಹೆಡ್ ಹಾರ್ಡನ್ಡ್ ರೈಲ್ಸ್ ಒಪ್ಪಂದಕ್ಕೆ 3 ಬಿಡ್ಡರ್‌ಗಳು (ಸಂಸ್ಥೆಗಳು) ಟೆಂಡರ್‌ನಲ್ಲಿ ಪಾಲ್ಗೊಂಡಿವೆ. 02 ಫೆಬ್ರವರಿ ರಂದು ಕರ್ನಾಟಕದ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಟೆಂಡರ್ ಆಹ್ವಾನಿಸಿತು. ಇದು ತಾಂತ್ರಿಕ ಟೆಂಡರ್ ಆಗಿದ್ದು, ಒಟ್ಟು 149.35 ಕಿ.ಮೀ. ವ್ಯಾಪ್ತಿಯ ಯೋಜನೆಗೆ 19000 MT ಹೆಡ್-ಹಾರ್ಡನ್ಡ್ ರೈಲ್ (ವಿಶೇಷ ಹಳಿಗಳು) ಪೂರೈಸಲು ಮೂರು ಸಂಸ್ಥೆಗಳು ಒಲವು ವ್ಯಕ್ತಪಡಿಸಿವೆ.

ಆದ್ಯತೆಯ ಎರಡು ಕಾರಿಡಾರ್‌ಗಳು: ಹಳಿ ಪೂರೈಕೆಗೆ ಟೆಂಡರ್
ಟೆಂಡರ್‌ನಲ್ಲಿ ಆರ್ಸೆಲರ್‌ಮಿತ್ತಲ್ ಎಸ್ಪಾನಾ ಎಸ್.ಎ, ಮಿತ್ಸುಯಿ & ಕಂ., ಲಿಮಿಟೆಡ್, ಸಾರ್ಸ್ಟಾಲ್ ರೈಲ್ ಬಿಡ್ಡರ್‌ಗಳು ಪಾಲ್ಗೊಂಡಿದ್ದರು. ಕೆ-ರೈಡ್ ಸಂಸ್ಥೆಯು ಬೈಯ್ಯಪ್ಪನಹಳ್ಳಿ -ಚಿಕ್ಕಬಾಣಾವರ (23.86 ಕಿಮೀ) 'ಮಲ್ಲಿಗೆ' ಕಾರಿಡಾರ್, ಹೀಲಲಿಗೆ- ರಾಜನುಕುಂಟೆ ಸಂಪರ್ಕಿಸುವ 46.88 ಕಿ.ಮೀ. 'ಕನಕ' ಕಾರಿಡಾರ್ ಮಾರ್ಗದ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ.
ವಿಶೇಷ ಹಳಿಗಳು ಅಳವಡಿಕೆ, ಪ್ರಯೋಜನ
ಟೆಂಡರ್ ಮೂಲಕ ಒಪ್ಪಂದಂತೆ ವಿಶೇಷ ಹಳಿಗಳು ಪೂರೈಕೆಯಾದರೆ ಅವುಗಳನ್ನು ಮೊದಲು ಈ ಎರಡು ಕಾರಿಡಾರ್‌ಗಳಲ್ಲಿ ಜೋಡಣೆಗೆ ಮಾಡಲಾಗುತ್ತದೆ. ಭಾರತೀಯ ರೈಲ್ವೆ T-12-2009 ರ ಪ್ರಕಾರ ಅತ್ಯಧಿಕ ಸಾಮರ್ಥ್ಯದ, ಗುಣಮಟ್ಟದ ಹಳಿಗಳು 60E1 1080 ದರ್ಜೆ ಹೊಂದಿರಲಿವೆ. ಹೆಚ್ಚುವರಿ ಶಕ್ತಿ, ಕಡಿಮೆ ಒತ್ತಡ, ಟ್ರ್ಯಾಕ್-ಲೈಫ್ ಕಾಪಾಡುವ ಸಾಮರ್ಥ್ಯ ಹೊಂದಿವೆ. ನಿರ್ವಹಣೆಯು ಸರಳವಾಗಿದೆ. ಇಂತಹ ಹಳಿಗಳ ಪೂರೈಕೆ ಕಂಪನಿಗಳನ್ನು ಆಹ್ವಾನಿಸಲಾಗಿತ್ತು.

ಹಳಿಗೆ ಪೂರೈಕೆಗೆ ಕೆ-ರೈಡ್ ಟೆಂಡರ್‌ನಲ್ಲಿ ಭಾರತದ ಏಕೈಕ ಮತ್ತು ಖ್ಯಾತ ಕಂಪನಿ ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್ (JSPL) ಬಿಡ್ ಸಲ್ಲಿಸಿಲ್ಲ. ಇದು ಅನೇಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಸದ್ಯ ಪಾಲ್ಗೊಂಡು ಮೂರು ಕಂಪನಿಗಳನ ಬಿಡ್ ಅನ್ನು ತಾಂತ್ರಿಕ ಬಿಡ್ ಮೌಲ್ಯಮಾಪನಕ್ಕೆ ಕಳುಹಿಸಲಾಗಿದೆ.
ಮುಂದಿನ ಕೆಲವು ತಿಂಗಳಲ್ಲಿ ಒಂದು ಕಂಪನಿಗೆ ಅಂತಿಮವಾಗಿ ತಾಂತ್ರಿಕ ಅರ್ಹತೆ ನೀಡಲಾಗುತ್ತದೆ. ಆರ್ಥಿಕ ಸಮತೋಲನ, ಅನುಕೂಲತೆ ನೋಡಿಕೊಂಡು ಹಳಿ ಪೂರೈಕೆಗೆ ಆ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಕೆ-ರೈಡ್ ಮೂಲಗಳು ತಿಳಿಸಿವೆ.
ಸೋಲದೇವನಹಳ್ಳಿ ಡಿಪೋ ಸೇರಿದಂತೆ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ ಮಧ್ಯೆ ಕಾರಿಡಾರ್ 2ರ ಟ್ರ್ಯಾಕ್ ಕೆಲಸಕ್ಕಾಗಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 4 ಬಿಡ್‌ಗಳನ್ನು ಸ್ವೀಕರಿಸಲಾಗಿದೆ. ಆಗ 2250 MT 60E1880 ಗ್ರೇಡ್ ರೈಲ್‌ಗಳ ಪೂರೈಕೆಗೆ ಟೆಂಡರ್ ಆಹ್ವಾನಿಸಲಾಗಿತ್ತು. ಭಾರತದ ಏಕೈಕ ಮತ್ತು ಖ್ಯಾತ ಕಂಪನಿ ಜಿಂದಾಲ್ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ (JSPL) ಮಾತ್ರವೇ ಪಾಲ್ಗೊಂಡು ನವೆಂಬರ್ ನಲ್ಲಿ ಬಿಡ್ ಸಲ್ಲಿಸಿತ್ತು. ಈ ಕಾರಣದಿಂದಲೇ JSPL ಮತ್ತೊಮ್ಮೆ ಸ್ಪರ್ಧಿಸಲು ಮನಸ್ಸು ಮಾಡಿಲ್ಲ ಎನ್ನಲಾಗುತ್ತಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications