ಬೆಂಗಳೂರು ಬೀದಿ ನಾಯಿಗಳ ದತ್ತು ಯೋಜನೆಗೆ "ಮೋತಿ" ಎಂಬ ಹಿಂದಿ ಹೆಸರು, ಕನ್ನಡಿಗರ ವಿರೋಧ

Bengaluru: ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೀದಿ ನಾಯಿಗಳ ದತ್ತು ಯೋಜನೆ (ಸಮುದಾಯದ ಶ್ವಾನಗಳ) ಕಾರ್ಯಕ್ರಮಕ್ಕೆ ಮೇ 3ರ ಭಾನುವಾರ ಚಾಲನೆ ನೀಡಿದೆ. ಆದರೆ ಅದಕ್ಕೆ ಹಿಂದಿ ಸಂಸ್ಕೃತಿಯ ಅಥವಾ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಮೋತಿ ಎನ್ನುವ ಹೆಸರನ್ನು ಇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೋತಿ ನಂಬಿಕೆ ಮತ್ತು ಒಳಗೊಳ್ಳುವಿಕೆಯ ಆಂದೋಲನ (MOTI) - Movement of Trust & Inclusion ಎಂಬ ವಿಶಿಷ್ಟ ಸಹಜೀವನವನ್ನು ಉತ್ತೇಜಿಸುವ ಉಪಕ್ರಮ ಅಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಇಂದು ಕಬ್ಬನ್ ಪಾರ್ಕ್‌ನಲ್ಲಿ ಬೆಳಿಗ್ಗೆ 8 ಗಂಟೆಗೆ ಸಮುದಾಯದ ಶ್ವಾನಗಳನ್ನು ಸಾರ್ವಜನಿಕರು ದತ್ತು ಪಡೆಯಲು ಶ್ವಾನಗಳಲ್ಲಿ ಸಹಾನುಭೂತಿ ಮತ್ತು ಸಹಜೀವನವನ್ನು ಉತ್ತೇಜಿಸಲು ಆಯೋಜಿಸಲಾದ "ಮೋತಿ" ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.

Bengaluru

ಶ್ವಾನಗಳಿಗೆ ಬಿಸಿಲಿನ ಬೇಗೆಯಿಂದ ತಣಿಕೊಳ್ಳಲು ಬೌಲ್‌ನಲ್ಲಿ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಭಿವೃದ್ಧಿ ಹೆಚ್ಚುವರಿ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಸಮುದಾಯ ಶ್ವಾನಗಳಿಗೆ ಬಾಯಾರಿಕೆಯಾದಾಗ ಕೇಳಲು ಮನುಷ್ಯನಂತೆ ಕೇಳಲು ಬಾಯಿ ಇರುವುದಿಲ್ಲ ಆದ್ದರಿಂದ ತಮ್ಮ ತಮ್ಮ ಮನೆಯ ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶ್ವಾನಗಳಿಗೆ ಬಾಯಾರಿಕೆಯನ್ನು ನೀಗಿಸಲು ಒಂದು ಪಾತ್ರೆಯಲ್ಲಿ ನೀರನ್ನು ಇಡಲು ಕೋರಿದರು. ಕೇಂದ್ರ ನಗರ ಪಾಲಿಕೆಯ ವತಿಯಿಂದ ನೀಡಲಾಗುವ "ಮೋತಿ" ಶ್ವಾನಗಳನ್ನು ದತ್ತು ಪಡೆಯಲು ಅವರು ಮನವಿ ಮಾಡಿದರು.

ಕಂದಾಯ ಅಪರ ಆಯುಕ್ತರಾದ ಕೆ.ರಂಗನಾಥ್ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ಅವರಿಂದ (Dogathon) ಡಾಗ್ ಥಾನ್ ಚಾಲನೆ ನೀಡಿದರು. ಸಾರ್ವಜನಿಕರು, ಪ್ರಾಣಿ ಪ್ರಿಯರು, ಸಂಘ ಸಂಸ್ಥೆಗಳು, ಎನ್.ಜಿ.ಓ ಗಳು, ಮಕ್ಕಳು ಸಮುದಾಯದ ಶ್ವಾನಗಳೊಂದಿಗೆ ಸಂಕೇತಾತ್ಮಕ (ಡಾಗಥಾನ್) ಕಾಲ್ನಡಿಗೆ ಜಾಥಾವನ್ನು ಪಾಲ್ಗೊಂಡಿದ್ದರು.

ಪೈಂಟ್ ವಿಥ್ ಪಪ್ಪೀಸ್ ಹಾಗೂ ಮಕ್ಕಳಿಗೆ ಪ್ರಶಂಸೆ ಪತ್ರ

"ಮೋತಿ" ಕಾರ್ಯಕ್ರಮದ ಭಾಗವಾದ ಪೈಂಟ್ ವಿಥ್ ಪಪ್ಪೀಸ್ ಕಾರ್ಯಕ್ರಮಕ್ಕೆ ಕಂದಾಯ ಅಪರ ಆಯುಕ್ತರಾದ ರಂಗನಾಥ್.ಕೆ ಹಾಗೂ ವಲಯ ಜಂಟಿ ಆಯುಕ್ತರಾದ ಹೇಮಂತ್ ಶರಣ್ ರವರಿಂದ ಸಮುದಾಯ ಮರಿ ಶ್ವಾನಗಳ ಪಾದದ ಗುರುತುಗಳನ್ನು ಕಾಗದದ ಮೇಲೆ ಹಾಕಿಸುವುದರ ಮೂಲಕ ಮಕ್ಕಳಿಗೆ ಹಾಗೂ ಶ್ವಾನ ಪ್ರಿಯರಿಗೆ ಪೇಂಟಿಂಗ್ ಚಟುವಟಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು ನಂತರ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.

ಲಸಿಕೆ ಹಾಗೂ ಕಿಟ್ ವಿತರಣೆ: ಪ್ರೀತಿಯ ಮನೆಯನ್ನು ಹುಡುಕುತ್ತಿರುವ ಸಮುದಾಯದ 4 ಶ್ವಾನಗಳನ್ನು (Indie Dogs) ಸಾರ್ವಜನಿಕರು ದತ್ತು ಪಡೆದುಕೊಂಡರು. ಈ ಸಂದರ್ಭದಲ್ಲಿ ಅಗತ್ಯ ಲಸಿಕೆಗಳನ್ನು ನೀಡಿ, ಶ್ವಾನಗಳಿಗೆ ಆಹಾರ ಕಿಟ್ ಕುತ್ತಿಗೆ ಪಟ್ಟಿ, ಚೈನ್, ವಾಟರ್ ಬೌಲ್ ಒಳಗೊಂಡ ಕಿಟ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಶು ಪಾಲನೆ ಸಹಾಯಕ ನಿರ್ದೇಶಕ ಬಸವರಾಜೇಂದ್ರ ಬಿರಾದಾರ, ಹೆಚ್.ಓ.ಡಿ. ವೀಣಾ, ಇತರೆ ನಗರ ಪಾಲಿಕೆಗಳ ಸಹಾಯಕ ನಿರ್ದೇಶಕರು, ಎನ್.ಜಿಒಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

Bengaluru:ಕನ್ನಡಿಗರ ವಿರೋಧ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೀದಿ ನಾಯಿಗಳ ದತ್ತು ಯೋಜನೆ (ಸಮುದಾಯದ ಶ್ವಾನಗಳ) ಕಾರ್ಯಕ್ರಮಕ್ಕೆ ಮೇ 3ರ ಭಾನುವಾರ ಚಾಲನೆ ನೀಡಿದೆ. ಆದರೆ ಅದಕ್ಕೆ ಹಿಂದಿ ಸಂಸ್ಕೃತಿಯ ಅಥವಾ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಮೋತಿ ಎನ್ನುವ ಹೆಸರನ್ನು ಇರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆಯೂ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈ ರೀತಿಯ ತಪ್ಪುಗಳನ್ನು ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+